ಡಿ ಬಾಸ್​ ನಿವಾಸಕ್ಕೆ ಪಾದಯಾತ್ರೆ ಆರಂಭಿಸಿದ ಅಭಿಮಾನಿ

darshan
Published on

ರಾಯಚೂರು: ಸ್ಯಾಂಡಲ್​ವುಡ್​​ ನಟ, ಅಭಿಮಾನಿಗಳ ನೆಚ್ಚಿನ ದಾಸ, ಡಿ ಬಾಸ್​​ ಹುಟ್ಟುಹಬ್ಬದ ತಯಾರಿ ಜೋರಾಗಿದೆ. ದಾಸ ದರ್ಶನ್  ಜನ್ಮ ದಿನವನ್ನ ಅಭಿಮಾನಿಗಳು ಹಬ್ಬದಂತೆ ಆಚರಣೆ ಮಾಡುತ್ತಾರೆ. ಒಂದು ತಿಂಗಳ ಮುಂಚೇನೆ ಇವರ ತಯಾರಿ ಶುರು ಆಗುತ್ತದೆ. ಇಲ್ಲೊಬ್ಬ ಅಭಿಮಾನಿ ನಟ ದರ್ಶನ ಹುಟ್ಟು ಹಬ್ಬದ ಹಿನ್ನೆಲೆ ನೆಚ್ಚಿನ ನಟನ ನಿವಾಸಕ್ಕೆ ಹುಟ್ಟೂರಿನಿಂದ ಪಾದಯಾತ್ರೆ ಹೊರಟಿದ್ದಾನೆ.

ಫೆ.16ರಂದು ದರ್ಶನ ಹುಟ್ಟು ಹಬ್ಬ. ಈ ಬಾರಿ ಹುಟ್ಟುಹಬ್ಬದ ಜೊತೆಗೆ ಕಾಟೇರಾ ಸಿನಿಮಾ ಸಕ್ಸಸ್ ಸೇರಿ ದೊಡ್ಡ ಹಬ್ಬವೇ ಆಗಲಿದೆ. ಇನ್ನೇನು ಕೇವಲ 7ದಿನಗಳಷ್ಟೇ ಬಾಕಿ ಉಳಿದಿವೆ. ಕೆಲವು ಅಭಿಮಾನಿಗಳು ದರ್ಶನ್‌ ಮೇಲಿನ ಅಭಿಮಾನದಿಂದ ಕಾಲ್ನಡಿಗೆಯಲ್ಲಿ ದೂರದ ಊರುಗಳಿಂದ ಬೆಂಗಳೂರಿನತ್ತ ಬರುತಿದ್ದಾರೆ.
ನಟ ದರ್ಶನ್‌ರ ಕಟ್ಟಾ ಅಭಿಮಾನಿಯಾಗಿರುವ ಭದ್ರಿ(ವೀರಭದ್ರಪ್ಪ) ಪಾದಯಾತ್ರೆ ಪಾದಯಾತ್ರೆ ಆರಂಭಿಸಿದ್ದಾರೆ. ಗುರುಗುಂಟಾ ಅಮರೇಶ್ವರ ದೇವರಿಗೆ ವಿಶೇಷ ಸಲ್ಲಿಸಿ ಪಾದಯಾತ್ರೆ ಆರಂಭಿಸಿರುವ ಅಭಿಮಾನಿ. ಹುಟ್ಟುಹಬ್ಬದ ದಿನದಂದು ದರ್ಶನ್‌ರ ನಿವಾಸಕ್ಕೆ ತೆರಳಿ ಶುಭಕೋರಲಿರುವ ಅಭಿಮಾನಿ. ಭದ್ರಿ ರಾಯಚೂರು ಜಿಲ್ಲೆಯ ಲಿಂಗಸೂರು ತಾಲೂಕಿನ ಗೌಡೂರು ಗ್ರಾಮದವರಾಗಿದ್ದಾರೆ.
ವೀರಭದ್ರಪ್ಪ ಒಬ್ಬ ಡ್ಯಾನ್ಸ್ ಮಾಸ್ಟರ್ ಆಗಿದ್ದಾರೆ. ನಟ ದರ್ಶನ್‌ರ ಬಗ್ಗೆ ಎಲ್ಲಿಲ್ಲದ ಅಭಿಮಾನ. ಈ ಅಭಿಮಾನದಿಂದಲೇ ಈ ಬಾರಿ ಪಾದಯಾತ್ರೆ ಮಾಡಿ ದರ್ಶನ್‌ ಹುಟ್ಟಹಬ್ಬದ ಸಂಭ್ರಮದಲ್ಲಿ ಭಾಗಿಯಾಗಲು ಪಾದಯಾತ್ರೆ ಆರಂಭಿಸಿದ್ದಾರೆ.
https://www.vijayavani.net/social-media-star-deeksha-has-quit-her-government-job-to-take-part-in-gicchi-gili-gili-3-viral-news
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net