

ಧಾರವಾಡ: ಸಂಗೀತ ಸ್ವರ ಲೋಕದ ಮಾಂತ್ರಿತ, ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ಶುಕ್ರವಾರ ಇಹಲೋಕ ತ್ಯಜಿಸಿದ್ದಾರೆ. ಎಸ್ಪಿವಿ ನಿಧನದ ಬೆನ್ನಲ್ಲೇ, ಅವರ ಗರಡಿಯಲ್ಲಿ ಪಳಗಿದ ಗಾಯಕಿ ಸಂಗೀತಾ ಕಟ್ಟಿ, ಗಾನ ಗಾರುಡಿಗನ ಬಗ್ಗೆ ಮಾತನಾಡಿದ್ದಾರೆ.
ನಮ್ಮ ಕನ್ನಡ ನಾಡಿಗೆ ಎಸ್ಬಿಬಿ ಒಂದು ವರ. ನಮ್ಮ ನಾಡಿನಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಹಾಡನ್ನು ಹಾಡಿರುವುದು ಭುವನೇಶ್ವರಿಯ ವರ. ನನ್ನ ಪಾಲಿಗೆ ಅವರು ಗುರು ಶಕ್ತಿ. ಅವರನ್ನು ಮಿಸ್ ಮಾಡಿಕೊಳ್ಳುವ ಬಗ್ಗೆ ಆದಿ-ಅಂತ್ಯ ಇಲ್ಲ ಎಂದು ಸಂಗೀತಾ ಕಟ್ಟಿ ಭಾವುಕರಾಗಿ ನುಡಿದರು.