VIDEO| ಚಿತ್ರರಂಗದಿಂದ ನಾಪತ್ತೆಯಾಗಿ ಟಿಕ್​ಟಾಕ್​​ನಲ್ಲಿ ಪತ್ತೆಯಾದ ನಟಿಯರಿವರು...!

Rekha
Published on

ಚಿತ್ರರಂಗದಲ್ಲಿ ನಾಯಕ ನಟರಷ್ಟು ಹೆಚ್ಚು ಕಾಲ ನಟಿಯರು ಉಳಿಯಲಾರರು. ಕಡಿಮೆ ಅವಧಿಯಲ್ಲಿ ಅಭಿಮಾನಿಗಳನ್ನು ರಂಜಿಸಿ, ಮದುವೆಯಾಗಿ ಸಂಸಾರ ಜೀವನದತ್ತ ಹೊರಳುತ್ತಾರೆ. ಕೆಲ ನಟಿಯರ ಸುಳಿವೇ ಇಲ್ಲದೇ ಅಭಿಮಾನಿಗಳು ನಂತರದ ದಿನಗಳಲ್ಲಿ ಅವರನ್ನು ಮರತೇ ಬಿಡುತ್ತಾರೆ. ಹೀಗೆ ಮರೆಯಾದಂತಹ ನಟಿಯರನ್ನು ಟಿಕ್​ಟಾಕ್​ ಮತ್ತೆ ಅಭಿಮಾನಿಗಳ ಮುಂದೆ ತಂದು ನಿಲ್ಲಿಸಿದೆ.

ನಟಿ ನಿಖಿತಾ ತುಕ್ರಾಲ್​ ಹಾಗೂ ರೇಖಾ ವೇದವ್ಯಾಸ ಒಂದು ಕಾಲದಲ್ಲಿ ಕನ್ನಡ ಸಿನಿರಸಿಕರನ್ನು ಭರ್ಜರಿಯಾಗಿ ರಂಜಿಸಿದರು. ಅನೇಕ ಸ್ಟಾರ್ ನಟರ ನಟಿಸಿರುವ ಇವರು ಹಿಟ್​ ಚಿತ್ರಗಳನ್ನು ನೀಡಿದ್ದಾರೆ. ಆದರೆ, ನಂತರದ ದಿನಗಳಲ್ಲಿ ಮದುವೆಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಇವರು ಸದ್ಯ ಟಿಕ್​ಟಾಕ್​ನಲ್ಲಿ ತಮ್ಮ ಮನರಂಜನೆ ಮುಂದುವರಿಸಿದ್ದಾರೆ. ಇವರ ಸಾಲಿಗೆ ಐಂದ್ರಿತ ರೈ ಕೂಡ ಸೇರ್ಪಡೆಯಾಗಿದ್ದು, ದಿಗಂತ್​ ಮದುವೆಯಾದ ಮೇಲೆ ಐಂದ್ರಿತಾ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವುದು ಕಡಿಮೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net