ಮೀಸೆ ಕತ್ತರಿಸಿ ಪುತ್ರ ಜಹಾನ್ ಕಪೂರ್ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸಿದ ಸಂಜಯ್ ಕಪೂರ್| sanjay-kapoor

sanjay
Published on

sanjay-kapoor| ಮಗ ಜಹಾನ್ ಕಪೂರ್ ಹುಟ್ಟುಹಬ್ಬವನ್ನು ನಟ ಸಂಜಯ್ ಕಪೂರ್ ವಿಭಿನ್ನವಾಗಿ ಆಚರಿಸಿದ್ದಾರೆ. ಇನ್ನೂ ಈ ಸಂದರ್ಭದಲ್ಲಿ ತಮ್ಮ ಮಗನ ಮೀಸೆಯನ್ನು ಸ್ವತಃ ತಾವೇ ಕಟ್​ ಮಾಡುವ ಮೂಲಕ ಹೃದಯಸ್ಪರ್ಶಿ ವಿಡಿಯೋವನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ.

ಸಂಜಯ್ ಕಪೂರ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ, ಅವರು ತಮ್ಮ ಮಗನ ಮೀಸೆಯನ್ನು ಯಂತ್ರದಿಂದ ಮೊಟಕುಗೊಳಿಸುತ್ತಿರುವುದನ್ನು ಕಾಣಬಹುದು. ಇಬ್ಬರೂ ಕನ್ನಡಿಯಲ್ಲಿ ನೋಡುತ್ತಾರೆ. ಇದಾದ ನಂತರ, ಸಂಜಯ್ ಕಪೂರ್ ಮತ್ತೆ ತನ್ನ ಮಗನ ಮೀಸೆಯನ್ನು ಸ್ವಚ್ಛಗೊಳಿಸುತ್ತಾರೆ. ಸಂಜಯ್ ಕಪೂರ್ ಮೀಸೆ ಬೋಳಿಸುತ್ತಿದ್ದರೆ, ಅವರ ಮಗ ಜಹಾನ್ ನಗುತ್ತಿದ್ದಾರೆ.

(ಏಜೆನ್ಸೀಸ್)

ವೀಡಿಯೋದಲ್ಲಿ ಸಂಜಯ್ ಕಪೂರ್ 'ಜನ್ಮದಿನದ ಶುಭಾಶಯಗಳು ಜಹಾನ್ ಕಪೂರ್' ಎಂಬ ಶೀರ್ಷಿಕೆ ಬರೆದಿದ್ದಾರೆ. ಈ ಬಗ್ಗೆ ಹಲವು ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಜಹಾನ್ ಕಪೂರ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ಒಬ್ಬ ಬಳಕೆದಾರರು 'ವಾವ್ ತುಂಬಾ ಮುದ್ದಾಗಿದ್ದೀರಿ' ಎಂದು ಬರೆದಿದ್ದಾರೆ. ಇನ್ನೂ ನಟ ಚಂಕಿ ಪಾಂಡೆ ಕೂಡ ಜಹಾನ್ ಕಪೂರ್ ಅವರ ಹುಟ್ಟುಹಬ್ಬಕ್ಕೆ ಶುಭ ಹಾರೈಸಿದ್ದಾರೆ.

ನಟ ಸಂಜಯ್ ಕಪೂರ್ ತಮ್ಮ ಮಗನ ಹುಟ್ಟುಹಬ್ಬವನ್ನು ಆಚರಿಸುತ್ತಿರುವಾಗ, ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊಂದನ್ನು ಹಂಚಿಕೊಂಡಿದ್ದಾರೆ. ಅವರು ತಮ್ಮ ಮಗನ ಹುಟ್ಟುಹಬ್ಬವನ್ನು ಆಚರಿಸಿದ ರೀತಿ ನೋಡಿ ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ. ಸಂಜಯ್ ಕಪೂರ್ ತಮ್ಮ ಮಗ ಮೀಸೆ ಟ್ರಿಮ್ ಮಾಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದು, ಇದಕ್ಕೆ ಹಲವು ಬಳಕೆದಾರರು ಬಗೆ ಬಗೆಯಾಗಿ ಕಾಮೆಂಟ್ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net