

ಬೆಂಗಳೂರು: ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್ 10ನೇ ಆವೃತ್ತಿ ಅದ್ದೂರಿ ಓಪನಿಂಗ್ ಪಡೆದುಕೊಂಡಿದ್ದು, ದೊಡ್ಡ ದೊಡ್ಡ ಮಂದಿ ತಮ್ಮ ಅಸಲಿ ಆಟಕ್ಕೆ ಸಜ್ಜಾಗಿರುವುದು ಕಂಡುಬಂದಿದೆ. ಮೊದಲ ದಿನವೇ ಮನೆಯಲ್ಲಿ ಒಂದಷ್ಟು ಮಾತಿನ ಚಕಮಕಿ ನಡೆದಿದ್ದು, ಕಣ್ಣೀರಿನ ಕಥೆಗಳು ಕೂಡ ಪ್ರಾರಂಭವಾಗಿದೆ.
ಇಂದಿನ ಸಂಚಿಕೆಯಲ್ಲಿ ಬಿಗ್‌ಬಾಸ್ ಮನೆಯೊಳಗೆ ಭೂತದ ಕಥೆ ಪ್ರಾರಂಭವಾಗಿದ್ದು, ಮನೆಯೊಳಗೆ ಕುಳಿತು ದೆವ್ವದ ಬಂಗ್ಲೆ ಬಗ್ಗೆ ಮಾತುಕತೆಗಳು ಕೂಡ ಜೋರಾಗಿವೆ. ಈ ಮಧ್ಯೆ ಮನೆ ಮಂದಿಯನ್ನು ಕೇವಲ ತನ್ನ ಮಾತಿನಲ್ಲೇ ನಗೆಗಡಲಲ್ಲಿ ತೇಲಿಸುವ ಕಲೆಯನ್ನು ಹೊಂದಿರುವ ಸಂತೋಷ್ ಕುಮಾರ್ ಅಲಿಯಾಸ್ ತುಕಾಲಿ ಸಂತು ಇದೀಗ ವಿಭಿನ್ನ ಪ್ರಯತ್ನವೊಂದನ್ನು ಮಾಡಿ ಜಯಭೇರಿಯಾಗಿದ್ದಾರೆ.
ಮನೆಯೊಳಗಿನ ಸದಸ್ಯರೊಡನೆ ಮಾತಿನ ಮುಖೇನ ಹಾಸ್ಯ ಚಟಾಕಿ ಸಿಡಿಸುವ ತುಕಾಲಿ ಸಂತು, ಬಿಡಿ ಬಿಡಿ..ಬಿಡಿ ಭಯವನ್ನು ಬಿಡಿ, ನಾಟಿ ಬಿಡಿಯನ್ನು ಹೊಡಿ, ಧಮ್ಮಿದ್ರೆ ತಡಿ..ಟವಲ್ ಕೊಡಿ, ಪ್ಲೀಸ್ ಕೊಡಿ ಎಂದು ಪ್ರತಾಪ್ ಬಳಿ ಕಾಮಿಡಿ ಹಾಡನ್ನು ಹಾಡಿದ್ದಾರೆ. ಈ ಕಾಮಿಡಿಗೆ ಮನೆ ಮನೆಮಂದಿಯೆಲ್ಲ ಹೊಟ್ಟೆ ಹಿಡಿದುಕೊಂಡು ನಗುತ್ತಿದ್ದಾರೆ. ಇದರ ಪ್ರೋಮೋ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ್ದು, ಪೂರ್ತಿ ಕಾಮಿಡಿಯನ್ನು ಇಂದಿನ ಸಂಚಿಕೆಯಲ್ಲಿ ವೀಕ್ಷಿಸಬಹುದಾಗಿದೆ.
ನಮ್ರತಾ ಗೌಡ, ಡ್ರೋನ್ ಪ್ರತಾಪ್, ಅಭಿನವ್ ವಿಶ್ವನಾಥನ್, ವಿನಯ್ ಗೌಡ, ಗೌರೀಶ್ ಅಕ್ಕಿ, ರಕ್ಷಕ್ ಬುಲ್ಲೆಟ್, ಸಂಗೀತಾ ಶೃಂಗೇರಿ, ಸ್ನೇಕ್ ಶ್ಯಾಮ್, ಕೋಮಲ್, ನೀತು ವನಜಾಕ್ಷಿ ಕಂಟೆಸ್ಟೆಂಟ್ಗಳಾಗಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.