ಕುಡಿತ-ಸಿಗರೇಟ್​ ಅಭ್ಯಾಸ ಇದ್ದದ್ದು ನಿಜ ಎಂದ ಲೂಸ್​ಮಾದ, ರಾಗಿಣಿ ಬಗ್ಗೆ ಹೇಳಿದ್ದೇನು?

loose mada- ragini
Published on

ಬೆಂಗಳೂರು: ಡ್ರಗ್ಸ್​ ಕೇಸ್​ ಸಂಬಂಧ ಐಎಸ್​ಡಿ ವಿಚಾರಣೆ ಎದುರಿಸಿದ್ದ ಲೂಸ್ ಮಾದ ಯೋಗಿ 'ಮಾದಕ' ನಂಟಿನ ಬಗ್ಗೆ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಹತ್ವದ ಮಾಹಿತಿ ಹೊರಹಾಕಿದ್ರು.

ಹೊಸಕೆರೆಹಳ್ಳಿ ನಿವಾಸದ ಬಳಿ ಮಧ್ಯಾಹ್ನ 12.10ರ ಸುಮಾರಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಲೂಸ್​ಮಾದ, 2013ರಲ್ಲಿ ರಾಗಿಣಿ ನಾನು ಸಿನಿಮಾ ಮಾಡಿದ್ದೆ. ಅವರ ನನ್ನ ಸಂಬಂಧ ಸಿನಿಮಾಕ್ಕಷ್ಟೆ. ನನಗೆ ಡ್ರಗ್ಸ್​ ಪೆಡ್ಲರ್​ಗಳ ಜತೆ ಲಿಂಕ್​ ಇಲ್ಲ. ನಾನು ಯಾವ ಪಾರ್ಟಿಗೂ ಹೋಗಿಲ್ಲ. ಕುಡಿತ, ಸಿಗರೇಟ್​ ಸೇವನೆ ಅಭ್ಯಾಸ ಇದ್ದದ್ದು ನಿಜ ಈ ಬಗ್ಗೆ ಐಎಸ್​ಡಿ ವಿಚಾರಣೆ ವೇಳೆ ಹೇಳಿದ್ದೇನೆ ಎಂದರು. ಇದನ್ನೂ ಓದಿರಿ ಮತ್ತೊಂದು ಎಡವಟ್ಟು ಮಾಡಿಕೊಂಡ ಲೂಸ್​ ಮಾದ!

ಐಎಸ್​ಡಿಯಿಂದ ನನಗೆ ಶುಕ್ರವಾರ ನೋಟಿಸ್​ ಬಂದಿತ್ತು. ಇದನ್ನು ಕಂಡು ಆಶ್ಚರ್ಯ ಆಯ್ತು. ನನಗಷ್ಟೇ ಅಲ್ಲ 15-20 ಮಂದಿಗೆ ನೋಟಿಸ್​ ಹೋಗಿದೆ. ನನ್ನನ್ನು ಎರಡು ಗಂಟೆ ಕಾಲ ವಿಚಾರಣೆ ಮಾಡಿದರು. ರಾಗಿಣಿ ಬಗ್ಗೆ ನನ್ನನ್ನು ಏನೂ ಕೇಳಲಿಲ್ಲ. 2011-2012ರ ನಂತರ ನಾನು ಹೆಚ್ಚಾಗಿ ಪಾರ್ಟಿಗಳಿಗೇ ಹೋಗಿಲ್ಲ. ರಾಗಿಣಿ ದ್ವಿವೇದಿ, ಐಂದ್ರಿತಾ ರೇ ಹೊರತುಪಡಿಸಿ ಡ್ರಗ್ಸ್​ ಕೇಸ್​ನ ಆರೋಪಿಗಳು ಯಾರು ನನಗೆ ಗೊತ್ತಿಲ್ಲ ಎಂದು ಲೂಸ್​ಮಾದ ಯೋಗಿ ಸ್ಪಷ್ಟಪಡಿಸಿದರು.

ಸಾಲು ಸಾಲು ಸಿನಿಮಾಗಳು ಸೋತಾಗ ಡಿಪ್ರೆಷನ್​ಗೆ ಜಾರಿದ್ದು ನಿಜ. ಆಗ ಮದ್ಯಪಾನ, ಧೂಮಪಾನ ಸೇವನೆ ಹೆಚ್ಚಾಗಿತ್ತು. ಆದರೀಗ ಎಲ್ಲವನ್ನೂ ಕಡಿಮೆ ಮಾಡಿದ್ದೇನೆ ಎಂದ ಯೋಗಿ, ಸ್ಯಾಂಡಲ್​ವುಡ್​ ಡ್ರಗ್ಸ್ ಜಾಲ ಅಂತ ಹೇಳೋದು ಬೇಡ. ಯಾರೋ ಕೆಲವರು ಮಾಡೋ ಕೆಲಸಕ್ಕೆ ಪೂರ್ತಿ ಚಿತ್ರರಂಗವನ್ನು ಹೊಣೆ ಮಾಡೋದು ಬೇಡ. ಸಿನಿಮಾದವರು ಮಾತ್ರವಲ್ಲ, ವಿರೇನ್ ಖನ್ನಾ ಸೇರಿದಂತೆ ಹಲವರು ಹೊರಗಿನವರು ಬಂಧನವಾಗಿದ್ದಾರೆ. ರಾಜಕಾರಣಿಗಳ ಮಕ್ಕಳ ಹೆಸರೂ ಕೇಳಿ ಬರುತ್ತಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net