VIDEO | ಹಳ್ಳಿಯವರಾದ್ರೂ ಓಕೆ! ಹೀಗಿರಬೇಕಂತೆ ಸಂಗೀತಾ ಮದುವೆಯಾಗುವ ಹುಡುಗ

ವಿಜಯವಾಣಿ - 2024-02-02T191848.394
Published on

ಬೆಂಗಳೂರು: ಹ್ಯಾಪಿ ಬಿಗ್ ಬಾಸ್​ ಸೀಸನ್​ 10 ಇದೀಗ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ವಿನ್ನರ್​ ಆಗಿ ಕಾರ್ತಿಕ್​ ಮಹೇಶ್​ ಹೊರಹೊಮ್ಮಿದರು. ಇಲ್ಲಿಯವರೆಗೂ ನಡೆದಿರುವ ಅಷ್ಟು ಸೀಸನ್​ಗಳ ಪೈಕಿ ಈ ಸೀಸನ್​ ಅತ್ಯಂತ ಯಶಸ್ವಿಯಾಗಿದೆ ಎಂದು ಸ್ವತಃ ಸುದೀಪ್ ತಿಳಿಸಿದ ಬೆನ್ನಲ್ಲೇ ಕಾರ್ಯಕ್ರಮಕ್ಕೆ ಸಾಕಷ್ಟು ಜನಮನ್ನಣೆ ಲಭಿಸಿತು. ಅಂತಿಮ ಹಣಾಹಣಿಯಲ್ಲಿ ಭಾರೀ ಪೈಪೋಟಿ ನೀಡುವ ಮೂಲಕ ಟಾಪ್​ 3 ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದ ಸಂಗೀತಾ ಶೃಂಗೇರಿ ಇತ್ತೀಚೆಗೆ ವಿಜಯವಾಣಿ ನಡೆಸಿದ ಸಂದರ್ಶನದಲ್ಲಿ ಭಾಗಿಯಾಗಿ ಹಲವಾರು ವಿಚಾರಗಳನ್ನು ಮುಕ್ತವಾಗಿ ಹಂಚಿಕೊಂಡರು. ಈ ಬೆನ್ನಲ್ಲೇ ತಾವು ಮದುವೆಯಾಗುವ ಹುಡುಗ ಹೇಗಿರಬೇಕು ಎಂಬುದನ್ನು ಕೂಡ ಬಹಿರಂಗವಾಗಿ ತಿಳಿಸಿದ್ದಾರೆ.

ಬಿಗ್ ಬಾಸ್​ ಫಿನಾಲೆಯ ಟಾಪ್​ ಮೂರರಲ್ಲಿ ಪ್ರತಾಪ್​, ಕಾರ್ತಿಕ್​ ಜತೆಗೆ ವೋಟಿಂಗ್​ನಲ್ಲಿ ಸೆಣಸಾಡಿದ ಸಂಗೀತಾ, ಅಂತಿಮವಾಗಿ ಸೆಕೆಂಡ್ ರನ್ನರ್​ ಅಪ್​ ಸ್ಥಾನ ಅಲಂಕರಿಸುವ ಮೂಲಕ ಬಿಗ್ ಫೈಟ್​ನಿಂದ ಹೊರಗುಳಿದರು. ಭಾಗಶಃ ವೀಕ್ಷಕರು ಸಂಗೀತಾ ಎರಡನೇ ಮಹಿಳಾ ಸ್ಪರ್ಧಿಯಾಗಿ ಬಿಗ್ ಬಾಸ್​ ಟ್ರೋಫಿ ವಿಜೇತರಾಗುತ್ತಾರೆ ಎಂದೇ ನಿರೀಕ್ಷಿಸಿದ್ದರು. ಆದರೆ, ಈ ಊಹೆ, ಲೆಕ್ಕಾಚಾರಗಳು ತಲೆಕೆಳಗಾಯಿತು.

ಸದ್ಯ ಬಿಗ್ ಮನೆಯ ಪಯಣ ಮುಗಿಸಿದ ಬಳಿಕ ಸಂದರ್ಶನದಲ್ಲಿ ಮದುವೆ ವಿಚಾರಕ್ಕೂ ಮೊದಲು ನೇರವಂತಿಕೆ ಬಗ್ಗೆ ಮಾತನಾಡಿದ ಸಂಗೀತಾ, ನೇರವಾಗಿ ಜನರಿಗೆ ಹೇಳುವುದು ಕಷ್ಟ, ಅಂತವರನ್ನು ಜನರು ಸ್ವೀಕರಿಸಲು ಬಹಳ ಹೆದರುತ್ತಾರೆ. ಅದು ಯಾಕೆ ಅಂತ ನನಗೆ ಗೊತ್ತಿಲ್ಲ. ಆದ್ರೆ, ನಾನು ಯಾವತ್ತು ಇದರ ಬಗ್ಗೆ ಯೋಚನೆ ಸಹ ಮಾಡಿಲ್ಲ ಎಂದರು. ಇನ್ನು ಮದುವೆಯಾಗುವ ಹುಡುಗೆ ಹೇಗಿರಬೇಕು ಎಂಬ ಪ್ರಶ್ನೆಗೆ, ಪ್ರೀತಿ ಅನ್ನೋದು ಹುಡುಕಿಕೊಂಡು ಹೋಗಬಾರದು. ಅದ್ಯಾವತ್ತು ಸಿಗಬೇಕು, ನಮ್ಮ ಜೀವನದ ಭಾಗವಾಗಬೇಕು ಎಂದರು.

ಬಿಗ್ ಬಾಸ್​ ಮನೆಯೊಳಗೆ ಬರಲ್ಲ ಅಂತ ಹೇಳಿದ್ದೆ, ಕಾರ್ತಿಕ್​ಗೆ ಲೆಟ್ಟರ್​ ಬರೆಯಲ್ಲ ಎಂದು ತಿಳಿಸಿದ್ದೆ! ಆದ್ರೆ........." ಮತ್ತಷ್ಟು ವಿಷಯ ತಿಳಿದುಕೊಳ್ಳಲು ಈ ಕೆಳಗಿನ ಸಂದರ್ಶನ ವಿಡಿಯೋ ನೋಡಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net