ಬಿಗ್​ಬಾಸ್​ ಮನೆಗೆ ಮತ್ತೆ 15 ತಾರೆಯರು ಎಂಟ್ರಿ: ದೊಡ್ಮನೆಗೆ ಸಿಕ್ಕಿದೆ ತಾರಾ ಮೆರಗು..!

Bigg boss
Published on

ಬೆಂಗಳೂರು: ಬಿಗ್​ಬಾಸ್​ 8ನೇ ಆವೃತ್ತಿಗೆ ವರ್ಣರಂಜಿತ ತೆರೆಬಿದ್ದಿದ್ದು, ಸ್ಪರ್ಧಿಗಳಿಂದ ತುಂಬಿ ತುಳುಕುತ್ತಿದ್ದ ಡೊಡ್ಮನೆ ಇದೀಗ ಖಾಲಿಯಾಗಿದೆ. ಮತ್ತೊಂದು ಸೀಸನ್​ ಆರಂಭವಾಗುವವರೆಗೂ ಬಿಗ್​​ಬಾಸ್​ ಮನೆಯನ್ನು ಮಿಸ್​ ಮಾಡಿಕೊಳ್ಳುತ್ತಿದ್ದವರಿಗೆ ಇದೀಗ ಗುಡ್​ ನ್ಯೂಸ್​ ಸಿಕ್ಕಿದೆ. ಅದೇನೆಂದ್ರೆ ಎಂದಿನಂತೆ ಇನ್ನು ಕೆಲವು ದಿನ ನೀವು ಬಿಗ್​ಬಾಸ್​ ಮನೆಯನ್ನು ಕಣ್ತಂಬಿಕೊಳ್ಳಬಹುದು.

ಹೌದು. ಬಿಗ್​ಬಾಸ್​ ಮನೆಗೆ ಹೊಸ ತಂಡ ಆಗಮಿಸಿದೆ. ಆದರೆ, ಈ ಹೊಸ ತಂಡ ಕೇವಲ ಆರು ದಿನಗಳಿಗೆ ಮಾತ್ರ ಸೀಮಿತವಾಗಿರುತ್ತದೆ. ಇಷ್ಟೇ ದಿನದಲ್ಲಿ ಭರಪೂರ ಮನರಂಜನೆಯನ್ನೂ ನೀಡಲಿದೆ.

ವಿವರಣೆಗೆ ಬರುವುದಾದರೆ, ಸಾಮಾನ್ಯವಾಗಿ, ‘ಬಿಗ್ ಬಾಸ್’ ಮುಗಿದ ಮೇಲೂ ಒಂದಿಷ್ಟು ದಿನಗಳ ಕಾಲ ಕಾರ್ಯಕ್ರಮಗಳು ಮುಂದುವರಿಯುತ್ತಿದ್ದವು. ಸ್ಪರ್ಧಿಗಳ ಸಂದರ್ಶನ, ಅನುಭವಗಾಥೆ, ಕೆಲವು ಪ್ರಮುಖ ಘಟನೆಗಳ ದೃಶ್ಯಗಳ ಪ್ರಸಾರ ತೋರಿಸಲಾಗುತ್ತಿತ್ತು. ಆದರೆ, ಈ ಬಾರಿ ಹಾಗಲ್ಲ. ‘ಬಿಗ್ ಬಾಸ್’ ಪ್ರಸಾರವಾಗುತ್ತಿದ್ದ ಸಮಯದಲ್ಲಿ ಸೋಮವಾರದಿಂದಲೇ ಎರಡು ಹೊಸ ಧಾರಾವಾಹಿಗಳು ಪ್ರಸಾರವಾಗಲಿವೆ. ಹಾಗಾದರೆ, ಯಾವಾಗ ಮತ್ತು ಹೇಗೆ ಮುಂದುವರೆಯುತ್ತದೆ ಎಂಬ ಕುತೂಹಲವು ಸಹಜ.

‘ಬಿಗ್ ಬಾಸ್’ ಫ್ಯಾಮಿಲಿ: ಕಲರ್ಸ್ ಕನ್ನಡ ‘ಬಿಗ್ ಬಾಸ್’ ಫ್ಯಾಮಿಲಿ ಎಂಬ ಕಿರುಸೀಸನ್ ಪ್ರಾರಂಭವಾಗಿದ್ದು, ಕಲರ್ಸ್ ಕುಟುಂಬದ ಹಲವು ಧಾರಾವಾಹಿಗಳ ಪ್ರಮುಖ ಕಲಾವಿದರು, ‘ಬಿಗ್ ಬಾಸ್’ ಮನೆಗೆ ಹೋಗಿ ಅಲ್ಲಿ ಕೊಡುವ ಹಲವು ಟಾಸ್ಕ್​ಗಳಲ್ಲಿ ಭಾಗವಹಿಸಲಿದ್ದಾರೆ. ಅದರಲ್ಲಿ ಗೆದ್ದವರಿಗೆ ‘ಬಿಗ್ ಬಾಸ್ ಫ್ಯಾಮಿಲಿ ಅವಾರ್ಡ್ಸ್’ ಕೊಡಲಾಗುತ್ತದೆ. ಮೊದಲೇ ಹೇಳಿದಂತೆ ಇದೊಂದು ಕಿರು ಸೀಸನ್ ಆಗಿರಲಿದ್ದು, ವಾರಾಂತ್ಯಗಳಲ್ಲಿ ಪ್ರಸಾರವಾಗಲಿದೆ.

ಇದಕ್ಕೆ ಸಂಬಂಧಿಸಿದ ಪ್ರೋಮೋವನ್ನು ಈಗಾಗಲೇ ಕಲರ್ಸ್​ ಕನ್ನಡ ಬಿಡುಗಡೆ ಮಾಡಿದ್ದು, ಅಕುಲ್, ಕಿರಣ್ ರಾಜ್ ಸೇರಿದಂತೆ 15 ತಾರೆಯರ ಬಿಗ್​ ಮನೆಗೆ ಎಂಟ್ರಿ ನೀಡಿದ್ದಾರೆ. ಶನಿವಾರ ಮತ್ತು ಭಾನುವಾರ ಈ ಎಪಿಸೋಡ್​ ಪ್ರಸಾರವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net