ಪ್ರಧಾನಿ ನರೇಂದ್ರ ಮೋದಿ ಕರೆಗೆ ಸ್ಪಂದಿಸಿದ ಸಂಕೇಶ್ವರ ಕುಟುಂಬ, ದೀಪ ಬೆಳಗಿದ ಡಾ. ವಿಜಯ ಸಂಕೇಶ್ವರ, ಆನಂದ ಸಂಕೇಶ್ವರ

cmd
Published on

ಹುಬ್ಬಳ್ಳಿ: ಕರೊನಾ ವಿರುದ್ಧದ ಹೋರಾಟದಲ್ಲಿ ದೇಶವೇ ಒಂದಾಗಿದೆ ಎಂಬ ಸಂದೇಶ ರವಾನಿಸಲು ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ದೀಪ ಬೆಳಗಿಸುವ ಕರೆಗೆ ಸಂಕೇಶ್ವರ ಕುಟುಂಬ ಭರ್ಜರಿಯಾಗಿ ಸ್ಪಂದಿಸಿತು. ಕುಟುಂಬದ ಸದಸ್ಯರೆಲ್ಲರೂ ಭಾನುವಾರ ರಾತ್ರಿ 9 ಗಂಟೆಗೆ ಸರಿಯಾಗಿ ದೀಪಗಳನ್ನು ಹೊತ್ತಿಸಿ, ದೇಶದ ಏಕತೆ ಸಾರಿದರು.

ಹುಬ್ಬಳ್ಳಿಯ ನವೀನ ಪಾರ್ಕ್​ನಲ್ಲಿರುವ ನಿವಾಸದಲ್ಲಿ ವಿಆರ್​ಎಲ್​ ಸಮೂಹ ಸಂಸ್ಥೆಗಳ ಚೇರ್ಮನ್​ ಪದ್ಮಶ್ರೀ ಡಾ. ವಿಜಯ ಸಂಕೇಶ್ವರ ಮತ್ತು ಎಂಡಿ ಆನಂದ ಸಂಕೇಶ್ವರ ಮಣ್ಣಿನ ಹಣತೆಗಳನ್ನು ಬೆಳಗಿಸಿದರು. ಶ್ರೀಮತಿ ಲಲಿತಾ ಸಂಕೇಶ್ವರ ಮತ್ತು ಶ್ರೀಮತಿ ವಾಣಿ ಸಂಕೇಶ್ವರ ಸಾಥ್​ ನೀಡಿದರು.

ಆನಂದ ಸಂಕೇಶ್ವರ ಅವರ ಪುತ್ರ ಶಿವಾ, ಪುತ್ರಿಯರಾದ ಛಾಯಾ ಮತ್ತು ವೈಷ್ಣವಿ ಕೂಡ ದೀಪಗಳನ್ನು ಬೆಳಗಿಸಿದರು.
ಡಾ. ವಿಜಯ ಸಂಕೇಶ್ವರ ಅವರ ಪುತ್ರಿ ಆರತಿ ಪಾಟೀಲ್​ ಅವರು ಕೂಡ ತಮ್ಮ ಕುಟುಂಬ ಸಮೇತರಾಗಿ ದೀಪ ಬೆಳಗಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net