

ಬೆಳಗಾವಿ:ರಾಜ್ಯದಲ್ಲಿ ಅಕ್ಷರ ದಾಸೋಹ ಯೋಜನೆ ಯಶಸ್ವಿಗೆ ಸಚಿವರು, ಸರ್ಕಾರದಸಹಕಾರ ಅಗತ್ಯ ಎಂದು ಹುಕ್ಕೇರಿ ಹಿರೇಮಠಷ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಬೆಂಗಳೂರಿನ ವಿಧಾನಸೌಧದಲ್ಲಿ ಶನಿವಾರ ಶಿಕ್ಷಣ ಸಚಿವ ಮದು ಬಂಗಾರೆಪ್ಪ ಅವರೊಂದಿಗೆ ಜರುಗಿದ ರಾಜ್ಯ ಬಿಸಿಯೂಟ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟದ ಸಭೆ ಯಲ್ಲಿ ಮಾತನಾಡಿದರು.
ರಾಜ್ಯದಲ್ಲಿ 51 ಎನ್ ಜಿಓಗಳು ಅಕ್ಷರ ದಾಸೋಹ ಯೋಜನೆಗಳನ್ನು 19 ವರ್ಷಗಳಿಂದ ಅಚ್ಚುಕಟ್ಟಾಗಿ ನಿರ್ವಹಿಸುತ್ತಾ ಬಂದಿವೆ. ಎಲ್ಲ ಅಕ್ಷರ ದಾಸೋಹ ಯೋಜನೆಯನ್ನು ಯಶಸ್ವಿಗೊಳಿಸುವ ಸ್ವಯಂ ಸೇವಾ ಸಂಸ್ಥೆಗಳಿಗೆ ನಿರಂತರವಾಗಿ ಮಾರ್ಗದರ್ಶನ ಮಾಡಬೇಕು ಎಂದು ಸಚಿವರಿಗೆ ಸಲಹೆ ನೀಡಿದರು.
ಅಕ್ಷರ ದಾಸೋಹ ಯೋಜನೆಯ ರಾಜ್ಯ ಜಂಟಿ ನಿರ್ದೇಶಕ ಅನಿತಾ ನಾಜರೆ ಮಾತನಾಡಿ, ಸಭೆಯಲ್ಲಿ ಭಾಗವಹಿಸಿ ಒಟ್ಟು ರಾಜ್ಯದಲ್ಲಿ ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಸ್ವ ಸಹಾಯ ಗುಂಪುಗಳು ಅಕ್ಷರ ದಾಸೋಹ ಯೋಜನೆ ಅಚ್ಚುಕಟ್ಟಾಗಿ ನಿರ್ವಹಿಸುತ್ತಿವೆ. ಸ್ವಯಂ ಸೇವಾ ಸಂಸ್ಥೆಗಳು 9 ಲಕ್ಷ 50 ಸಾವಿರ ಮಕ್ಕಳಿಗೆ ಸೇರಿದಂತೆ ಒಟ್ಟಾರೆ 15 ಲಕ್ಷ ಮಕ್ಕಳಿಗೆ ಅಕ್ಷರ ದಾಸೋಹ ಯೋಜನೆ ಅಚ್ಚುಕಟ್ಟಾಗಿ ನಿರ್ವಹಿಸುತ್ತಿವೆ. ಸ್ವಯಂ ಸೇವಾ ಸಂಸ್ಥೆಗಳಿಗೆ ಒಂದು ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ ಎಂದು ತಿಳಿಸಿದರು.
ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ, ಕಾರ್ಯದರ್ಶಿ ಕೆ.ಭೀಮಾ ,ಜಂಟಿ ಕಾರ್ಯದರ್ಶಿ ಅಪ್ಪಾಜಿ ಗೌಡಾ ಹಾಗೂ ನಿರ್ದೇಶಕರವೀಂದ್ರ ಕುಮಾರ, ಖಜಾಂಚಿಗಳಾದ ಕಲ್ಲಪ್ಪ ಬೋರಣ್ಣವರ ಉಪಸ್ಥಿತರಿದ್ದರು.