

ಬಿಗ್ಬಾಸ್ ಮನೆಯಲ್ಲಿ ಈಗಾಗಲೇ ಕಂಟೆಸ್ಟೆಂಟ್ಗಳು ಕೊನೆಯ ದಿನ ಅಂಧ್ರೆ ಫಿನಾಲೆ ಟಿಕೆಟ್ ಪಡೆದುಕೊಳ್ಳಲು ಹರಸಾಹಸಬ ಪಡುತ್ತಿದ್ದಾರೆ. ಇದೀಗ ಬಿಗ್ಬಾಸ್ ಮನೆಗೆ ಹಳೆಯ ಕಂಟೆಸ್ಟೆಂಟ್ಗಳೂ ಎಂಖಟ್ರಿ ಕೊಟ್ಟಿದ್ದು, ಅವರ ಮುಂದೆಯೇ ಕೆಲ ಟಾಸ್ಕ್ಗಳೂ ನಡೆಯುತ್ತಿವೆ.
ಈಗಷ್ಟೇ ರಿಲೀಸ್ ಆಗಿರುವ ಬಿಗ್ಬಾಸ್ ಪ್ರೋಮೋ ಸಂಚಲನ ಸೃಷ್ಟಿಸಿದ್ದು, ಅದರಲ್ಲಿ ಫಿನಾಲೆ ಹಂತ ತಲುಪೋಕೆ ಸ್ಪರ್ಧಿಗಳಿಗೆ ಬಾಲ್ ಟಾಸ್ಕ್ ಒಂದನ್ನ ನೀಡಲಾಗಿದೆ. ಈ ಟಾಸ್ಕ್ ಆಡೋಕೆ ಸಂಗೀತಾ ವಿನಯ್ ಅವರನ್ನ ಚೂಸ್ ಮಾಡಿದ್ದಾರೆ. ಅಂತೆಯೇ ವರ್ತೂರ್ ಸಂತೋಷ್ ಕಲೂಡಾ ಇದೇ ಟಾಸ್ಕ್ನಲ್ಲಿ ಆಟವಾಡಿದ್ದಾರೆ.
ಟಾಸ್ಕ್ ಆಡಿದ ವರ್ತೂರ್ ಸಂತೋಷ್ ಮತ್ತು ಸಂಗೀತಾ ನಡುವೆ ಮಾತಿನ ಚಕಮಕಿ ಏರ್ಪಟ್ಟಿದ್ದು, ವರ್ತೂರ್ ಸಂಗೀತಾಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಸಂಗೀತಾ ಯಾರು ಸರಿಯಾಗಿ ಆಟವಾಡುತ್ತಾರೆಯೋ ಅವರನ್ನ ಈ ಟಾಸ್ಕ್ ಆಡೋಕೆ ಕಳಿಸಿದ್ದೇನೆ ಅದೇ ಕಾರಣಕ್ಕೆ ನಾನು ವಿನಯ್ ಹೆಸರು ಹೇಳಿದ್ದೇನೆ ಅಂತಾ ಹೇಳೋದನ್ನ ಪ್ರೋಮೋನಲ್ಲಿ ಕಾಣಬಹುದು.
ನಂತರದಲ್ಲಿ ವರ್ತೂರ್ ಸಂತೋಷ್ ಸಂಗೀತಾ ಮುಂದೆ ಹೋಗಿ ಇದು ತುಮಬಾ ಇರೆಸ್ಪೆಕ್ಟ್ ರೀತಿಯಲ್ಲಿ ಕಾಣಿಸ್ತಾಇದೆ. ನೀವು ಒಬ್ಬರನ್ನ ಬ್ಲೇಮ್ ಮಾಡೋ ಮುಂಚೆ ನೀವು ಏನು ಅನ್ನೋದನ್ನ ನೋಡಿಕೊಂಡು ಬಿಟ್ರೆ ತುಂಬಾ ಒಳ್ಳೆಯದು ಎಂದಿದ್ದಾರೆ. ಈ ಹೇಳಿಕೆಗೆ ಸಂಗೀತಾ ಗರಂ ಆಗಿದ್ದು, ನೀವು ಇದನ್ನ ಯಾರಿಗೆ ಹೇಳುತ್ತಿದ್ದೀರಾ ಅಂತಾ ಪ್ರಶ್ನಿಸಿದ್ದಾರೆ.
ಸ್ಪರ್ಧಿಗಳ ನಡುವೆ ಗೆಲ್ಲುವ ಹಟ ಮತ್ತೊಂದು ಹಂತಕ್ಕೆ ತಲುಪಿದ್ದು, ಸದ್ಯ ಮುಂದಿನ ದಿನಗಳಲ್ಲಿ ಕಾಂಪಿಟೇಷನ್ ಮತ್ತಷ್ಟು ಟಫ್ ಆಗುವಂತಹ ಎಲ್ಲಾ ನಿರೀಕ್ಷೆಗಳೂ ಇದೆ.