

ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ಹಿನ್ನೆಲೆ ಗಾಯಕ ಹೇಮಂತ್ ಅವರು ಬಹುಕಾಲದ ಗೆಳತಿಯೊಂದಿಗೆ ಇಂದು ಸರಳವಾಗಿ ಕುಟುಂಬ ವರ್ಗದವರ ಸಮ್ಮುಖದಲ್ಲಿ ಸಪ್ತಪದಿ ತುಳಿದಿದರು.
ನಗರದ ಸೆಂಟ್ ಜಾನ್ ಆಸ್ಪತ್ರೆಯಲ್ಲಿ ವೈದ್ಯೆಯಾಗಿರುವ ಕೃತಿಕಾ ಜತೆ ಹೇಮಂತ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕರೊನಾ ಶಿಷ್ಟಾಚಾರದಂತೆ ಮದುವೆ ಸಮಾರಂಭ ಸರಳವಾಗಿ ನೆರವೇರಿತು.
ರಿಯಲ್ ಸ್ಟಾರ್ ಉಪೇಂದ್ರ ಅವರು ಮದುವೆ ಮಂಟಪಕ್ಕೆ ತೆರಳಿ ನವದಂಪತಿಗೆ ಶುಭಹಾರೈಸಿದರು. ಪ್ರೀತ್ಸೆ ಚಿತ್ರದಿಂದ ತಮ್ಮ ಹೇಮಂತ್ ತಮ್ಮ ಗಾಯನದ ಹಾದಿಯನ್ನು ಶುರು ಮಾಡಿದರು. ಅನೇಕ ಸ್ಟಾರ್ ನಟರಿಗೆ ಹೇಮಂತ್ ಹಾಡಿದ್ದಾರೆ. ಅಲ್ಲದೆ, ಅನೇಕ ಸಂಗೀತ ನಿರ್ದೇಶಕರ ಸಂಯೋಜನೆಗೆ ದನಿ ನೀಡಿದ್ದಾರೆ.