

ಬೆಂಗಳೂರು: 'ಎಲ್ಲರ ಜಾತಕ ನನ್ನ ಕೈಯಲ್ಲಿದೆ ಹುಷಾರ್! ಏನ್ ಮಾಡಬೇಕು ಅಂತ ನನಗೆ ಗೊತ್ತು...' ಇದು ಪೊಲೀಸರಿಗೆ ಸ್ಯಾಂಟ್ರೋ ರವಿ ಅಲಿಯಾಸ್ ಮಂಜುನಾಥ್ ಅವಾಜ್ ಹಾಕಿರೋ ಪರಿ.
ಪತ್ನಿಗೆ ವಂಚನೆ, ಅತ್ಯಾಚಾರ ಪ್ರಕರಣದ ಆರೋಪಿ, ಪೊಲೀಸ್ ಅಧಿಕಾರಿಗಳ ವರ್ಗಾವಣೆ ದಂಧೆಯ ಕಿಂಗ್ಪಿನ್ ಸ್ಯಾಂಟ್ರೋ ರವಿಯನ್ನ ನಿನ್ನೆ(ಜ.13) ಗುಜರಾತ್ನ ಅಹಮದಾಬಾದ್ನಲ್ಲಿ ಕರ್ನಾಟಕ ಪೊಲೀಸರು ಬಂಧಿಸಿದ್ದಾರೆ. ನಿನ್ನೆ ತಡರಾತ್ರಿಯೇ ಮೈಸೂರಿಗೆ ಕರೆತಂದಾಗ 'ಪ್ರತಿಯೊಬ್ಬರ ಜಾತಕ ನನ್ನ ಬಳಿ ಇದೆ. ನಂಗೆ ಗೊತ್ತಿದೆ ಏನ್ ಮಾಡ್ಬೇಕು' ಅಂತ ಅವಾಜ್ ಹಾಕಿದ್ದಾನೆ.
ಸ್ಯಾಂಟ್ರೋ ರವಿ ಅದೇನ್ ಜಾತಕ ಇಟ್ಕೊಂಡಿದ್ದಾನೊ ಗೊತ್ತಿಲ್ಲ. ಇದ್ಯಾವುದಕ್ಕೂ ಜಗ್ಗದ ಮೈಸೂರು ಪೊಲೀಸರು ವಿಜಯನಗರ ಠಾಣೆಯಲ್ಲಿ ವಿಚಾರಣೆ ಮುಂದುವರಿಸಿದ್ದಾರೆ.