

ನವದೆಹಲಿ: ಯುವಜನರಲ್ಲಿ ಯಾವುದಾದರೂ ಒಂದು ವಿಷಯದ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ಶುರುವಾಗುವುದು ಹೊಸ ಮಾತೇನಲ್ಲ.
ಅದರಲ್ಲಿಯೂ ಇತ್ತೀಚಿನ ದಿನಗಳಲ್ಲಿ, ಹಳೆ ಕಾಲದ ಉಡುಗೆತೊಡುಗೆಗಳು, ಆಚಾರ-ವಿಚಾರಗಳು ಈಗಿನ ಟ್ರೆಂಡಿಂಗ್ ಆಗುತ್ತಿರುವ ಸಾಕಷ್ಟು ಉದಾಹರಣೆಗಳಿವೆ. ಅವುಗಳಲ್ಲಿ ಒಂದು ಸೀರೆ ಉಡುವುದು.
ಕೆಲ ತಿಂಗಳ ಹಿಂದೆ ಫೇಸ್‌ಬುಕ್‌ನಲ್ಲಿ ಶುರುವಾಗಿದ್ದ ಈ ಟ್ರೆಂಡ್ ಇದೀಗ #SareeTwitter ಹ್ಯಾಷ್‌ಟ್ಯಾಗ್‌ನೊಂದಿಗೆ ಟ್ವಿಟರ್‌ನಲ್ಲಿ ಶುರುವಾಗಿದೆ. ಭಾರತದ ಸಂಪ್ರದಾಯದ ಉಡುಗೆ ಎನಿಸಿರುವ ಸೀರೆಯ ಮೋಡಿಗೆ ವಿದೇಶಿಗರು ಕೂಡ ಬಿದ್ದಿರುವುದು ಹೊಸ ವಿಷಯವೇನಲ್ಲ. ಭಾರತ ಎಂದರೆ ಸೀರೆ ಎನ್ನುವಂಥ ಕಲ್ಪನೆ ಇದ್ದು, ಇದಕ್ಕಿರುವ ಗೌರವವೂ ಅಷ್ಟೇ ದೊಡ್ಡದು.
ವಿವಿಧ ದೇಶಗಳ ಲಲನೆಯರು ಸೀರೆಯನ್ನು ಉಟ್ಟು ತಮ್ಮ ಟ್ವಿಟರ್‌ಖಾತೆಯಲ್ಲಿ ಅದನ್ನು ಅಪ್‌ಲೋಡ್ ಮಾಡುತ್ತಿದ್ದಾರೆ. ಕೆಲವರು ವಿಜ್ಞಾನ, ಬಾಹ್ಯಾಕಾಶ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅಂದಿನ ಕಾಲದಲ್ಲಿಯೇ ಧಾಪುಗಾಲು ಇಟ್ಟು, ಅಪೂರ್ವ ಕೊಡುಗೆ ನೀಡಿರುವ ಮಹಿಳೆಯರು, ತಮ್ಮ ತಮ್ಮ ಕಚೇರಿಗೆ ಸೀರೆಯಲ್ಲಿಯೇ ಹೋಗುತ್ತಿರುವ ಕುರಿತಾಗಿಯೂ ಕೆಲವರು ಟ್ವಿಟರ್‌ನಲ್ಲಿ ದಾಖಲಿಸಿದ್ದಾರೆ.
ಇನ್ನು ಕೆಲವರು ತಮ್ಮ ಅಮ್ಮನ ಫೋಟೊ, ಮತ್ತೆ ಕೆಲವರು ಸೀರೆ ಉಟ್ಟ ಚಿಕ್ಕಮಕ್ಕಳ ಫೋಟೋ ಕೂಡ ಶೇರ್ ಮಾಡಿದ್ದಾರೆ.
ಅವುಗಳ ಝಲಕ್ ಇಲ್ಲಿದೆ...