

ಬೆಂಗಳೂರು: ಹೊಸತನ್ನು ಶುರು ಮಾಡಲು ಯುಗಾದಿ ಹಬ್ಬ ಶುಭ ಸಂದರ್ಭ. ಸಾಕಷ್ಟು ಹೊಸ ಸಿನಿಮಾಗಳು ಈ ವೇಳೆ ಸೆಟ್ಟೇರುತ್ತವೆ, ೋಷಣೆ ಆಗುತ್ತವೆ, ಟ್ರೇಲರ್, ಪೋಸ್ಟರ್, ಹೀಗೆ ಹಲವಾರು ಅಪ್ಡೇಟ್‌ಗಳನ್ನು ನೀಡುತ್ತವೆ. ಈ ಬಾರಿಯ ಯುಗಾದಿ ಹಬ್ಬದಂದು ಸಾಲು ಸಾಲು ಸಿನಿಮಾಗಳು ಹೊಸ ವಿಷಯಗಳ ಮೂಲಕ ಸದ್ದು ಮಾಡುತ್ತಿವೆ.
ಡಾಲಿ ಕೋಟಿ ಲುಕ್:
‘ಗುರುದೇವ್ ಹೊಯ್ಸಳ’ ಬಳಿಕ ಡಾಲಿ ಧನಂಜಯ ನಾಯಕನಾಗಿ ಅಭಿನಯಿಸುತ್ತಿರುವ ಸಿನಿಮಾ ‘ಕೋಟಿ’. ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿರುವ ಪರಮ್, ಚೊಚ್ಚಲ ಬಾರಿಗೆ ಡೈರೆಕ್ಟರ್ ಕ್ಯಾಪ್ ಧರಿಸಿದ್ದಾರೆ. ಯುಗಾದಿ ಹಬ್ಬಕ್ಕೆ ಚಿತ್ರದ ಪೋಸ್ಟರ್ ರಿಲೀಸ್ ಮಾಡಲಾಗಿದ್ದು, ಮುಖಕ್ಕೆ ನೋಟು ಮುಚ್ಚಿದ ವಿಭಿನ್ನ ಲುಕ್‌ನಲ್ಲಿ ಡಾಲಿ ಧನಂಜಯ ಕಾಣಿಸಿಕೊಂಡಿದ್ದಾರೆ. ಕನಸು ಕಾಣುವ, ದುಡ್ಡಿಗಾಗಿ ಒದ್ದಾಡುವ ಸಾಮಾನ್ಯ ವ್ಯಕ್ತಿಯ ಕಥೆ ‘ಕೋಟಿ’. ಪೋಸ್ಟರ್ ಬಿಡುಗಡೆ ಮಾಡುವ ಜತೆಗೆ ಇದೇ ಶನಿವಾರ (ಏ.13) ಚಿತ್ರದ ಟೀಸರ್ ರಿಲೀಸ್ ಮಾಡುವುದಾಗಿ ಚಿತ್ರತಂಡ ೋಷಣೆ ಮಾಡಿದೆ. ಚಿತ್ರಕ್ಕೆ ನೊಬಿನ್ ಪೌಲ್ ಹಿನ್ನೆಲೆ ಸಂಗೀತ, ವಾಸುಕಿ ವೈಭವ್ ಗೀತೆ ಸಂಯೋಜನೆ, ಅರುಣ್ ಬ್ರಹ್ಮನ್ ಛಾಯಾಗ್ರಹಣವಿದೆ.
ಗಣೇಶ್ ಮತ್ತು ಸಖಿಯರು:
ಗಣೇಶ್ ನಾಯಕನಾಗಿರುವ 41ನೇ ಸಿನಿಮಾ ‘ಕೃಷ್ಣಂ ಪ್ರಣಯ ಸಖಿ’. ಚಿತ್ರಕ್ಕೆ ಶ್ರೀನಿವಾಸರಾಜು ಆ್ಯಕ್ಷನ್-ಕಟ್ ಹೇಳಿದ್ದು, ಯುಗಾದಿ ಹಬ್ಬಕ್ಕೆ ಚಿತ್ರದ ಪೋಸ್ಟರ್ ರಿಲೀಸ್ ಮಾಡಲಾಗಿದೆ. ಇದೊಂದು ಕೌಟುಂಬಿಕ ಕಥಾಹಂದರದ ಚಿತ್ರ. ಪೋಸ್ಟರ್‌ನಲ್ಲಿ ಸಾಮೂಹಿಕ ಮದುವೆಯ ವಾತಾವರಣ ಸೃಷ್ಟಿಸಲಾಗಿದೆ. ಹಾಗೇ ಹಲವು ನಟಿಯರು ವಧುವಿನ ಲುಕ್‌ನಲ್ಲಿ ಹಾಗೂ ಅವರ ನಡುವೆ ಗಣೇಶ್ ಒಬ್ಬರೇ ವರನಂತೆ ನಿಂತಿರುವುದು ಕಾಣಬಹುದು. ಚಿತ್ರದಲ್ಲಿ ಗಣೇಶ್‌ಗೆ ಮಾಳವಿಕಾ ನಾಯರ್ ಮತ್ತು ಶರಣ್ಯ ಶೆಟ್ಟಿ ಇಬ್ಬರು ನಾಯಕಿಯರು. ಜತೆಗೆ ಶ್ರೀನಿವಾಸಮೂರ್ತಿ, ಸಾಧು ಕೋಕಿಲ, ರಂಗಾಯಣ ರಘು, ಶಶಿಕುಮಾರ್, ಶ್ರುತಿ, ಭಾವನಾ, ಅಶೋಕ್, ರಾಮಕೃಷ್ಣ, ಶಿವಧ್ವಜ್, ರಘುರಾಮ್, ಮಾನಸಿ ಸುಧೀರ್, ಅಂಬುಜ, ಗಿರಿ ಶಿವಣ್ಣ ಪ್ರಮುಖ ತಾರಾಗಣದಲ್ಲಿದ್ದಾರೆ.
ರಿಪ್ಪನ್ ಸ್ವಾಮಿಯಾದ ವಿಜಯ್:
ವಿಜಯ್ ರಾಘವೇಂದ್ರ ಅಭಿನಯದ ‘ಮಾಲ್ಗುಡಿ ಡೇಸ್’ ಖ್ಯಾತಿಯ ನಿರ್ದೇಶಕ ಕಿಶೋರ್ ಮೂಡುಬಿದ್ರೆ ನಿರ್ದೇಶನದ ಸಿನಿಮಾ ‘ರಿಪ್ಪನ್ ಸ್ವಾಮಿ’. ಈಗಾಗಲೇ 48 ದಿನಗಳ ಚಿತ್ರೀಕರಣ ಪೂರ್ಣಗೊಂಡಿದ್ದು, ಸಿನಿಮಾ ಜೂನ್ ಅಥವಾ ಜುಲೈನಲ್ಲಿ ರಿಲೀಸ್ ಮಾಡುವ ಆಲೋಚನೆ ಚಿತ್ರತಂಡದ್ದು. ಈಗ ಪೋಸ್ಟರ್ ರಿಲೀಸ್ ಮಾಡಿದ್ದು ವಿಭಿನ್ನ ಶೇಡ್‌ನಲ್ಲಿ ವಿಜಯ್ ಕಾಣಿಸಿಕೊಂಡಿದ್ದಾರೆ. ಅಶ್ವಿನಿ ಚಂದ್ರಶೇಖರ್, ಪ್ರಕಾಶ್ ತುಮ್ಮಿನಾಡು, ವಜ್ರದೀರ್ ಜೈನ್, ಯಮುನಾ ಶ್ರೀನಿಧಿ, ಮೋಹನ್ ಶೇಣಿ, ಕೃಷ್ಣಮೂರ್ತಿ ಕವತ್ತಾರ್ ತಾರಾಗಣದಲ್ಲಿದ್ದಾರೆ. ಮಲಯಾಳಂನ ಸಂಗೀತ ನಿರ್ದೇಶಕ ಸ್ಯಾಮ್ಯುವೆಲ್ ಅಭಿ ಸಂಗೀತ ಚಿತ್ರಕ್ಕಿದೆ.
ವೆಟ್ಟೈಯಾನ್ ರಜಿನಿ:
ರಜಿನಿಕಾಂತ್ ಅಭಿನಯದ 170ನೇ ಸಿನಿಮಾ ‘ವೆಟ್ಟೈಯಾನ್’. ಚಿತ್ರಕ್ಕೆ ಟಿ.ಎಸ್. ಜ್ಞಾನವೇಲ್ ಆೃಕ್ಷನ್-ಕಟ್ ಹೇಳಿದ್ದಾರೆ. ಇದೇ ವರ್ಷ ಅಕ್ಟೋಬರ್‌ನಲ್ಲಿ ಸಿನಿಮಾ ತೆರೆಕಾಣಲಿದ್ದು, ಇದೀಗ ಹೊಸ ಪೋಸ್ಟರ್ ರಿಲೀಸ್ ಮಾಡಲಾಗಿದೆ. ಕೈಯಲ್ಲಿ ಗನ್ ಹಿಡಿದು ಮಾಸ್ ಲುಕ್‌ನಲ್ಲಿ ರಜಿನಿ ಕಾಣಿಸಿಕೊಂಡಿದ್ದಾರೆ. 33 ವರ್ಷಗಳ ಬಳಿಕ ರಜಿನಿಕಾಂತ್ ಜತೆ ಅಮಿತಾಭ್ ಬಚ್ಚನ್ ತೆರೆಹಂಚಿಕೊಳ್ಳುತ್ತಿರುವುದು ವಿಶೇಷ. ರಜನಿಕಾಂತ್, ಅಮಿತಾಭ್ ಬಚ್ಚನ್ ಜತೆ ರಾಣಾ ದಗ್ಗುಬಾಟಿ, ಫಹಾದ್ ಫಾಸಿಲ್, ಮಂಜು ವಾರಿಯರ್, ರಿತಿಕಾ ಸಿಂಗ್, ವಿಜಯನ್, ಜಿಎಂ ಸುಂದರ್, ರೋಹಿಣಿ, ಅಭಿರಾಮಿ, ರಾವ್ ರಮೇಶ್, ರಮೇಶ್ ತಿಲಕ್, ರಕ್ಷಣ್ ಮುಖ್ಯ ತಾರಾಗಣದಲ್ಲಿದ್ದಾರೆ.
ಇನ್ನೂ ಹಲವು ಚಿತ್ರಗಳು:
ಲಿಖಿತ್ ಶೆಟ್ಟಿ ನಾಯಕನಾಗಿರುವ ಖುಷಿ ರವಿ ಹಾಗೂ ತೇಜಸ್ವಿನಿ ನಾಯಕಿಯರಾಗಿರುವ ವಿನಾಯಕ್ ಚೊಚ್ಚಲ ಬಾರಿಗೆ ನಿರ್ದೇಶನ ಮಾಡುತ್ತಿರುವ ಸಿನಿಮಾ ‘ುಲ್ ಮೀಲ್ಸ್’. ವೆಡ್ಡಿಂಗ್ ೆಟೋಗ್ರಾರ್ ಸುತ್ತ ಸುತ್ತುವ ಕಥಾಹಂದರ ಹೊಂದಿರುವ ಸಿನಿಮಾ ಇದಾಗಿದ್ದು, ಯುಗಾದಿ ಹಬ್ಬದಂದು ಹೊಸ ಪೋಸ್ಟರ್ ರಿಲೀಸ್ ಮಾಡಲಾಗಿದೆ. ಜತೆಗೆ ‘ಬನಾರಸ್’ ಬಳಿಕ ಜೈದ್ ಖಾನ್ ಅಭಿನಯಿಸುತ್ತಿರುವ, ‘ಉಪಾಧ್ಯಕ್ಷ’ ಖ್ಯಾತಿಯ ಅನಿಲ್ ಕುಮಾರ್ ನಿರ್ದೇಶನದ ಹೊಸ ಸಿನಿಮಾದ ಸ್ಟ್ ಲುಕ್ ಜತೆ ಶೀರ್ಷಿಕೆ ೋಷಣೆ ಮಾಡಲಾಗಿದ್ದು, ಚಿತ್ರಕ್ಕೆ ‘ಕಲ್ಟ್’ ಎಂದು ಹೆಸರಿಡಲಾಗಿದೆ. ದಿಗಂತ್ ಅಭಿನಯದ ‘ಪೌಡರ್’ ಚಿತ್ರದ ಹೊಸ ಪೋಸ್ಟರ್ ರಿಲೀಸ್ ಜತೆಗೆ ಜು.7ರಂದು ಸಿನಿಮಾ ರಿಲೀಸ್ ಮಾಡುವುದಾಗಿ ಚಿತ್ರತಂಡ ೋಷಿಸಿದೆ. ‘ಶಾಲಿವಾಹನ ಶಕೆ’, ‘ಮರ್ಯಾದೆ ಪ್ರಶ್ನೆ’ ಸೇರಿ ಹಲವಾರು ಸಿನಿಮಾಗಳ ಪೋಸ್ಟರ್ ರಿಲೀಸ್ ಮಾಡಲಾಗಿದೆ.