

ಬೆಂಗಳೂರು: ಪ್ರತಿ ವರ್ಷದ ಮಕರ ಸಂಕ್ರಾಂತಿ ದಿನವನ್ನು ಮೈಸೂರಿನ ತಮ್ಮ ಫಾರ್ಮ್ ಹೌಸ್ನಲ್ಲಿಯೇ ಆಚರಿಸುತ್ತ ಬಂದಿರುವ ನಟ ನಟ ದರ್ಶನ್. ಈ ಬಾರಿಯೂ ಸುಗ್ಗಿಹಬ್ಬವನ್ನು ಅಲ್ಲಿಯೇ ಆಚರಿಸಿದರು. ಅವರು ಡಾ.ರಾಜ್ ಕುಮಾರ್ ಕುಟುಂಬದ ಕುಡಿ ಕಾಲುಕಳೆದುಕೊಂಡ ಸೂರಜ್ ಕುಮಾರ್, ಸ್ನೇಹಿತರು ಮತ್ತು ದನಕರುಗಳ ಜತೆ ಹಬ್ಬ ಆಚರಿಸಿಕೊಂಡಿರುವುದು ಗಮನ ಸೆಳೆಯುತ್ತಿದೆ. ಈ ಫೋಟೋಗಳೊಂದಿಗೆ ಸಂಕ್ರಮಣದ ಶುಭಾಶಯ ಕೋರಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಾಟೇರ ಸಿನಿಮಾ ಯಶಸ್ಸು ಸಂಕ್ರಾಂತಿ ಆಚರಣೆಗೆ ಸಂಭ್ರಮ ಡಬಲ್ ಆಗಿತ್ತು. ತೋಟದಲ್ಲಿ ಕಿಚ್ಚು ಹಾಯಿಸುವ ಜತೆಗೆ ಆಪ್ತರ ಜತೆಗೆ ಹಬ್ಬದಾಚರಣೆ ಮಾಡಿದ್ದಾರೆ ದರ್ಶನ್. ಆ ಪೈಕಿ ಕಾಲುಕಳೆದುಕೊಂಡ ಸೂರಜ್ ಕುಮಾರ್ ಸಹ ದರ್ಶನ್ ಜತೆ ಕಾಣಿಸಿಕೊಂಡಿದ್ದಾರೆ. ನಟ ಸೂರಜ್ ಕಳೆದ ವರ್ಷ ಅಪಘಾತದಲ್ಲಿ ಕಾಲು ಕಳೆದುಕೊಂಡಿದ್ದು, ಈ ಬಾರಿ ಚೇತರಿಸಿಕೊಂಡಿದ್ದಾರೆ. ದನ ಕರು, ಆಡು, ಮೇಕೆ, ಕುದುರೆ ಸೇರಿ ಫಾರ್ಮ್ ಹೌಸ್ನ ಎಲ್ಲ ಪ್ರಾಣಿಗಳ ಜತೆಗೆ ಈ ಸಲದ ಸಂಭ್ರಮದ ಸಂಕ್ರಾಂತಿ ಹಬ್ಬವನ್ನು ದರ್ಶನ್ ಆಚರಿಸಿದ್ದಾರೆ.
ಸಂಕ್ರಾಂತಿಗೆ ದರ್ಶನ್ ಆಪ್ತ ಬಳಗದಲ್ಲಿನ ಚಿಕ್ಕಣ್ಣ, ಸೂರಜ್, ಯಶಸ್ ಸೂರ್ಯ ಸೇರಿ ಹಲವರು ಫಾರ್ಮ್ ಹೌಸ್ನಲ್ಲಿ ಬೀಡು ಬಿಟ್ಟಿದ್ದರು. ಈ ಟೀಮ್ ಪಂಚೆ ಧರಿಸಿ ಸಂಕ್ರಾಂತಿ ವಿಶೇಷ ತಳಿಯ ಎತ್ತುಗಳನ್ನು ಹಿಡಿದು ಫೋಟೋಗಳಿಗೆ ಪೋಸ್ ನೀಡಿದರು.
ಸೂರಜ್ಗೆ ಊರುಗೋಲಾದ ದರ್ಶನ್; ಕಳೆದ ವರ್ಷ ಅಪಘಾತದಲ್ಲಿ ಕಾಲು ಕಳೆದುಕೊಂಡಿದ್ದ ಸೂರಜ್ ಚೇತರಿಸಿಕೊಂಡಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಕಾಟೇರ ಸಿನಿಮಾದಲ್ಲಿಯೂ ನಾಯಕಿಯ ತಮ್ಮನ ಪಾತ್ರದಲ್ಲಿ ಸೂರಜ್ ನಟಿಸಿದ್ದರು. ಆ ಸಿನಿಮಾ ಶೂಟಿಂಗ್ ಸಂದರ್ಭದಲ್ಲಿಯೇ ಅಂದರೆ ಕಳೆದ ವರ್ಷದ ಜೂನ್ 24ರಂದು ಮೈಸೂರಿನ ಹೊರ ವಲಯದಲ್ಲಿ ರಸ್ತೆ ಅಪಘಾತದಲ್ಲಿ ಸೂರಜ್ ಕಾಲು ಕಳೆದುಕೊಂಡಿದ್ದರು. ಕಾಲು ಕಳೆದುಕೊಂಡ ಬಳಿಕ, ಅವರ ಜತೆ ನಿಂತ ದರ್ಶನ್, ಮಾನಸಿಕವಾಗಿ ಸೂರಜ್ ಅವರನ್ನು ಗಟ್ಟಿಗೊಳಿಸಿದ್ದಾರೆ. ಅಂದಹಾಗೆ, ಪಾರ್ವತಮ್ಮ ರಾಜ್ಕುಮಾರ್ ಅವರ ಸೋದರ ಸಂಬಂಧಿಯಾಗಿರುವ ಸೂರಜ್, ದರ್ಶನ್ ಜತೆಗೇ ಹೆಚ್ಚು ಗುರುತಿಸಿಕೊಂಡಿದ್ದಾರೆ. ಸೂರಜ್ ಜತೆಗೆ ಸಂಕ್ರಾಂತಿ ಆಚರಿಸುತ್ತಿರುವ ದರ್ಶನ್ ಅವರ ಹತ್ತಾರು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲೂ ವೈರಲ್ ಆಗಿವೆ.