

ಬೆಂಗಳೂರು: ಹ್ಯಾಪಿ ಬಿಗ್ ಬಾಸ್ ಸೀಸನ್ 10 ಇದೀಗ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ವಿನ್ನರ್ ಆಗಿ ಕಾರ್ತಿಕ್ ಮಹೇಶ್ ಹೊರಹೊಮ್ಮಿದರು. ಇಲ್ಲಿಯವರೆಗೂ ನಡೆದಿರುವ ಅಷ್ಟು ಸೀಸನ್ಗಳ ಪೈಕಿ ಈ ಸೀಸನ್ ಅತ್ಯಂತ ಯಶಸ್ವಿಯಾಗಿದೆ ಎಂದು ಸ್ವತಃ ಸುದೀಪ್ ತಿಳಿಸಿದ ಬೆನ್ನಲ್ಲೇ ಕಾರ್ಯಕ್ರಮಕ್ಕೆ ಸಾಕಷ್ಟು ಜನಮನ್ನಣೆ ಲಭಿಸಿತು. ಅಂತಿಮ ಹಣಾಹಣಿಯಲ್ಲಿ ಭಾರೀ ಪೈಪೋಟಿ ನೀಡುವ ಮೂಲಕ ಟಾಪ್ 3 ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದ ಸಂಗೀತಾ ಶೃಂಗೇರಿ ಇತ್ತೀಚೆಗೆ ವಿಜಯವಾಣಿ ನಡೆಸಿದ ಸಂದರ್ಶನದಲ್ಲಿ ಭಾಗಿಯಾಗಿ ಹಲವಾರು ವಿಚಾರಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.
ಬಿಗ್ ಬಾಸ್ನ ಸಿಂಹಿಣಿ, ಗಟ್ಟಿಗಿತ್ತಿ, ಸ್ಟ್ರಾಂಗ್ ಮಹಿಳೆ ಎಂಬ ಹಲವು ಪಟ್ಟ ಪಡೆದ ಸಂಗೀತಾ ಬಿಗ್ ಬಾಸ್ನಲ್ಲಿ ಎರಡನೇ ರನ್ನರ್ ಅಪ್ ಆಗಿ ಹೊರಬಂದರು. ಈ ವೇಳೆ ವೋಟಿಂಗ್ ಫೇಕ್? ಪೈಡ್ ಪ್ರೊಮೋಷನ್ ಎಂಬುದರ ಕುರಿತು ಕೇಳಲಾದ ಪ್ರಶ್ನೆಗೆ ಸಂಗೀತಾ ಖಡಕ್ ಉತ್ತರ ಕೊಟ್ಟಿದ್ದಾರೆ.
"ಬಿಗ್ ಬಾಸ್ಗೆ ಹೋಗುವ ಮುಂಚೆ ನನ್ನ ಫ್ಯಾಮಿಲಿ ಯಾವತ್ತೂ ನನ್ನ ಸಿನಿಮಾ ರಂಗ ಇತರೆ ವಿಷಯಗಳಿಗೆ ತರಲು ಬಯಸಿರಲಿಲ್ಲ. ಆದರೆ ಬಿಗ್ ಮನೆಗೆ ಹೋದಾಗ ನಮ್ಮ ಕುಟುಂಬದವರನ್ನು ತರಲೇಬೇಕಿತ್ತು. ಆ 100 ದಿನಗಳಲ್ಲಿ ನಮ್ಮ ಸಾಮಾಜಿಕ ಜಾಲತಾಣದ ಅಕೌಂಟ್ ಅನ್ನು ಹ್ಯಾಂಡಲ್ ಮಾಡಬೇಕಿತ್ತು. ಆ ಜವಾಬ್ದಾರಿಯನ್ನು ನನ್ನ ಅತ್ತಿಗೆ ತೆಗೆದುಕೊಂಡಿದ್ದರು" ಎಂದು ಹೇಳಿದರು.
"ಪೈಡ್ ಪ್ರೋಮೋಷನ್ ಮಾಡಿದ್ದಿದ್ರೆ........" ಮತ್ತಷ್ಟು ಮಾಹಿತಿ ತಿಳಿಯಲು ಕೆಳಗಿನ ಸಂದರ್ಶನದ ವಿಡಿಯೋ ವೀಕ್ಷಿಸಿ.