ಸಂಸ್ಕಾರ, ಸಂಸತಿ ಪಾಲನೆ ಬಹಳ ಮುಖ್ಯ; ಕೆ.ಎಸ್​. ಈಶ್ವರಪ್ಪ

24-RNR-07
Published on

ರಾಣೆಬೆನ್ನೂರ: ಧರ್ಮದ ಪರಿಪಾಲನೆ, ನಮ್ಮ ಸಂಸತಿ, ಆಚಾರ, ವಿಚಾರಗಳಿಂದ ಇಡೀ ಪ್ರಪಂಚ ಭಾರತವನ್ನು ಇಷ್ಟಪಡುತ್ತದೆ ಎಂದು ಮಾಜಿ ಸಚಿವ ಕೆ.ಎಸ್​. ಈಶ್ವರಪ್ಪ ಹೇಳಿದರು.

ತಾಲೂಕಿನ ಕೋಡಿಯಾಲ ಹೊಸಪೇಟೆ ಗ್ರಾಮದ ಪುಣ್ಯಕೋಟಿಮಠದ ಆವರಣದಲ್ಲಿ ಗುರುವಾರ ನೂತನ ತಪೋಮಂದಿರದ ಮೇಲ್ಬಾಗದಲ್ಲಿ ರಂಭಾಪುರಿ ಪೀಠದ ಲಿಂಗೈಕ್ಯ ಜಗದ್ಗುರು ವೀರಗಂಗಾಧರ ಭಗವತ್ಪಾದರ 36 ಅಡಿ ಎತ್ತರದ ಮಹಾಮೂತಿರ್ ಹಾಗೂ 1.13 ಕೋಟಿ ರೂ. ವೆಚ್ಚದಲ್ಲಿ ತಡಗೋಡೆ ನಿಮಾರ್ಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ರಾಜಕಾರಣಿಗಳು ಸ್ವಾರ್ಥ ಸಾಧನೆಗಾಗಿ ಜಾತಿ ವ್ಯವಸ್ಥೆಗೆ ಕಾರಣಕರ್ತರಾದರೆ ಸ್ವಾಮೀಜಿಗಳು ಜಾತಿ ತೊಲಗಿಸಿ ಎಲ್ಲರನ್ನೂ ಒಗ್ಗೂಡಿಸುವ ಕೆಲಸ ಮಾಡುತ್ತಿದ್ದಾರೆ. ಮಠ ಮಂದಿರಗಳು ಉತ್ತಮ ಸಮಾಜದ ನಿಮಾರ್ಣ ಮಾಡಲು ಶ್ರಮಿಸುತ್ತಿವೆ ಎಂದರು.

ಶ್ರೀಮಠದ ಬಾಲಯೋಗಿ ಜಗದೀಶ್ವರ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಅಖಿಲ ಭಾರತ ಶಿವಾಚಾರ್ಯ ಸಂಸ್ಥೆಯ ವಿಮಲ ರೇಣುಕ ವೀರಮುಕ್ತಿಮನಿ ಶಿವಾಚಾರ್ಯ ಸ್ವಾಮೀಜಿ, ನೆಗಳೂರು ಗುರುಶಾಂತೇಶ್ವರ ಸಂಸ್ಥಾನ ಹಿರೇಮಠ ಗುರುಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಕಂಡೇನಂದಿಹಳ್ಳಿ ರೇವಣಸಿದ್ದೇಶ್ವರ ಪುಣ್ಯಾಶ್ರಮದ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ನೂಲಿ ಚಂದಯ್ಯ ಗುರು ಪೀಠದ ವೃಷಭೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಗ್ರಾಪಂ ಅಧ್ಯಕ್ಷೆ ಗೀತಾ ಶಿವಮೊಗ್ಗ ಅಧ್ಯಕ್ಷತೆ ವಹಿಸಿದ್ದರು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಡಾ. ಎಚ್​. ವಿಶ್ವನಾಥ, ಕರ್ನಾಟಕ ರಾಜ್ಯ ಎಸ್​ ಎಸ್​ ಕೆ ಸಮಾಜದ ರಾಜ್ಯಾಧ್ಯಕ್ಷ ಡಾ. ಶಶಿಕುಮಾರ ಮೆಹರವಾಡೆ, ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯೆ ವಾಣಿ ಬಕ್ಕೇಶ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net