''ಸಮ್ಮೋಹನುಡ'' ಸಾಂಗ್​​ಗೆ ಸೊಂಟ ಬಳುಕಿಸಿದ ನಟಿ ನೇಹಾ ಶೆಟ್ಟಿ, ಸಖತ್​​​ ಸ್ಟೆಪ್ಸ್​​​ಗೆ ನೆಟ್ಟಿಗರು ಫಿದಾ..!

mixs
Published on

ನೇಹಾ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅಭಿಮಾನಿಗಳಿಗೋಸ್ಕರ ಅವರು ಹೊಸ ಹೊಸ ಫೋಟೋ ಹಂಚಿಕೊಳ್ಳುತ್ತಾ ಇರುತ್ತಾರೆ. ಈಗ ಅವರು ತಮ್ಮದೇ ತೆಲುಗು ಚಿತ್ರ ರೂಲ್ಸ್​​ ರಂಜನ್​​​ನ ಹಾಡಿಗೆ ಹೆಜ್ಜೆ ಹಾಕಿ ಇನ್ಸ್​​​ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.


ನಿರ್ದೇಶಕ ರತ್ನಂ ಕೃಷ್ಣಂ ಚಿತ್ರಕ್ಕೆ ಆಕ್ಷನ್​ ಕಟ್​​ ಹೇಳಿದ್ದು, ಇದೀಗ 'ಸಮ್ಮೋಹನುಡ' ಸಾಂಗ್​ನ ಸ್ಟಪ್ಸ್​​​ ಸೋಶಿಯಲ್​ ಮೀಡಿಯಾದಲ್ಲಿ ಟ್ರೆಂಡಿಂಗ್​​ನಲ್ಲಿದೆ.
ನಟಿ ನೇಹಾ ಶೆಟ್ಟಿ ಅವರು ಕನ್ನಡದವರು. ‘ಮುಂಗಾರು ಮಳೆ 2’ ಚಿತ್ರದ ಮೂಲಕ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ಚಿತ್ರಗಳ ಆಯ್ಕೆಯಲ್ಲಿ ಅವರು ಸಖತ್ ಚ್ಯೂಸಿ ಆಗಿದ್ದಾರೆ. ಅಲ್ಲೊಂದು ಇಲ್ಲೊಂದು ಸಿನಿಮಾ ಒಪ್ಪಿಕೊಂಡು ನಟಿಸುತ್ತಾರೆ ನೇಹಾ.


ಅಭಿಮಾನಿಗಳಿಗೋಸ್ಕರ ನೇಹಾ ಹೊಸ ವಿಡಿಯೋಗಳನ್ನ ಹಂಚಿಕೊಳ್ಳುತ್ತಲೇ ಇರ್ತಾರೆ, ಅಂತೆಯೇ ಇದೀಗ ನೇಹಾ ಶೆಟ್ಟಿ ಇತ್ತೀಚೆಗಷ್ಟೆ ಹಂಚಿಕೊಂಡಿರುವ ವಿಡಿಯೋ 10 ಮಿಲಿಯನ್​​ಗೂ ಹೆಚ್ಚು ವೀಕ್ಷಣೆಯನ್ನ ಗಳಿಸಿದೆ.


ನೇಹಾ ಶೆಟ್ಟಿ ಅವರು ‘ಮುಂಗಾರು ಮಳೆ 2’ ಚಿತ್ರದಿಂದ ಸಖತ್ ಫೇಮಸ್ ಆದರು. ಈ ಸಿನಿಮಾ ರಿಲೀಸ್ ಆಗಿದ್ದು 2016ರಲ್ಲಿ. ಗಣೇಶ್ ನಟನೆಯ ಈ ಚಿತ್ರ ಮೆಚ್ಚುಗೆ ಪಡೆಯಿತು. ನೇಹಾ ಶೆಟ್ಟಿ ಅವರ ಜನಪ್ರಿಯತೆ ಕೂಡ ಹೆಚ್ಚಿತು. ಇದೀಗ ಸೆಪ್ಟೆಂಬರ್​ 2023ರಲ್ಲಿ ಚಿತ್ರ ಬಿಡುಗಡೆಯಾಗಲಿದ್ದು, ರಿಲೀಸ್​​ಗೂ ಮುನ್ನವೇ ಬಿಡುಗಡೆಯಾದ ಸಮ್ಮೋಹನುಡ ಸಾಂಗ್​​​ನ ನಟಿ ನೇಹಾ ಶೇಟ್ಟಿ ಸ್ಟೆಪ್ಸ್​​​ ನೆಟ್ಟಿಗರ ಮೆಚ್ಚುಗೆ ಗಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net