ಸಂಯುಕ್ತಾ ಹೆಗ್ಡೆಗೆ ಪ್ರಾಣಿಗಳ ಕಣ್ಣು ತಿನ್ನೋ ಟಾಸ್ಕ್! Samyukta Hegde

samyuktha hegde
Published on

ಬೆಂಗಳೂರು: ಸ್ಯಾಂಡಲ್​ವುಡ್​​​ ನಟಿ ಸಂಯುಕ್ತಾ ಹೆಗ್ಡೆ ( Samyukta Hegde ) ರಿಯಾಲಿ ಶೋವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಈ ಕಾರ್ಯಕ್ರಮದಲ್ಲಿ ಸ್ಪರ್ಧಿಗಳಿಗೆ ಪ್ರಾಣಿ ಒಂದರ ಕಣ್ಣು ತಿನ್ನುವ ಟಾಸ್ಕ್​​ ನೀಡಲಾದ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​ ಆಗಿದೆ.

ಖಾಸಗಿವಾಹಿನಿಯಲ್ಲಿ ಪ್ರಸಾರ ಆಗುವ ‘ರಿಯಾಲಿಟಿ ರಾಣಿಸ್ ಆಫ್ ಜಂಗಲ್’ನ ಎರಡನೇ ಸೀಸನ್​ನಲ್ಲಿ ಸಂಯುಕ್ತಾ ಕಾಣಿಸಿಕೊಂಡಿದ್ದಾರೆ. ಇಲ್ಲಿ ‘ಐ ಬಕೆಟ್ ಚಾಲೆಂಜ್’ ನೀಡಲಾಗಿದೆ.

ಈ ಚಾಲೆಂಜ್ ಅನುಸಾರವಾಗಿ ಪ್ರಾಣಿ ಒಂದರ ಕಣ್ಣುಗಳನ್ನು ಇಡಲಾಗಿದೆ. ಹಸಿಯಾಗಿರುವ ಈ ಕಣ್ಣುಗಳನ್ನು ತಿನ್ನೋ ಚಾಲೆಂಜ್ ಇದು. ಕಣ್ಣುಗಳನ್ನು ತಿನ್ನಲು ಹೋಗಿ ಕೆಲವರು ವಾಂತಿ ಮಾಡಿಕೊಂಡಿದ್ದಾರೆ. ಈ ಟಾಸ್ಕನ ಪ್ರೋಮೋವನ್ನು ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗಿದೆ.

ಸಂಯುಕ್ತಾ ಹೆಗ್ಡೆ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾಜಿ ಗೆಳೆಯ ಬಸೀರ್ ಅಲಿ ಅವರ ಕುರಿತಾಗಿ ಬಹಿರಂಗವಾಗಿ ಮಾತನಾಡಿದ್ದರು. ಈ ಕುರಿತಾದ ಸುದ್ದಿ ಸೋಶಿಯಲ್​ ಮಿಡಿಯಾದಲ್ಲಿ ವೈರಲ್​​ ಆಗಿತ್ತು.

ನನಗೆ ಬಸೀರ್ ಚೆನ್ನಾಗಿ ಗೊತ್ತು. ಅವನು ಒಳ್ಳೆಯ ಸ್ನೇಹಿತ. ಆದರೆ ಅವನು ಒಬ್ಬ ಭಯಾನಕ ಸಂಗಾತಿ ಕೂಡ. ನಾನು ಅವನನ್ನು ಅನೇಕ ಹುಡುಗಿಯರೊಂದಿಗೆ ನೋಡಿದ್ದೇನೆ. ನಾನು ಸ್ವಲ್ಪ ಸಮಯದಿಂದ ಅವನೊಂದಿಗೆ ಸ್ನೇಹಿತಳಾಗಿದ್ದೇನು ಅವನು ಒಳ್ಳೆಯ ಗೆಳೆಯನಲ್ಲ. ಅದು ಅವನ ಸ್ವಭಾವ. ಅವನು ಹುಡುಗಿಯರೊಂದಿಗೆ ಚೆಲ್ಲಾಟವಾಡಲು ಇಷ್ಟಪಡುತ್ತಾನೆ. ಅವನು ತನ್ನ ಗೆಳತಿಯ ಮುಂದೆ ಹುಡುಗಿಯರೊಂದಿಗೆ ಚೆಲ್ಲಾಟವಾಡುತ್ತಾನೆ. ಆದ್ದರಿಂದ ಅವನು ಒಳ್ಳೆಯ ಗೆಳೆಯನಲ್ಲ. ಇಲ್ಲದಿದ್ದರೆ, ಅವನು ಆಕರ್ಷಕ ವ್ಯಕ್ತಿ ಎಂದು ನಾನು ಭಾವಿಸುವುದಿಲ್ಲ” ಎಂದು ಅವರು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net