ಕೊಡಗು: ಈಗ ಎಲ್ಲೆಡೆ ಅಂತರ್ಜಾತಿ, ಅಂತರ್ಧರ್ಮೀಯ ವಿವಾಹ ಕಾಮನ್. ಅಲ್ಲೊಂದು ಇಲ್ಲೊಂದು ಸಲಿಂಗಿಗಳ ಮದುವೆ ನಡೆಯುತ್ತಿರುವುದನ್ನೂ ಕಂಡಿದ್ದೇವೆ. ಇಂತಹದ್ದೇ ಮತ್ತೊಂದು ಸಲಿಂಗ ಜೋಡಿ ಅದ್ದೂರಿಯಾಗಿ ಅದೂ ಭಾರತೀಯ ಸಾಂಪ್ರದಾಯಿಕ ಶೈಲಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ. ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ನಡೆದ ಈ ಮದುವೆ ಕೊಡವ ಜನಾಂಗವನ್ನು ಕೆರಳಿಸಿದ್ದು, ಕೊಡವ ಸಮಾಜದಿಂದಲೇ ಮದುಮಗನನ್ನು ಹೊರಗಿಡಲು ಸಜ್ಜಾಗಿದೆ.
ಇಂತಹ ಕಠಿಣ ನಿರ್ಧಾರದತ್ತ ಕೊಡವರು ಚಿಂತಿಸಲು ಪ್ರಮುಖ ಕಾರಣ ಇದೆ. ಸಲಿಂಗ ಮದುಮಕ್ಕಳು ಅಮೆಕಾದವರೇ ಆಗಿದ್ದರೆ ಏನೂ ಆಗುತ್ತಿರಲಿಲ್ಲ. ಅವರಿಬ್ಬರೂ ಭಾರತ ಮೂಲದವರು. ಅಷ್ಟೇ ಅಲ್ಲ ಅದರೊಲ್ಲೊಬ್ಬ ಕನ್ನಡಿಗ. ಅವನೇ ಶರತ್ ಪೊನ್ನಪ್ಪ. ಮೂಲತಃ ಕೊಡಗಿನ ಕೊಡವ ಸಮುದಾಯದ ಈತ ಮನೆಯವರನ್ನೆಲ್ಲ ಬಿಟ್ಟು ವಿದೇಶದಲ್ಲಿ ನೆಲೆಸಿ ದಶಕ ಕಳೆದಿದೆ. ಅಲ್ಲಿ ಉತ್ತರ ಭಾರತ ಮೂಲದ ಸಂದೀಪ್ ದೋಸಾಂಜ್ ಎಂಬಾತನ ಪರಿಚಯವಾಗಿದ್ದು, ಇಬ್ಬರಿಗೂ ಲವ್ ಆಗಿದೆ. ಪ್ರೀತಿ ಬೆಳೆದು ಕೊನೆಗೆ ಸೆ.26ರಂದು ಮದುವೆಯನ್ನೂ ಮಾಡಿಕೊಂಡಿದ್ದಾರೆ. ಅದೂ ಕೊಡವ ಸಂಪ್ರದಾಯದ ಶೈಲಿಯಲ್ಲಿ! ಸಲಿಂಗ ಮದುವೆ ಸಮಾರಂಭದಲ್ಲಿ ಮದುಮಕ್ಕಳ ಸ್ನೇಹಿತರು ಭಾಗಿಯಾಗಿ ಶುಭ ಕೋರಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಇವರ ಮದುವೆ ವಿಡಿಯೋ, ಫೋಟೋ ವೈರಲ್ ಆಗಿದೆ.

ಕೊಡವ ಜನಾಂಗದಿಂದಲೇ ಆತನನ್ನು ಹೊರಗಿಡುವಂತೆ ಕೊಡವ ಸಮಾಜದ ಒಕ್ಕೂಟಕ್ಕೆ ಮನವಿ ಮಾಡಲಾಗುವುದು ಎಂದು ಎಂದು ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಕೆ.ಎಸ್. ದೇವಯ್ಯ ಈ ಬಗ್ಗೆ ಮಡಿಕೇರಿ ಕೊಡವ ಸಮಾಜದಿಂದ ತುರ್ತು ಸಭೆಯನ್ನೂ ನಡೆಸಲಾಗಿದೆ.
ಶರತ್ ಪೊನ್ನಪ್ಪ ಮೈಸೂರಿನ ರಾಮಕೃಷ್ಣಾಶ್ರಮದಲ್ಲಿ ವಿದ್ಯಾಭ್ಯಾಸ ಮಾಡಿದ್ದು, ಉನ್ನತ ಶಿಕ್ಷಣಕ್ಕಾಗಿ 20 ವರ್ಷಗಳ ಹಿಂದೆ ಅಮೆರಿಕಕ್ಕೆ ತೆರಳಿದ್ದರು. ಅವರ ತಂದೆ ಜಯಕುಮಾರ್ ಇಂಜಿನಿಯರ್ ಆಗಿ, ತಾಯಿ ನಳಿನಿ ವೈದ್ಯರಾಗಿ ದುಬೈನಲ್ಲಿ 30 ವರ್ಷ ಕಾರ್ಯ ನಿರ್ವಹಿಸಿದ್ದಾರೆ. ಬಳಿಕ ಅಲ್ಲಿಂದ ಬೆಂಗಳೂರಿಗೆ ಬಂದು ನೆಲೆಸಿದ್ದರು. ಪ್ರಸ್ತುತ ಮೈಸೂರಿನಲ್ಲಿ ನೆಲೆಸಿದ್ದಾರೆ.