ಸಿದ್ದರಾಮಯ್ಯ ಮಾತಿನ ಮೇಲೆ ಎಚ್ಚರವಿರಲಿ

B.Y.Vijayendra
Published on

ಸಂಡೂರು: ಮೋದಿ ಯಡಿಯೂರಪ್ಪ ಬಗ್ಗೆ ಮಾತನಾಡುವ ಬದಲು ಎಚ್ಚರಿಕೆ ಯಿಂದ ಇರಬೇಕುವಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ತಾಲೂಕಿನ ಚೋರನೂರಿನಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಹಿರಿಯರಿದ್ದಾರೆ. ಭಾಷೆಯ ಮೇಲೆ ಹಿಡಿತವಿರಬೇಕು. ಮೋದಿಯವರನ್ನು ರಾಜಕೀಯ ಪುಡಾರಿ ಎನ್ನುತ್ತಿರಾ? ನಿಮ್ಮ ಭಾಷೆ ಏನಾಗಿದೆ. ಯಡಿಯೂರಪ್ಪ ಮೂರು ನಾಲ್ಕು ದಶಕಗಳಿಂದ ಹೋರಾಟ ಮಾಡಿ ಮುಖ್ಯಮಂತ್ರಿ ಯಾಗಿದ್ದಾರೆ.

ಸಿದ್ದರಾಮಯ್ಯನವರೇ ನಿಮ್ಮ ಯಾವ ಹೋರಾಟದಿಂದ ಮುಖ್ಯಮಂತ್ರಿಯಾಗಿದ್ದೀರಾ? ಅದೃಷ್ಟದ ಮುಖ್ಯಮಂತ್ರಿಯಾಗಿದ್ದಿರಿ. ರಾಜ್ಯದ ಜನರು ಥೂ ಛೀ ಎಂದು ಉಗಿತಿದ್ದಾರೆ. ಖರ್ಗೆ ನಿಮ್ಮ ಗ್ಯಾರಂಟಿ ಬಗ್ಗೆ ಮಂಗಳಾರಾತಿ ಎತ್ತಿದ್ದಾರೆ. ಬಳ್ಳಾರಿ  ಪಾದಯಾತ್ರೆ ಮಾಡಿದ್ದು ನಿಮ್ಮ ಅಧಿಕಾರಕ್ಕಾಗಿ ಅಹಿಂದ ನಿಮ್ಮ ವಯಕ್ತಿಕ ಬೆಳವಣಿಗೆಗಾಗಿ ಎಂದರು.

ಸಚಿವ ಜಮೀರ್ ಅಹಮದ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಬಿಟ್ಟಿ ಪ್ರಚಾರದ ಬಗ್ಗೆ ಹೆಮ್ಮೆ ಇದ್ರೇ ಬಳಸಿಕೊಳ್ಳಿ. ಸಂವಿಧಾನದ ಬಗ್ಗೆ ಉದ್ದುದ್ದ ಭಾಷಣ ಮಾಡ್ತಾರೆ. ವಕ್ಫ ವಿಚಾರದ ಮಠಮಂದಿರ ಮತ್ತು ರೈತರ ಭೂಮಿ ಕಬಳಿಸುತ್ತಾರೆ. ಜವಾಬ್ದಾರಿಯುತ ಸಚಿವ ನಾಡೋ ಕೆಲಸನಾ? ನೋಟಿಸ್‌ ಹಿಂಪಡೆದರೆ ಅಷ್ಟೇ ಅಲ್ಲ ಗೆಜೆಟ್ ನೋಟಿಫೀಕೇಷನ್ ವಾಪಸ್ ಪಡೆಯಲಿ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net