

ಮುಂಬೈ: ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ(ಎನ್ಸಿಬಿ)ದ ಮುಂಬೈ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಇಂದು ದೆಹಲಿಗೆ ತೆರಳಿ, ತಮ್ಮ ಅಸಲಿ ಜಾತಿ ಪ್ರಮಾಣ ಪತ್ರಗಳನ್ನು ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗಕ್ಕೆ ಪರಿಶೀಲನೆಗಾಗಿ ಸಲ್ಲಿಸಿದ್ದಾರೆ.
ಇಂಡಿಯನ್ ರೆವಿನ್ಯೂ ಸರ್ವೀಸ್ ಅಧಿಕಾರಿಯಾಗಿ ಎಸ್ಸಿ ಮೀಸಲಾತಿ ಕೋಟಾದಡಿ ಕೆಲಸ ಪಡೆಯಲು ವಾಂಖೆಡೆ ಸುಳ್ಳು ಜಾತಿಪತ್ರಗಳನ್ನು ಸಲ್ಲಿಸಿದ್ದಾರೆ, ಅವರು ಮುಸಲ್ಮಾನರು ಎಂದು ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ತಾವು ದಲಿತರೆಂದು ಸಾಬೀತುಪಡಿಸಲು ವಾಂಖೆಡೆ ಮುಂದಾಗಿದ್ದಾರೆ.
ಮುಂಬೈನ ಕ್ರೂಸ್ ಶಿಪ್ ಮೇಲೆ ನಡೆಯುತ್ತಿದ್ದ ಡ್ರಗ್ಸ್ ಪಾರ್ಟಿ ಮೇಲೆ ದಾಳಿ ನಡೆಸಿ, ಬಾಲಿವುಡ್ ನಟ ಶಾರುಖ್ ಖಾನ್ರ ಪುತ್ರ ಆರ್ಯನ್ ಖಾನ್ರನ್ನು ಬಂಧಿಸಿದ ನಂತರದಲ್ಲಿ, ಆ ಪ್ರಕರಣದ ಮೇಲ್ವಿಚಾರಣೆ ವಹಿಸಿಕೊಂಡಿರುವ ಸಮೀರ್ ವಾಂಖೆಡೆ ವಿರುದ್ಧ ಹಲವು ಆರೋಪಗಳು ಕೇಳಿಬರುತ್ತಿವೆ. (ಏಜೆನ್ಸೀಸ್)