

ಬೆಂಗಳೂರು: ಸ್ಯಾಂಡಲ್ವುಡ್(Sandalwood) ನಟಿ ಹರ್ಷಿಕಾ ಪೂಣಚ್ಚ ತಮ್ಮ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಭುವನ್ ಪೊನ್ನಣ್ಣ ಹಾಗೂ ಹರ್ಷಿಕಾ ಪೂಣಚ್ಚ ಸ್ಯಾಂಡಲ್ವುಡ್ನ ಈ ಕ್ಯೂಟ್ ಕಪಲ್ ರವಿವರ್ಮ ಪೇಂಟಿಂಗ್ ಥೀಮ್‌ನಲ್ಲಿ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿರುವುದು ಗೊತ್ತೆ ಇದೆ. ಸದ್ಯ ಅದರ ಮೂರನೇ ಲುಕ್ ಫೋಟೋ ಶೂಟ್ ಅನ್ನು ಹರ್ಷಿಕಾ ಉತ್ಸಾಹದಿಂದ ಹಂಚಿಕೊಂಡಿದ್ದಾರೆ. ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
ಅಂದ್ಹಾಗೆ ರವಿ ವರ್ಮನ ಚಿತ್ರಗಳನ್ನ ರೀ-ಕ್ರಿಯೇಟ್ ಮಾಡೋದು ಅಷ್ಟು ಸುಲಭದ ಮಾತಲ್ಲ. ಏಕೆಂದರೆ ಚಿತ್ರಗಳಿಗೆ ಅದೇ ರೀತಿಯ ಕಾಸ್ಟೂಮ್ ಜತೆಗೆ ಲೈಟಿಂಗ್ ಕೂಡ ಇರಬೇಕು. ಆದರೆ ಹರ್ಷಿಕಾ ಪೂಣಚ್ಛ ಕ್ಲಾಸಿಕ್ ಚಿತ್ರಗಳಿಗೆ ನಿಜಕ್ಕೂ ಜೀವ ತುಂಬಿದ್ದಂತಿದೆ. ಸರಳ ಹಾಗೂ ಸಾಂಪ್ರದಾಯಿಕ ನೋಟದಲ್ಲಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ.
ರಾಜಾ ರವಿ ವರ್ಮನ ಕಲ್ಪನೆಯ ಚಿತ್ರಕ್ಕೆ ಜೀವ ತುಂಬಿರುವ ಹರ್ಷಿಕಾ ಹಂಸ ದಮಯಂತಿ ಚಿತ್ರದಂತೆ ಫೋಸ್ ಕೊಟ್ಟಿರುವ ತಮ್ಮ ಮೂರನೇ ಲುಕ್ ಫೋಟೋ ಶೂಟ್ ಅನ್ನು ರಿವೀಲ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವಾಗ ಈ ಒಂದು ಲುಕ್ ರಿವೀಲ್ ಮಾಡೋಕೆ ಇನ್ನಿಲ್ಲದಂತಹ ಸಂತೋಷ ಆಗುತ್ತಿದೆ ಅಂತಲೂ ಬರೆದುಕೊಂಡಿದ್ದಾರೆ.
ಈಗಾಗಲೇ ಎರಡು ಲುಕ್ ಅಲ್ಲಿ ಹರ್ಷಿಕಾ ಪೂಣಚ್ಚ ಕಾಣಿಸಿಕೊಂಡಿದ್ದಾರೆ. ತಿಳಿ ಗುಲಾಬಿ ಬಣ್ಣದ ಅಪ್ಪಟ ಮೈಸೂರು ಸಿಲ್ಕ್ ಸೀರೆ ಹಾಗೂ ಗಾಡ ಹಸಿರು ಬಣ್ಣದ ಸಿಂಪಲ್ ಬ್ಲೌಸ್, ಕಾಸಿನ ಸರ, ಹಸಿರುಬಳೆ, ಬೈತಲೆ ತೆಗೆದು ಕಟ್ಟಿದ ತುರುಬಿನಲ್ಲಿರೋ ಮಲ್ಲಿಗೆ, ಹಣೆಯ ಮೇಲಿನ ಬೊಟ್ಟು, ಮುತ್ತಿನ ಸರ ಎಲ್ಲವೂ ಹರ್ಷಿಕಾ ತಾಯ್ತನದ ಕಳೆಯನ್ನು ಮತ್ತಷ್ಟು ಹೆಚ್ಚಿಸಿತ್ತು..
ಹರ್ಷಿಕಾ ಮತ್ತು ಭುವನ್ ದಂಪತಿಯ ಚೊಚ್ಚಲ ಮಗು ಆಗಮನಕ್ಕೆ ದಿನಗಣನೆ ಶುರುವಾಗಿದ್ದು, ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ.