ಕನ್ನಡ ಸಿನಿಮಾ ಚಿತ್ರೀಕರಣದ ಸಮಯದಲ್ಲಿ ನಟ ಸಂಜಯ್ ದತ್​ಗೆ ಗಾಯ

Sanjay Dutt
Published on

ಮುಂಬೈ: ಬಾಲಿವುಡ್ ನಟ ಸಂಜಯ್ ದತ್ ಕನ್ನಡದ 'ಕೆಡಿ' ಸಿನಿಮಾ ಸಾಹಸ ಸನ್ನಿವೇಶ ಚಿತ್ರಿಕರಣ ವೇಳೆ ಗಾಯಗೊಂಡಿದ್ದಾರೆ.

ನಟಿಸುತ್ತಿದ್ದಾರೆ. ಈ ಸಿನಿಮಾದ ಸಾಹಸ ಸನ್ನಿವೇಶ ಚಿತ್ರೀಕರಣವಾಗುತ್ತಿದ್ದು, ಈ ವೇಳೆ ಸಂಜಯ್ ದತ್ ಗಾಯಗೊಂಡಿದ್ದಾರೆ ಎನ್ನುವ ಮಾಹಿತಿ ಇದೆ. ಸಾಹಸ ಸನ್ನಿವೇಶದಲ್ಲಿ ಬಾಂಬ್ ಬ್ಲಾಸ್ಟಿಂಗ್ ಮಾಡುವಾಗ ಸಂಜಯ್ ಗಾಯ ಮಾಡಿಕೊಂಡಿದ್ದಾರೆ.

'ಕೆಡಿ' ಸಿನಿಮಾದ ಚಿತ್ರೀಕರಣಕ್ಕಾಗಿ ಮಾಗಡಿ ರೋಡ್ ನಲ್ಲಿ ಸೆಟ್ ನಲ್ಲಿ ಹಾಕಲಾಗಿದೆ. ಸಂಜಯ್ ದತ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಧ್ರುವ ಸರ್ಜಾ ಮತ್ತು ಜೋಗಿ ಪ್ರೇಮ್ ಕಾಂಬಿನೇಷನ್ ಸಿನಿಮಾ ಇದಾಗಿದ್ದು, ಫೈಟಿಂಗ್ ಸನ್ನಿವೇಶದ ಚಿತ್ರೀಕರಣ ನಡೆಯುತ್ತಿದೆ. ಈ ವೇಳೆ ಬಾಂಬ್ ಬ್ಲಾಸ್ಟ್ ಮಾಡುವಾಗ ಸಂಜಯ್ ದತ್ ಅವರ ಮೊಣಕೈ ಹಾಗೂ ಮುಖಕ್ಕೆ ಗಾಯವಾಗಿದೆ ಎಂದು ಹೇಳಲಾಗುತ್ತಿದೆ. ಈ ಘಟನೆ ಕಳೆದ ಶುಕ್ರವಾರದಂದು ನಡೆದದ್ದು, ಸಂಜಯ್ ದತ್ ಘಟನೆಯ ನಂತರ ಮುಂಬೈಗೆ ತೆರಳಿದ್ದಾರೆ. ಈ ಸುದ್ದಿ ತಡವಾಗಿ ಬೆಳಕಿಗೆ ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net