ಮೇಕಪ್​ ಇಲ್ಲದೆ ಸಿಂಪಲ್​​​ ಲುಕ್​​ನಲ್ಲಿ ಕಾಣಿಸಿಕೊಂಡ ಕಾಂತಾರ ಬೆಡಗಿ ಸಪ್ತಮಿ ಗೌಡ..!

sapthami
Published on

ಡಿವೈನ್ ಹಿಟ್ ಕಾಂತಾರ ಚಿತ್ರದಲ್ಲಿ ಲೀಲಾ ಪಾತ್ರದ ಮೂಲಕ ಸಪ್ತಮಿ ಗೌಡ ಪ್ಯಾನ್ ಇಂಡಿಯಾ ಮಟ್ಟಕ್ಕೆ ಎಲ್ಲರಿಗೂ ಪರಿಚಯ ಆಗಿದ್ದಾರೆ. ಅದಕ್ಕೂ ಮೊದಲು ಬಂದ ಪಾಪ್‌ಕಾರ್ನ್ ಮಂಕಿ ಟೈಗರ್ ಚಿತ್ರದಲ್ಲೂ ಸಪ್ತಮಿ ಗೌಡ ಇದ್ದರು. ಆದರೆ ಕಾಂತಾರ ಕೊಟ್ಟ ಖ್ಯಾತಿ ದೊಡ್ಡಮಟ್ಟದಲ್ಲಿಯೇ ಇದೆ.


ಇದೀಗ ಸಪ್ತಮಿ ನೋ ಮೇಕಪ್​ ಲುಕ್​ನ ಫೋಟೋಗಳನ್ನ ತಮ್ಮ ಇನ್ಸ್​​ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಈ ಫೋಟೋಗಳಳು ಸಾಮಾಜಿಕ ಜಾಲತಾಣದಲ್ಲಿ ಸಖತ್​​​ ವೈರಲ್​​ ಆಗಿವೆ.


ಕಾಳಿ ಸಿನಿಮಾ ಅಲ್ಲದೇ ಇನ್ನೂ ಒಂದು ಚಿತ್ರಕ್ಕೂ ಸಪ್ತಮಿ ಗೌಡ ಆಯ್ಕೆ ಆಗಿದ್ದಾರೆ.
ಆ ಸಿನಿಮಾ ಕೂಡ ಹೊಂಬಾಳೆ ಪ್ರೋಡಕ್ಷನ್ ಹೌಸ್‌ನ ಸಿನಿಮಾನೇ ಆಗಿದೆ. ಹೌದು, ದೊಡ್ಮನೆ ಯುವ ರಾಜ್‌ಕುಮಾರ್ ಅಭಿನಯದ "ಯುವ" ಚಿತ್ರದಲ್ಲಿ ಸಪ್ತಮಿ ಗೌಡ ಅಭಿನಯಿಸುತ್ತಿದ್ದಾರೆ.


ಸಪ್ತಮಿ ಗೌಡ ಸಿನಿಮಾ ಜೀವನದಲ್ಲಿ ಹೊಸ ರೀತಿಯ ಚಿತ್ರಗಳು ಬಂದಿವೆ. ಆಯಾ ಸಿನಿಮಾಗಳಲ್ಲಿ ಸಪ್ತಮಿ ಗೌಡ ತಮ್ಮದೇ ಒಂದು ಹೊಸ ಛಾಪು ಮೂಡಿಸಲು ಮುಂದಾಗಿದ್ದಾರೆ.
ಒಂದೇ ರೀತಿ ಕಥೆಯ ಸಿನಿಮಾಗಳನ್ನ ನಾನು ಮಾಡೋದಿಲ್ಲ ಅಂತಲೇ ಸಪ್ತಮಿ ಹೇಳಿದ್ದರು.


ಕಾಂತಾರ ಬಳಿಕ ಸಪ್ತಮಿ ಗೌಡ ಎರಡು ಸಿನಿಮಾಗಳನ್ನ ಒಪ್ಪಿದ್ದಾರೆ. ಆ ಸಿನಿಮಾಗಳಲ್ಲಿ ಒಂದು ಕಾಳಿ ಇನ್ನೂ ಒಂದು ಯುವ ಸಿನಿಮಾ ಅನ್ನೋದು ಸದ್ಯದ ಮಾಹಿತಿ ಆಗಿದೆ.


ಇನ್ನುಳಿದಂತೆ ಕಾಂತಾರ ಬೆಡಗಿ ಸಪ್ತಮಿ ಗೌಡಗೆ ಪ್ಯಾನ್​​​ ಬೇಸ್​​ ಹೆಚ್ಚಿದ್ದು, ಸದ್ಯ ಅಭಿಮಾನಿಗಳು ಮೇಕಪ್​​​ ಇಲ್ಲದೆಯೂ ಸಪ್ತಮಿ ಮಿಂಚಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net