

ನವದೆಹಲಿ: ಪ್ರತಿದಿನ ಅಂತರ್ಜಾಲದಲ್ಲಿ ಸಾಕಷ್ಟು ವಿಡಿಯೋಗಳು ವೈರಲ್ ಆಗುತ್ತಿವೆ. ಅವುಗಳಲ್ಲಿ ಕೆಲವು ಜನರನ್ನು ಅಚ್ಚರಿಗೊಳಿಸುತ್ತವೆ. ಇತ್ತೀಚೆಗಷ್ಟೇ ಅಂಥದ್ದೇ ವಿಡಿಯೋವೊಂದು ನೆಟ್ಟಿಗರ ಗಮನ ಸೆಳೆದಿದೆ. ಅದರಲ್ಲಿ ಮಹಿಳೆಯೊಬ್ಬರು ಜಿಮ್ನಲ್ಲಿ 120 ಕೆಜಿ ಭಾರ ಎತ್ತುತ್ತಿರುವುದನ್ನು ಕಾಣಬಹುದು. ಅಚ್ಚರಿ ಸಂಗತಿ ಏನೆಂದರೆ, ಆ ಮಹಿಳೆ ಸೀರೆ ( Saree Woman in Gym ) ಉಟ್ಟುಕೊಂಡು ಭಾರ ಎತ್ತಿದ್ದಾರೆ. ಸದ್ಯ ಈ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ.
19 ಸೆಕೆಂಡುಗಳ ವಿಡಿಯೋದಲ್ಲಿ ಮಹಿಳೆ ಮೊದಲು ಭಾರಿ ತೂಕವನ್ನು ಎತ್ತಲು ತಯಾರಿ ನಡೆಸುತ್ತಿರುವುದನ್ನು ಕಾಣಬಹುದು. ಆಕೆ ಹಸಿರು ಚಿಫೋನ್ ಸೀರೆಯನ್ನು ಉಟ್ಟಿದ್ದಾಳೆ. ತೂಕ ಎತ್ತುವ ಮುನ್ನ ಸೀರೆಯನ್ನು ಸೆರಗನ್ನು ಎತ್ತಿ ತನ್ನ ಸೊಂಟದ ಸುತ್ತಲೂ ಕಟ್ಟಿಕೊಳ್ಳುತ್ತಾಳೆ. ಅಲ್ಲದೆ, ಸೊಂಟಕ್ಕೆ ಬೆಲ್ಟ್ ಸಹ ಕಟ್ಟಿಕೊಳ್ಳುತ್ತಾಳೆ. ಇದಾದ ಬಳಿಕ ಅನುಭವಿ ವೇಟ್ ಲಿಫ್ಟರ್ನಂತೆ 120 ಕೆಜಿಯನ್ನು ಸುಲಭವಾಗಿ ಎತ್ತುತ್ತಾಳೆ.
ಅಂದಹಾಗೆ ವಿಡಿಯೋದಲ್ಲಿ ಜಿಮ್ ಅನ್ನು ತ್ರಿವರ್ಣ ಬಲೂನ್ಗಳಿಂದ ಸುಂದರವಾಗಿ ಅಲಂಕರಿಸಲಾಗಿದೆ. ವಿಡಿಯೋ ಹಿನ್ನೆಲೆಯಲ್ಲಿ ಹ್ಯಾಪಿ ನ್ಯೂ ಇಯರ್ ಚಿತ್ರದ ‘ಇಂಡಿಯಾ ವೇಲ್’ ಹಾಡು ಪ್ಲೇ ಆಗುತ್ತಿರುತ್ತದೆ. ಈ ವಿಡಿಯೋವನ್ನು ವರ್ಷನಾ ರಾಣಾ ಹೆಸರಿನ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದ್ದು, ಈವರೆಗೆ 42 ಮಿಲಿಯನ್ಗೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ. ಅಲ್ಲದೆ, 23 ಲಕ್ಷಕ್ಕೂ ಅಧಿಕ ಮಂದಿ ಲೈಕ್ಸ್ ಮಾಡಿದ್ದಾರೆ.
ವಿಡಿಯೋದ ಕಾಮೆಂಟ್ ವಿಭಾಗದಲ್ಲಿ ನೆಟ್ಟಿಗರು 120 ಕೆಜಿ ತೂಕ ಎತ್ತಿದ್ದಕ್ಕಾಗಿ ಮಹಿಳೆಯನ್ನು ಹೊಗಳಿದ್ದಾರೆ. 120 ಕೆಜಿ ಎತ್ತುವುದು ತಮಾಷೆಯಲ್ಲ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. (ಏಜೆನ್ಸೀಸ್)