More

    ಫಿನಾಲೆ ಮುಗಿದ್ರೂ ನಡೆಯಲಿದೆ ಬಿಗ್​ಬಾಸ್; ಕಲರ್ಸ್ ಕುಟುಂಬದ ಕಲಾವಿದರೇ ಸ್ಪರ್ಧಿಗಳು

    ಬೆಂಗಳೂರು: ‘ಬಿಗ್ ಬಾಸ್’ ಕಾರ್ಯಕ್ರಮ ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಇದೇ ಭಾನುವಾರ (ಆಗಸ್ಟ್ 8) ಗ್ರಾಂಡ್ ಫಿನಾಲೆ ಆಯೋಜಿಸಲಾಗಿದ್ದು, ಅಂದು ಸೀಸನ್ ಎಂಟರ ವಿಜೇತರು ಯಾರು ಎಂಬ ವಿಷಯ ಗೊತ್ತಾಗಲಿದೆ. ಗ್ರಾಂಡ್ ಫಿನಾಲೆ ಮುಗಿದರೂ, ‘ಬಿಗ್ ಬಾಸ್’ ಇನ್ನಷ್ಟು ಮುಂದುವರಿಯಲಿದೆ ಎಂಬ ಸುದ್ದಿಯೊಂದು ಕೇಳಿಬರುತ್ತಿದೆ. ಸಾಮಾನ್ಯವಾಗಿ, ‘ಬಿಗ್ ಬಾಸ್’ ಮುಗಿದ ಮೇಲೂ ಒಂದಿಷ್ಟು ದಿನಗಳ ಕಾಲ ಕಾರ್ಯಕ್ರಮ ಮುಂದುವರಿಯುತ್ತದೆ. ಸ್ಪರ್ಧಿಗಳ ಸಂದರ್ಶನ, ಅನುಭವಗಾಥೆ, ಕೆಲವು ಪ್ರಮುಖ ಘಟನೆಗಳ ದೃಶ್ಯಗಳ ಪ್ರಸಾರ ತೋರಿಸಲಾಗುತ್ತದೆ. ಆದರೆ, ಈ ಬಾರಿ ಹಾಗಲ್ಲ. ‘ಬಿಗ್ ಬಾಸ್’ ಪ್ರಸಾರವಾಗುತ್ತಿದ್ದ ಸಮಯದಲ್ಲಿ ಸೋಮವಾರದಿಂದಲೇ ಎರಡು ಹೊಸ ಧಾರಾವಾಹಿಗಳು ಪ್ರಸಾರವಾಗಲಿವೆ. ಹಾಗಾದರೆ, ಯಾವಾಗ ಮತ್ತು ಹೇಗೆ ಮುಂದುವರೆಯುತ್ತದೆ ಎಂಬ ಕುತೂಹಲ ಸಹಜ.

    ‘ಬಿಗ್ ಬಾಸ್’ ಫ್ಯಾಮಿಲಿ: ಮೂಲಗಳ ಪ್ರಕಾರ, ಕಲರ್ಸ್ ಕನ್ನಡ ‘ಬಿಗ್ ಬಾಸ್’ ಫ್ಯಾಮಿಲಿ ಎಂಬ ಕಿರುಸೀಸನ್ ಪ್ರಾರಂಭಿಸಲಿದೆಯಂತೆ. ಕಲರ್ಸ್ ಕುಟುಂಬದ ಹಲವು ಧಾರಾವಾಹಿಗಳ ಪ್ರಮುಖ ಕಲಾವಿದರು, ‘ಬಿಗ್ ಬಾಸ್’ ಮನೆಗೆ ಹೋಗಿ ಅಲ್ಲಿ ಕೊಡುವ ಹಲವು ಟಾಸ್ಕ್​ಗಳಲ್ಲಿ ಭಾಗವಹಿಸಲಿದ್ದಾರಂತೆ. ಅದರಲ್ಲಿ ಗೆದ್ದವರಿಗೆ ‘ಬಿಗ್ ಬಾಸ್ ಫ್ಯಾಮಿಲಿ ಅವಾರ್ಡ್ಸ್’ ಕೊಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ಮೊದಲೇ ಹೇಳಿದಂತೆ ಇದೊಂದು ಕಿರು ಸೀಸನ್ ಆಗಿದ್ದು, ವಾರಾಂತ್ಯಗಳಲ್ಲಿ ಪ್ರಸಾರವಾಗಲಿದೆ.

    ಸುದೀಪ್ ಮನೆಯಿಂದ ಬಂತು ಬಿಸಿಬಿಸಿ ಊಟ

    ‘ಬಿಗ್ ಬಾಸ್’ ಮನೆಯಲ್ಲಿ ಈಡೇರದ ಒಂದು ಆಸೆಯನ್ನು, ಗಾರ್ಡನ್ ಏರಿಯಾದಲ್ಲಿರುವ ಕೃತಕ ಕಿವಿಯಲ್ಲಿ ಹೇಳಿಕೊಂಡರೆ, ಅವರ ಆಸೆ ನೆರವೇರಿಸಲಾಗುತ್ತದೆ ಎಂದು ಸೋಮವಾರದ ಎಪಿಸೋಡ್​ನಲ್ಲಿ ತೋರಿಸಲಾಗಿತ್ತು. ಅದರಂತೆ ದಿವ್ಯಾ ಉರುಡುಗ ತಮ್ಮ ಆಸೆ ಹೇಳಿಕೊಂಡಿದ್ದರು. ಸ್ಪರ್ಧಿಗಳಿಗೆ ಸುದೀಪ್ ಅಡುಗೆ ಮಾಡಿ ಕಳುಹಿಸಬೇಕೆಂದು ಆಸೆಪಟ್ಟಿದ್ದರು. ಅದರಂತೆ ಸುದೀಪ್ ಮಂಗಳವಾರದ ಎಪಿಸೋಡ್​ನಲ್ಲಿ ದಿವ್ಯಾ ಆಸೆ ಈಡೇರಿಸಿದ್ದಾರೆ. ಸ್ವತಃ ಅಡುಗೆ ಮಾಡಿ ಅದನ್ನು ಸ್ಪರ್ಧಿಗಳಿಗೆ ಕಳುಹಿಸಿಕೊಟ್ಟಿದ್ದಾರೆ. ಅಷ್ಟೇ ಅಲ್ಲ, ದಿವ್ಯಾಗೊಂದು ಪತ್ರವನ್ನೂ ಬರೆದಿದ್ದಾರೆ. ‘ಡಿಯು ಅವರೇ, ಕೇಳಿದ್ರೀ ನೀವು ಊಟ. ಪ್ರೀತಿಯಿಂದ ತಿನ್ನುತ್ತಾ ಸ್ವಲ್ಪ ಹೊತ್ತು ಬಿಡಿ ಅರವಿಂದ್ ಮೇಲಿನ ನೋಟ’ ಎಂದು ತಮಾಷೆ ಮಾಡಿದ್ದಾರೆ.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts