ವಿಶ್ವದ 8 ಅದ್ಭುತಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಸರ್ದಾರ್​ ವಲ್ಲಭಬಾಯ್​ ಪಟೇಲ್​ ಪ್ರತಿಮೆ

statue-of-unity JAN 14 2020
Published on

ನವದೆಹಲಿ: ವಿಶ್ವದ ಅತೀ ಎತ್ತರದ ಸರ್ದಾರ್​ ವಲ್ಲಭಬಾಯ್​ ಪಟೇಲ್​ ಅವರ ಪ್ರತಿಮೆ ಈಗ ವಿಶ್ವದ 8 ಅದ್ಭುತಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.

ರಾಷ್ಟ್ರದ ಮೊದಲ ಗೃಹ ಸಚಿವರಾದ ವಲ್ಲಭಬಾಯ್​ ಪಟೇಲ್​ ಅವರ 182 ಮೀಟರ್​ ಎತ್ತರದ ಪ್ರತಿಮೆಯನ್ನು ಶಾಂಘೈ ಸಹಕಾರ ಸಂಸ್ಥೆ ವಿಶ್ವದ 8 ಅದ್ಭುತಗಳ ಪಟ್ಟಿಗೆ ಸೇರಿಸಿದೆ ಎಂದು ವಿದೇಶಾಂಗ ಸಚಿವ ಎಸ್​.ಜೈಶಂಕರ್​ ತಿಳಿಸಿದ್ದಾರೆ.

ಗುಜರಾತ್​ನ ನರ್ಮದಾ ಕಣಿವೆಯಲ್ಲಿ ಈ ಬೃಹತ್​ ಪ್ರತಿಮೆ ನಿರ್ಮಾಣವಾಗಿದೆ. ಪಟೇಲ್ ಅವರ 143 ನೇ ಜನ್ಮ ದಿನಾಚರಣೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 2018ರ ಅಕ್ಟೋಬರ್​ನಲ್ಲಿ ಪ್ರತಿಮೆಯನ್ನು ಲೋಕಾರ್ಪಣೆಗೊಳಿಸಿದ್ದರು.

ಸರ್ದಾರ್​ ವಲ್ಲಭಬಾಯ್​ ಪಟೇಲ್​ ಅವರ ಪ್ರತಿಮೆಯನ್ನು ವಿಶ್ವದ 8 ಅದ್ಭುತಗಳಲ್ಲಿ ಸೇರಿಸಿರುವುದರಿಂದ ಪ್ರವಾಸೋದ್ಯಮ ಚಟುವಟಿಕೆ ಗರಿಗೆದರಲಿದೆ. ಪ್ರತಿಮೆಯನ್ನು ಪಟ್ಟಿಗೆ ಸೇರಿಸಿದ ಶಾಂಘೈ ಸಹಕಾರ ಸಂಸ್ಥೆ ಕ್ರಮವನ್ನು ಅವರು ಶ್ಲಾಘಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net