ಬಾಲಿವುಡ್​​​ ಬೆಡಗಿಯರ ಫನ್ನಿ ಜಿಮ್​ ವರ್ಕೌಟ್​​​​; ಜಿಮ್​ ಮಾಡುತ್ತಿದ್ದೀರಾ ಅಥವಾ ಮಕ್ಕಳಂತೆ ಆಟವಾಡುತ್ತಿದ್ದೀರಾ ಎಂದ ಫ್ಯಾನ್ಸ್.!

್funny
Published on

ಬಾಲಿವುಡ್ ತಾರೆ ಸಾರಾ ಅಲಿ ಖಾನ್ ಕೇವಲ ಪ್ರತಿಭಾವಂತ ನಟಿ ಮಾತ್ರವಲ್ಲದೆ ಫಿಟ್‌ನೆಸ್ ಉತ್ಸಾಹಿಯೂ ಆಗಿದ್ದು, ರಜೆಯಲ್ಲಿದ್ದಾಗಲೂ ತನ್ನ ವ್ಯಾಯಾಮದ ದಿನಚರಿಯಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ಅನನ್ಯಾ ಪಾಂಡೆ ಕೂಡಾ ಅದೇ ರೀತಿ ವರ್ಕೌಟ್​​​ ಮತ್ತು ಫಿಟ್ನೆಸ್​​​ಗೆಂದೇ ಸಾಕಷ್ಟು ಸಮಯವನ್ನ ಮೀಸಲಿಡುತ್ತಾರೆ.


ಸಾರಾ ತನ್ನ ದಿನಚರಿಯನ್ನು ಸ್ಕ್ವಾಟ್‌ಗಳೊಂದಿಗೆ ಪ್ರಾರಂಭಿಸುತ್ತಾರೆ. ಇದು ದೇದಲ್ಲಿ ತೊಡೆಗಳು, ಗ್ಲುಟ್ಸ್ ಸೇರಿದಂತೆ ದೇಹದ ಕೆಳಭಾಗದ ಸ್ನಾಯುಗಳನ್ನುಬ ಬಲಿಷ್ಠವಾಗಿಸಿರುತ್ತದೆ. ಅಂತೆಯೇ ಅನನ್ಯಾ ಕೂಡಾ ಸಾಕಷ್ಟು ವಿಭಿನ್ನ ರೀತಿಯ ಕಸರತ್ತು ಮಾಡಿ ತಮ್ಮ ದೇಹವನ್ನ ಫಿಟ್​ ಆಗಿಟ್ಟುಕೊಂಡಿದ್ದಾರೆ.


ಇಬ್ಬರೂ ನಟಿಯರೂ ಇನ್ಸ್​​ಟಾಗ್ರಾಂನಲ್ಲಿ ತಮ್ಮ ಸ್ಟೈಲಿಶ್​ ಫೋಟೋಶೂಟ್​​ ಮೂಲಕ ಅಭಿಮಾನಿಗಳನ್ನ ಖುಷಿ ಪಡಿಸುತ್ತಾರೆ. ಇದೀಗ ಸಾರಾ ಅಲಿ ಖಾನ್ ಮತ್ತು ಅನನ್ಯಾ ಪಾಂಡೆ ಜತೆಯಾಗಿ ವರ್ಕೌಟ್​​ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​​​ ಆಗುತ್ತಿದೆ.


ಈ ವಿಡಿಯೋದಲ್ಲಿ ಇವರಿಬ್ಬರ ಪ್ರೆಂಡ್​​​ಶಿಪನ್ನ ಕೂಡಾ ನೋಡಬಹುದು. ಇಬ್ಬರೂ ಪುಟ್ಟ ಮಕ್ಕಳಂತೆ ಆಟವಾಡುತ್ತಾ ವರ್ಕೌಟ್​​ ಎಂಜಾಯ್​ ಮಾಡಿದ್ದಾರೆ. ಇಬ್ಬರೂ ವರ್ಕೌಟ್​​ ಮಾಡುತ್ತಾ ಒಬ್ಬರೊನ್ನೊಬ್ಬರು ಮೋಟಿವೇಟ್​​​​ ಮಾಡಿದ್ದಾರೆ.


ಪಿಲೇಟ್ಸ್​​​​ ಟ್ರೈನರ್ ನಮ್ರತಾ ಪುರೋಹಿತ್​ ಸದ್ಯ ಇವರಿಬ್ಬರ ವಿಡಿಯೋವನ್ನ ಹಂಚಿಕೊಂಡಿದ್ದು, ಅದರಲ್ಲಿ ಆಟವಾಡುತ್ತಾ ಅಂದ್ರೆ ಎಲ್ಲಿ ಬಣ್ಣ ಹೊತ್ತಿದೆಯೋ ಆ ಬಲ್ಬನ್ನ ಓಡಿ ಹೋಗಿ ಮುಟ್ಟಬೇಕುನ ಮತ್ತೆ ಅವರ ಜಾಗಕ್ಕೆ ಹಿಂದಿರುಗಿಹೋಗಬೇಕು, ಇನ್ನು ಪುಶ್​​ ಅಪ್​​ ಪೊಸಿಶನ್​​​ನಲ್ಲಿ ನಿಂತುಕೊಂಡೇ ಬಣ್ಣ ಹೊತ್ತಿದ ಬಲ್ಬನ್ನ ಮುಟ್ಟಬೇಕು. ಈ ರೀತಿಯಾದ ವ್ಯಾಯಾಮಗಳನ್ನ ಇರಿಸಲಾಗಿದ್ದು, ಇಬ್ಬರೂ ಸಝಖತ್ತಾಗಿ ಎಂಜಾಯ್​​ ಮಾಡಿದ್ದಾರೆ.


ವಿಡಿಯೋದಲ್ಲಿ ಇಬ್ಬರೂ ಅವಳಿ ಜವಳಿ ಅಂದ್ರೆ ಒಂದೇ ರೀತಿಯ ಜಿಮ್​ ವೇರ್​​ ಧರಿಸಿದ್ದು ಸಾರಾ ಗ್ರೇ ಮತ್ತು ಅನನ್ಯಾ ಬ್ಲಾಕ್​​​​​ ಕಲರ್​​​ ಜಿಮ್​ ವೇರ್​​ ಹಾಕಿಕೊಂಡಿದ್ದಾರೆ. ಇಬ್ಬರೂ ವರ್ಕೌಟ್​ಗಾಗಿಯೇ ವಾಚ್​​ ಧರಿಸಿದ್ದಾರೆ.


ಇವರಿಬ್ಬರೂ ಹೀಗೆ ಬಲ್ಬ್​​​ ಆಫ್​ ಮಾಡೋಕೆ ಓಡುತ್ತಿರುವುದು ತುಂಬಾನೆ ಫನ್ನಿಯಾಗಿ ಗೋಚರಿಸಿದ್ದು, ಸದ್ಯ ನೆಟ್ಟಿಗರು ಇವರಿಬ್ಬ ಸ್ನೇಹ ಮತ್ತು ಪ್ರೀತಿಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net