ಐಡಿ ಕಾರ್ಡ್​ನಲ್ಲಿ ಇರೋ ಫೋಟೋನೇ ಬೇರೆ, ಎದುರಿರೋ ವ್ಯಕ್ತಿನೇ ಬೇರೆ: ಬಾಲಿವುಡ್​ ನಟಿ ಅಮೆರಿಕದ ವಿಮಾನ ನಿಲ್ದಾಣದ ಅಧಿಕಾರಿಗಳ ಕಣ್ಣಿಗೆ ಅನುಮಾನಾಸ್ಪದವಾಗಿ ಕಾಣೋದಕ್ಕೆ ಕಾರಣವೇನು?

sara ali khan
Published on

ಮುಂಬೈ: ಬಾಲಿವುಡ್​ನ ಹೆಸರಾಂತ ನಟಿಯೊಬ್ಬರು ತಮ್ಮ ಜೀವನದಲ್ಲಿ ಆದಂತಹ ಅತ್ಯಂತ ಹಾಸ್ಯಾಸ್ಪದ ಮತ್ತು ಮುಜುಗರವುಂಟು ಮಾಡಿದ ಘಟನೆಯನ್ನು ಹಂಚಿಕೊಂಡಿದ್ದಾರೆ. ತೂಕ ಇಳಿಸಿಕೊಂಡ ನಟಿಯನ್ನು ವಿಮಾನ ನಿಲ್ದಾಣದಲ್ಲಿ ಹೇಗೆ ಅನುಮಾನಾಸ್ಪದವಾಗಿ ಕಂಡರು ಎನ್ನುವುದನ್ನು ಅವರು ಹೇಳಿಕೊಂಡಿದ್ದಾರೆ.

ನಟಿ ಸಾರಾ ಅಲಿಖಾನ್​ ನಿಮಗೆಲ್ಲರಿಗೂ ಗೊತ್ತಿರುತ್ತೆ. ಕೇದರ್​ನಾಥ್​ ಸಿನಿಮಾ ಮೂಲಕ ಬಾಲಿವುಡ್​ ಪ್ರವೇಶಿಸಿರುವ ಈ ನಟಿ ಬಾಲಿವುಡ್​ಗೆ ಬರುವುದಕ್ಕೆಂದೇ ತಮ್ಮ ತೂಕವನ್ನು ಇಳಿಸಿಕೊಂಡಿದ್ದಾರೆ. ಬರೋಬ್ಬರಿ 96ಕೆ.ಜಿ ತೂಕವಿದ್ದ ಈಕೆ 26 ಕೆ.ಜಿ. ಇಳಿಸಿಕೊಂಡ ನಂತರ ಕೇದರ್​ನಾಥ್​ನಲ್ಲಿ ಬಣ್ಣ ಹಚ್ಚಿದ್ದರು. ನ್ಯೂಯಾರ್ಕ್​ನ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮುಗಿಸಿರುವ 24 ವರ್ಷದ ಬೆಡಗಿಯ ಬಾಲ್ಯ ಮತ್ತು ಶಾಲಾ ಕಾಲೇಜು ದಿನದ ಫೋಟೋ ನೋಡಿದರೆ ನೀವು ಅದು ಸಾರಾ ಅಲಿಖಾನ್​ ಎಂದು ಗುರುತೂ ಸಹ ಹಿಡಿಯಲಾಗುವುದಿಲ್ಲ. ಅಷ್ಟು ದಪ್ಪವಾಗಿ ಕಾಣುತ್ತಾರೆ ಈ ನಟಿ.

ತೂಕ ಇಳಿಸಿಕೊಂಡ ನಟಿಯನ್ನು ಒಮ್ಮೆ ಅಮೆರಿಕದ ವಿಮಾನ ನಿಲ್ದಾಣದ ಅಧಿಕಾರಿಗಳು ಅನುಮಾನಾಸ್ಪದವಾಗಿ ನೋಡಿದ್ದರಂತೆ. ಗುರುತಿನ ಚೀಟಿಯಲ್ಲಿರುವ ಫೋಟೋಕ್ಕೂ ಎದುರು ನಿಂತಿರುವ ವ್ಯಕ್ತಿಗೂ ತುಂಬಾ ವ್ಯತ್ಯಾಸವಿದ್ದ ಕಾರಣ ಸಾಕಷ್ಟು ತನಿಖೆ ಮಾಡಿದ್ದರಂತೆ. ಬೇರೆ ಹಲವು ಫೋಟೋಗಳನ್ನು ನೋಡಿ ಪರಿಶೀಲಿಸಿದ ನಂತರವೇ ಅವರು ಆಕೆಗೆ ಪ್ರಯಾಣ ಮಾಡಲು ಅನುವು ಮಾಡಿಕೊಟ್ಟಿದ್ದರಂತೆ.

ಈ ವಿಚಾರವನ್ನು ನಟಿ ಇತ್ತೀಚೆಗೆ ಖಾಸಗಿ ವಾಹಿನಿಯ ಶೋ ಒಂದರಲ್ಲಿ ಹಂಚಿಕೊಂಡು ನಕ್ಕಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net