ನಾನು ಅಂತಹ ಸೆಕ್ಸಿ ಏನೂ ಇಲ್ಲ, ನಿರ್ದೇಶಕರು ನನಗೆ ಅಂತ ಪಾತ್ರಗಳನ್ನು ನೀಡಲ್ಲ: ಸಮಂತಾ| Samantha

ವಿಜಯವಾಣಿ (68)
Published on

Cinema: ಭಾರತೀಯ ಸಿನಿಮಾ ರಂಗದಲ್ಲಿ ಸ್ಟಾರ್ ನಾಯಕಿಯಾಗಿ ಗುರುತಿಸಿಕೊಂಡವರಲ್ಲಿ ನಟಿ ಸಮಂತಾ ರುತ್​ ಪ್ರಭು(Samantha). ಇತ್ತೀಚೆಗೆ ಕೆಲ ಸಮಯದಿಂದ ಚಿತ್ರರಂಗದಿಂದ ದೂರವಿದ್ದಾರೆ. ನಿನ್ನೆಯ(ಅ. 17) ಎನ್​ಡಿಟಿವಿ ಕಾನ್​ಕ್ಲೇವ್​ನಲ್ಲಿ ಭಾಗವಹಿಸಿ ಮಾತನಾಡಿರುವ ಅವರು ತಮ್ಮ ಕೆಲ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ಅದರಲ್ಲಿ ಸಮಂತಾ ತನ್ನ ದೇಹದ ಬಗ್ಗೆ ಮಾಡಿದ ಕಮೆಂಟ್ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ನಾನು ಅಂತಹ ಸೆಕ್ಸಿ ಎಂದು ಭಾವಿಸುವುದಿಲ್ಲ, ಅದಕ್ಕಾಗಿಯೇ ನಿರ್ದೇಶಕರು ತನಗೆ ಬೋಲ್ಡ್ ಪಾತ್ರಗಳನ್ನು ನೀಡುವುದಿಲ್ಲ ಎಂದು ಹೇಳಿದ್ದಾರೆ.

ಪುಷ್ಪ ಚಿತ್ರದ ಊ ಅಂತೀಯ... ಇಲ್ಲ ಊಹುಹು ಅಂತೀಯ ಐಟಂ ಸಾಂಗ್ ಮಾಡಿದ್ದರ ಬಗ್ಗೆ ಮಾತನಾಡಿರುವ ಅವರು, ನನ್ನನ್ನು ನಾನೇ ಪರಿಚಯಿಸಿಕೊಳ್ಳಲು ಆ ಸಾಂಗ್​ ನಲ್ಲಿ ಕಾಣಿಸಿಕೊಂಡೆ. ನಾನು ಅಂತಹ ಸೆಕ್ಸಿಯೇನು ಅಲ್ಲ. ಅದು ನಾನಾಗಿಯೇ ಹಾಕಿಕೊಂಡ ಸವಾಲಾಗಿತ್ತು. ನನ್ನ ಸೌಂದರ್ಯದ ಪರೀಕ್ಷೆಯೂ ಆಗಿತ್ತು. ಹೊಸದಾಗಿ ಏನನ್ನಾದರೂ ಮಾಡಬೇಕೆಂದು ಅಂದುಕೊಂಡಾಗ ಈ ಆಫರ್ ಬಂದಿತ್ತು. ಅದಕ್ಕೆ ಐಟಂ ಸಾಂಗ್ ಮಾಡಿದ್ರೆ ಹೇಗೆ ಇರುತ್ತೆ ನೋಡೋಣ ಅಂತ ಮಾಡಿದೆ ಎಂದಿದ್ದಾರೆ.

ಮುಂದುವರೆದು ತನ್ನ ಜೀವನದಲ್ಲಿ ಇಲ್ಲಿಯವರೆಗೆ ಎದುರಿಸಿದ ಹಿನ್ನಡೆಗಳನ್ನು ನೆನಪಿಸಿಕೊಳ್ಳುತ್ತಾ ಮುಂದುವರಿಯುತ್ತೇನೆ.  ವೃತ್ತಿಜೀವನದ ಆರಂಭದಿಂದ ಇಲ್ಲಿಯವರೆಗೆ ತಮ್ಮ ಜೀವನದಲ್ಲಿ ನಡೆದ ಎಲ್ಲವೂ ಸಾರ್ವಜನಿಕರಿಗೆ ತಿಳಿದಿರುವಂತೆ ನಡೆದಿದೆ. ಅನೇಕ ರೀತಿಯ ಎಲ್ಲಾ ಟ್ರೋಲ್‌ಗಳನ್ನು ಎದುರಿಸಿದ್ದೇನೆ. ಪ್ರತಿಯೊಬ್ಬರೂ ಕನಸು ಕಾಣಬೇಕು ಮತ್ತು ಒಳ್ಳೆಯ ಉದ್ದೇಶದೊಂದಿಗೆ ಇರಬೇಕು ಎಂದು ಹೇಳಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net