VIDEO| ಒತ್ತುವರಿ ತೆರವು ಕಾರ್ಯಾಚರಣೆಗೆ ಮುಂದಾದ ಪಾಲಿಕೆ; ಅಧಿಕಾರಿಯ ಮೇಲೆ ಚಟ್ನಿ ಎರಚಿ ಹಲ್ಲೆ

samosa vendor
Published on

ನೊಯ್ಡಾ: ಅತಿಕ್ರಮಣ ಮಾಡಿಕೊಂಡಿದ್ದ ಜಾಗವನ್ನು ತೆರವುಗೊಳಿಸಲು ಮುಂದಾದ ಅಧಿಕಾರಿ ಮೇಲೆ ಬೀದಿ ಬದಿ ವ್ಯಾಪಾರಿ ಒಬ್ಬ ವಿನೂತನವಾಗಿ ಹಲ್ಲೆ ನಡೆಸಲು ಮುಂದಾಗಿರುವ ಘಟನೆ ಉತ್ತರಪ್ರದೇಶದ ನೊಯ್ಡಾದಲ್ಲಿ ನಡೆದಿದೆ.

ಅತಿಕ್ರಮಣ ತೆರವು ಮಾಡಲು ಮುಂದಾಗಿದ್ದ ಪಾಲಿಕೆ ಅಧಿಕಾರಿ ಮೇಲೆ ಸಮೋಸ ಮಾರಾಟಗಾರ ಓರ್ವ ಹಲ್ಲೆಗೆ ಯತ್ನಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ತೆರವು ಕಾರ್ಯಾಚರಣೆ ವೇಳೆ ಕೃತ್ಯ

ನೊಯ್ಡಾ ಪಾಲಿಕೆ ವ್ಯಾಪ್ತಿಯಲ್ಲಿ ಮೆಟ್ರೋ ಕಾಮಗಾರಿ ನಡೆಯುತ್ತಿದ್ದು ಪಿಲ್ಲರ್​ ಸಂಖ್ಯೆ 51ರ ಬಳಿ ಅತಿಕ್ರಮಣದ ತೆರವಿಗೆ ಅಧಿಕಾರಿಗಳು ಮುಂದಾಗಿದ್ದಾರೆ.

ಈ ವೇಳೆ ಸಮೋಸ ವ್ಯಾಪಾರಿ ಗಾಡಿಗೆ ಅಧಿಕಾರಿಗಳ ಕಡೆಯಿಂದ ಹಾನಿಯಾಗಿದೆ ಎಂದು ತಿಳಿದು ಬಂದಿದ್ದು ಆತ ಒತ್ತುವರಿ ತೆರವನ್ನು ನಿಲ್ಲಿಸುವಂತೆ ವಿನಂತಿಸಿದ್ದಾನೆ.

ವಿಡಿಯೋ ವೈರಲ್​

ಇದಕ್ಕೊಪ್ಪದ ಅಧಿಕಾರಿಗಳು ಕಾರ್ಯಾಚರಣೆ ಮುಂದುವರೆಸಿದ್ದಾರೆ. ಈ ವೇಳೆ ಸಿಟ್ಟಿಗೆದ್ದ ವ್ಯಾಪಾರಿ ಏಕಾಏಕಿ ಅಧಿಕಾರಿಯ ಮೇಲೆ ಚಟ್ನಿಯನ್ನು ಚೆಲ್ಲಿ ಆಕ್ರೋಶವನ್ನು ಹೊರಹಾಕಿದ್ದಾನೆ.

ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು ಈ ಕುರಿತು ಪಾಲಿಕೆ ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net