

ನವದೆಹಲಿ: ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (NCP) ಮುಖ್ಯಸ್ಥ ಶರದ್ ಪವಾರ್ ತಮ್ಮ ಸೋದರಳಿಯ ಅಜಿತ್ ಪವಾರ್ ಭಾರತೀಯ ಜನತಾ ಪಕ್ಷದೊಂದಿಗೆ ಕೈಜೋಡಿಸಿದಂತ ತಪ್ಪು ಕೆಲಸವನ್ನು ಮಾಡುವುದಿಲ್ಲ ಎಂದು ಶಿವಸೇನಾ (ಉದ್ಧವ್ ಬಾಲಾಸಾಹೇಬ್ ಠಾಕ್ರೆ) ಸಂಸದ ಸಂಜಯ್ ರಾವುತ್ ಹೇಳಿದ್ದಾರೆ.
"ಅಜಿತ್ ಪವಾರ್ ಸ್ವಂತ ರಾಜಕೀಯ ಪಕ್ಷ ಕಟ್ಟಿಕೊಂಡು ಚುನಾವಣೆಗೆ ಸ್ಪರ್ಧಿಸಿದರೆ ನಿಜಕ್ಕೂ ದೊಡ್ಡ ನಾಯಕನಾಗಿ ಬೆಳೆಯಬಹುದು. ಏಕನಾಥ್ ಶಿಂಧೆ ಮಾಡಿದಂತೆಯೇ, ಬಿಜೆಪಿಯ ನೆರವಿನಿಂದ ಇವರು ರಾಜಕಾರಣ ಮಾಡಿದರೇ ಮರಳು ಕೋಟೆಯಂತೆ ಕುಸಿದು ಹೋಗುತ್ತದೆ. ರಾಜಕೀಯದಲ್ಲಿ ಟವರ್ಸ್ ಮುಖ್ಯವಾಗುತ್ತದೆಯೇ ಹೊರತು ಮರಳಿನ ಕೋಟೆಗಳಲ್ಲ" ಎಂದು ತಮ್ಮ ಸಾಪ್ತಾಹಿಕ ಅಂಕಣ ರೋಖ್‌ಥೋಕ್‌ನಲ್ಲಿ ಸೇನಾ (UBT) ಮುಖವಾಣಿ 'ಸಾಮ್ನಾ'ದಲ್ಲಿ ರಾವತ್ ಬರೆದುಕೊಂಡಿದ್ದಾರೆ.
"ಅಜಿತ್ ಪವಾರ್ ತಮ್ಮ ಚಿಕ್ಕಪ್ಪನಿಂದ ರಾಜಕೀಯವಾಗಿ ಬೆಳೆದಿದ್ದಾರೆ. ಆದ್ರೆ, ಈಗ ಶರದ್ ಪವಾರ್ ಅವರ ರಾಜಕೀಯ ಜೀವನವನ್ನು ಮುಗಿಸಲು ಕೆಲಸ ಮಾಡುತ್ತಿದ್ದಾರೆ" ಎಂದು ಸಾಮ್ನಾ ಕಾರ್ಯನಿರ್ವಾಹಕ ಸಂಪಾದಕ ರಾವುತ್ ಆರೋಪಿಸಿದ್ದಾರೆ,(ಏಜೆನ್ಸೀಸ್).