ಏನೂ ನಡೆಯುತ್ತಿಲ್ಲ ಅನ್ನೋಕೆ ನಾವು ಸ್ವರ್ಗದಲ್ಲಿಲ್ಲ, ಅಲ್ವಸ್ವಲ್ಪ ಇದ್ದೇ ಇರುತ್ತೆ; ಸುದೀಪ್​

WhatsApp Image 2020-09-01 at 2.42.49 PM
Published on

ಕಿಚ್ಚ ಸುದೀಪ್​ ಡ್ರಗ್​ ಮಾಫಿಯಾ ಬಗ್ಗೆ ಮಾತನಾಡಿದ್ದಾರೆ. ಚಿತ್ರರಂಗದಲ್ಲಿ ಕೇಳಿಬರುತ್ತಿರುವ ಮಾತುಗಳಿಗೆ ಪ್ರತಿಕ್ರಿಯಿಸಿದ್ದಾರೆ. ನಿರ್ದೇಶಕ ಇಂದ್ರಜಿತ್​ ಲಂಕೇಶ್ ಜತೆ ತುಮಕೂರಿನ ಸಿದ್ಧಗಂಗಾ ಮಠಕಕೆ ಭೇಟಿ ಕೊಟ್ಟು ಮಾತನಾಡಿರುವ ಅವರು, ‘ಏನೂ ನಡೆಯುತ್ತಿಲ್ಲ ಅನ್ನೋಕೆ ನಾವು ಸ್ವರ್ಗದಲ್ಲಿಲ್ಲ, ಅಲ್ವಸ್ವಲ್ಪ ಇದ್ದೇ ಇರುತ್ತೆ’ ಎಂದಿದ್ದಾರೆ.

‘ಚಿತ್ರರಂಗಕ್ಕೆ ಇದಕ್ಕಿಂತ ದೊಡ್ಡ ದೊಡ್ಡ ಗಂಡಾಂತರಗಳು ಬಂದೋಗಿವೆ. ಆವಾಗ ಆವಾಗ ಏನಾದರೊಂದು ಏಟು ಬಿಳ್ಳುತ್ತಲೇ ಇದೆ. ಟ್ಯಾಕ್ಸ್ ವಿಚಾರ ಇರಬಹುದು, ಭಾಷೆ ವಿಚಾರ ಎಲ್ಲವೂ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿವೆ. ಆ ಎಲ್ಲವನ್ನು ಎದುರಿಸಿ ಫೈಟ್ ಮಾಡಿ ಚಿತ್ರರಂಗ ಇಲ್ಲಿಯವರೆಗೂ ಬಂದಿದೆ. ಅದ್ಬುತವಾದ ಇಂಡಸ್ಟ್ರಿಯಾಗಿ ಬೆಳೆದು ನಿಂತಿದೆ. ಈ ಥರದ ಚಿಕ್ಕ ಚಿಕ್ಕ ಸಮಸ್ಯೆಗಳು ಎದುರಾಗುತ್ತಲೇ ಇರುತ್ತವೆ. ಏನೂ ನಡೆಯುತ್ತಿಲ್ಲ ಅನ್ನೋಕೆ ನಾವು ಸ್ವರ್ಗದಲ್ಲಿಲ್ಲ, ಅಲ್ವಸ್ವಲ್ಪ ಇದ್ದೇ ಇರುತ್ತೆ’ ಎಂದು ಪ್ರತಿಕ್ರಿಯಿಸಿದ್ದಾರೆ.

‘ಮೂರು ತಿಂಗಳ ಹಿಂದೆ ಕರೊನಾ ಎಂದಾಗ ಎಲ್ಲರೂ ಭಯದಲ್ಲೇ ಕಾಲಕಳೆದಿದ್ವಿ. ಇದೀಗ ಆ ಕಾಲ ಬದಲಾಗಿದೆ. ಭಯ ಬದಿಗಿಟ್ಟು, ಕರೊನಾವನ್ನೇ ಫೇಸ್​ ಮಾಡುತ್ತಿದ್ದೇವಲ್ಲ. ಸಿನಿಮಾದಲ್ಲಿ ನಾನು ಹೀರೋ ಇರಬಹುದು, ಆದರೆ, ನನಗೂ ಆ ಭಯ ಇದೆ. ನನಗೂ ಅಪ್ಪ, ಅಮ್ಮ, ಹೆಂಡತಿ ಮಕ್ಕಳಿದ್ದಾರೆ. ಎದುರಿಸಬೇಕು ಎಂಬ ದೃಷ್ಟಿಯಿಂದಲೇ ಶೂಟಿಂಗ್​ನಲ್ಲಿ ಪಾಲ್ಗೊಂಡಿದ್ದೇನೆ’ ಎಂದೂ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net