ಒಂದು ಸರಳ ಪ್ರೇಮಕಥೆಯನ್ನು ಕೊಂಡಾಡಿದ ಮೋಹಕ ತಾರೆ

Ramya
Published on

ಬೆಂಗಳೂರು: ಸಿಂಪಲ್​ ಸುನಿ ನಿರ್ದೇಶನದ, ವಿನಯ್​ ರಾಜ್​ಕುಮಾರ್​ ನಟನೆಯ ಒಂದು ಸರಳ ಪ್ರೇಮ ಕಥೆ ಪ್ರೇಕ್ಷಕರಿಂದ ಉತ್ತಮ ರಸ್ಪಾನ್ಸ್​ ಪಡೆಯುವಲ್ಲಿ ಯಶಸ್ವಿಯಾಗಿದ್ದು, ಹೌಸ್​ಫುಲ್ ಪ್ರದರ್ಶನ ಕಾಣುತ್ತಿದೆ.

ಇನ್ನೂ ಚಿತ್ರವನ್ನು ವೀಕ್ಷಿಸಿರುವ ಸ್ಯಾಂಡಲ್​ವುಡ್​ ಕ್ವೀನ್​, ಮೋಹಕ ತಾರೆ ರಮ್ಯಾ ಸಿನಿಮಾವನ್ನು ಹಾಡಿಹೊಗಳಿದ್ದಾರೆ. ಒಂದು ಸರಳ ಪ್ರೇಮಕಥೆ ಒಂದು ಅದ್ಭುತ ಚಿತ್ರವಾಗಿದ್ದು, ಸ್ಕ್ರೀನ್​ಪ್ಲೇ ಚೆನ್ನಾಗಿ ಮೂಡಿ ಬಂದಿದೆ. ಚಿತ್ರವು ಹಾಸ್ಯ, ಭಾವುಕತೆಯ ಸರಿಯಾದ ಮಿಶ್ರಣ ಎಂದು ಹೇಲಿರುವ ರಮ್ಯಾ ವಿನಯ್​ ರಾಜ್​ಕುಮಾರ್​ ನಟನೆಯನ್ನು ಹಾಡಿ ಹೊಗಳಿದ್ದಾರೆ.

ವಿನಯ್ ರಾಜ್ ಕುಮಾರ್ ಹಾಗೂ ಸಿಂಪಲ್ ಸುನಿ ಜೋಡಿಯ ಒಂದು ಸರಳ ಪ್ರೇಮಕಥೆಗೆ ರಾಜ್ಯಾದ್ಯಂತ ಭರಪೂರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ನಿರೂಪಣೆ ಶೈಲಿ, ಕಾಮಿಡಿ ಟೈಮಿಂಗ್, ಎಮೋಷನ್, ನಾಯಕ ವಿನಯ್, ನಾಯಕಿಯಾರದ ಸ್ವಾತಿಷ್ಠ,‌ ಮಲ್ಲಿಕಾ ಅವರ ಅಭಿನಯ, ವೀರ್ ಸಮರ್ಥ್ ಸಂಗೀತ ಸಿನಿರಸಿಕರಿಗೆ ಇಷ್ಟವಾಗುತ್ತಿದೆ. ವಿಮರ್ಷಕರಿಂದ ಹಾಗೂ ಪ್ರೇಕ್ಷಕರಿಂದ ಒಳ್ಳೆ ಅಭಿಪ್ರಾಯ ಪಡೆದುಕೊಳ್ಳುವಲ್ಲಿ ಚಿತ್ರ ಯಶಸ್ವಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net