

ಬೆಂಗಳೂರು: ಸಮಂತಾ ನಿರಂತರವಾಗಿ ತಮ್ಮ ಅಭಿಮಾನಿಗಳಿಗೆ ಸರ್ ಪ್ರೈಸ್ ನೀಡುತ್ತಲೇ ಇರುತ್ತಾರೆ. ಅವರ ನಡವಳಿಕೆ, ಸ್ಟೈಲ್, ಸ್ಮೈಲ್ ಸಮಂತಾ ಅನುಯಾಯಿಗಳಿಗೂ ಬಹಳ ಇಷ್ಟ. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಸದ್ಯ ಸಮಂತಾ ಬಾಲಿಯ ರಮಣೀಯವಾದ ಕಡಲತೀರದಲ್ಲಿ ಕಾಣಿಸಿಕೊಂಡಿದ್ದು, ಫೋಟೋ ಶೂಟ್ ಮಾಡಿಸುತ್ತಲೇ ಇದ್ದಾರೆ. ಅವರ ಪೋಸ್ ಮತ್ತು ಲುಕ್ ಕೂಡ ಅಭಿಮಾನಿಗಳ ನಿದ್ದೆಗೆಡಿಸುತ್ತಿದೆ.
ಸದ್ಯ ಶೇರ್ ಮಾಡಿರುವ ಫೋಟೋದಲ್ಲಿ ಸಮಂತಾ ಬ್ಯಾಕ್ ಸೈಡ್ ನಿಂದ ಪೋಸ್ ನೀಡಿದ್ದು, ವಿಶೇಷವಾಗಿ ಸಮಂತಾ ಡ್ರೆಸ್ ಸ್ಟೈಲ್ ಎಲ್ಲರ ಗಮನಸೆಳೆದಿದೆ. ಏಕೆಂದರೆ ಅವರ ಈ ಸ್ಟೈಲ್ ಅವರನ್ನೂ ಅಸಾಧಾರಣವಾಗಿ ಆಕರ್ಷಕವಾಗಿ ಕಾಣುವಂತೆ ಮಾಡಿದೆ. ಸಮಂತಾ ಈ ಛಾಯಾಚಿತ್ರಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿವೆ.
ಸಮಂತಾ ಕೈಯ್ಯಲ್ಲಿ ಹಲವಾರು ಚಿತ್ರಗಳಿದ್ದು, ಸದ್ಯ ಅವರು ಫಿಟ್‌ನೆಸ್ ಹಾಗೂ ಆರೋಗ್ಯದ ಕಡೆ ಗಮಹರಿಸಿದ್ದಾರೆ. ಅವರ ವ್ಯಾಯಾಮದ ವಿಡಿಯೋಗಳೂ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಫಿಟ್ ಆಗಿರಲು ಬಯಸುವವರಿಗೆ ಸ್ಫೂರ್ತಿ ನೀಡದೆ ಇರಲಾರದು.