More

    ಅಧಿಕೃತವಾಗಿ ರಾಜಕೀಯಕ್ಕೆ ಧುಮುಕಿದ ನಟ ವಿಜಯ್​: ಹೊಸ ಪಕ್ಷದ ಹೆಸರು ಘೋಷಣೆ

    ಚೆನ್ನೈ: ರಾಜಕೀಯ ಪ್ರವೇಶದ ಬಗ್ಗೆ ಬಹಳ ವರ್ಷಗಳಿಂದ ಕೇಳಿಬರುತ್ತಿದ್ದ ವದಂತಿಗಳಿಗೆ ಇಳಯದಳಪತಿ ವಿಜಯ್ ಇಂದು (ಫೆ. 02) ಅಧಿಕೃತ ಮುದ್ರೆ ಒತ್ತಿದ್ದಾರೆ. ತಮ್ಮ ನೂತನ ರಾಜಕೀಯ ಪಕ್ಷದ ಹೆಸರನ್ನು ಘೋಷಣೆ ಮಾಡುವ ಮೂಲಕ ಲೋಕಸಭಾ ಚುನಾವಣೆಗೆ ಇನ್ನೂ ಕೆಲವೇ ದಿನಗಳು ಬಾಕಿ ಇರುವಾಗಲೇ ವಿಜಯ್​, ಅಧಿಕೃತವಾಗಿ ರಾಜಕೀಯ ಪ್ರವೇಶ ಮಾಡಿದ್ದಾರೆ.

    ತಮ್ಮ ಹೊಸ ಪಕ್ಷಕ್ಕೆ “ತಮಿಳಗಾ ವೆಟ್ರಿ ಕಳಗಂ”​ ಎಂದು ಹೆಸರಿಟ್ಟಿದ್ದಾರೆ. ಕಳೆದ ವಾರ ಚೆನ್ನೈನಲ್ಲಿ ನಡೆದ ಸಭೆಯಲ್ಲಿ ಅವರ ಅಭಿಮಾನಿಗಳ ಸಂಘ ವಿಜಯ್ ಮಕ್ಕಳ್ ಇಯಕ್ಕಂ ರಾಜಕೀಯ ಪಕ್ಷದ ರಚನೆಗೆ ಒಪ್ಪಿಗೆ ನೀಡಿದ ಬಳಿಕ ನಟ ವಿಜಯ್​ ದೊಡ್ಡ ಘೋಷಣೆ ಮಾಡಿದ್ದಾರೆ.

    ಈ ಬಗ್ಗೆ ಮಾತನಾಡಿರುವ ವಿಜಯ್​, ನಾವು ನಮ್ಮ ಪಕ್ಷ ‘ತಮಿಳಗಾ ವೆಟ್ರಿ ಕಳಗಂ’ ಅನ್ನು ನೋಂದಾಯಿಸಲು ಚುನಾವಣಾ ಆಯೋಗಕ್ಕೆ ಇಂದು ಅರ್ಜಿ ಸಲ್ಲಿಸುತ್ತಿದ್ದೇವೆ. ಮುಂಬರುವ 2026ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲುವುದು ಮತ್ತು ಮೂಲಭೂತವಾಗಿ ರಾಜಕೀಯ ಬದಲಾವಣೆ ತರುವುದು ನಮ್ಮ ಗುರಿಯಾಗಿದೆ. ಜನರು ಕೂಡ ಇದನ್ನೇ ಬಯಸುತ್ತಾರೆ ಎಂದು ಹೇಳಿದರು.

    ರಾಜಕೀಯವು ನನಗೆ ಮತ್ತೊಂದು ವೃತ್ತಿಯಲ್ಲ. ಇದು ಪವಿತ್ರ ಜನರ ಕೆಲಸ. ನಾನು ಬಹಳ ಸಮಯದಿಂದ ಅದಕ್ಕಾಗಿ ನನ್ನನ್ನು ಸಿದ್ಧಪಡಿಸುತ್ತಿದ್ದೇನೆ. ರಾಜಕೀಯ ನನಗೆ ಹವ್ಯಾಸವಲ್ಲ. ಅದು ನನ್ನ ಆಳವಾದ ಆಸೆಯಾಗಿದೆ. ನಾನು ನನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ಬಯಸುತ್ತೇನೆ. ಸದ್ಯದ ರಾಜಕೀಯ ವಾತಾವರಣದ ಬಗ್ಗೆ ನಿಮಗೆಲ್ಲರಿಗೂ ತಿಳಿದಿದೆ. ಆಡಳಿತದ ದುಷ್ಕೃತ್ಯಗಳು ಮತ್ತು ಭ್ರಷ್ಟ ರಾಜಕೀಯ ಸಂಸ್ಕೃತಿ ಒಂದೆಡೆಯಾದರೆ, ನಮ್ಮ ಜನರನ್ನು ಜಾತಿಯ ಆಧಾರದ ಮೇಲೆ ವಿಭಜಿಸುವ ರಾಜಕೀಯ ಸಂಸ್ಕೃತಿ ಇನ್ನೊಂದೆಡೆ. ತಮಿಳುನಾಡಿನ ಜನ ನಿಸ್ವಾರ್ಥ, ಪಾರದರ್ಶಕ, ಜಾತಿ ಮುಕ್ತ, ದೂರದೃಷ್ಟಿ, ಭ್ರಷ್ಟಾಚಾರ ಮುಕ್ತ ಮತ್ತು ಸಮರ್ಥ ಆಡಳಿತಕ್ಕೆ ಕಾರಣವಾಗುವ ಮೂಲಭೂತ ರಾಜಕೀಯ ಬದಲಾವಣೆಗಾಗಿ ಜನರು ಹಂಬಲಿಸುತ್ತಿದ್ದಾರೆ ಎಂದು ವಿಜಯ್​ ಹೇಳಿದರು.

    ಚುನಾವಣಾ ಆಯೋಗದ ಅನುಮೋದನೆ ಪಡೆದ ನಂತರ, ಪಕ್ಷವು ಸಾರ್ವಜನಿಕ ಸಭೆಗಳು ಮತ್ತು ಕಾರ್ಯಕ್ರಮಗಳನ್ನು ನಡೆಸಲು ಯೋಜಿಸಿದೆ. ಈ ಸಮಯದಲ್ಲಿ, ತಮ್ಮ ನೀತಿಗಳು, ತತ್ವಗಳು ಮತ್ತು ಕ್ರಿಯಾ ಯೋಜನೆಗಳನ್ನು ಪ್ರಸ್ತುತಪಡಿಸಲಿದೆ. ಅಲ್ಲದೆ, ಧ್ವಜ ಮತ್ತು ಪಕ್ಷದ ಚಿಹ್ನೆಯನ್ನು ಪರಿಚಯಿಸಲಿದೆ. (ಏಜೆನ್ಸೀಸ್​

    285 ವರ್ಷ ಹಳೆಯ ನಿಂಬೆಹಣ್ಣು ಹರಾಜಿನಲ್ಲಿ ಬಾಚಿದ ಮೊತ್ತ ಕೇಳಿದ್ರೆ ನೀವು ಬೆರಗಾಗೋದು ಖಚಿತ!

    ಮಾಡೆಲ್​, ನಟಿ ಪೂನಂ ಪಾಂಡೆ ದುರಂತ ಸಾವು! 32 ವರ್ಷಕ್ಕೆ ಬದುಕು ಅಂತ್ಯ, ಸುದ್ದಿ ಖಚಿತಪಡಿಸಿದ ಮ್ಯಾನೇಜರ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts