ಹೈದರಾಬಾದ್‌ನಲ್ಲಿ ನಡೆದ ಮುಂದಿನ ಸಿನಿಮಾ ''ದಿ ಮಾರ್ವೆಲ್ಸ್'' ಈವೆಂಟ್‌ನಲ್ಲಿ ಸಖತ್​​ ಹಾಟ್​​ ಆಗಿ ಕಾಣಿಸಿಕೊಂಡ ಸಮಂತಾ

samantha mixx
Published on

ಸಮಂತಾ ರುತ್ ಪ್ರಭು ಪ್ರಸ್ತುತ ಭಾರತೀಯ ಚಿತ್ರರಂಗದಲ್ಲಿ ಅತ್ಯಂತ ಜನಪ್ರಿಯ ನಟಿಯರಲ್ಲಿ ಒಬ್ಬರು. ಸಮಂತಾ ಇದೀಗ ತಮ್ಮ ಕೆಲಸದಿಂದ ಸ್ವಲ್ಪ ಬ್ರೇಕ್​​ ಪಡೆದು, ಟ್ರಿಪ್​​​​​​​ನಲ್ಲಿ ಬ್ಯುಸಿಯಾಗಿದ್ದಾರೆ.


ಇದೀಗ ಟ್ರಿಪ್​​ ಮುಗಿಸಿ ಹಿಂದಿರುಗಿದ ನಟಿ ಸಮಂತಾ ರುತ್​​​ ಪ್ರಭು, ಮುಂಬರುವ ಚಿತ್ರ ದಿ ಮಾರ್ವೆಲ್ಸ್‌ನ ಪ್ರಚಾರ ಕಾರ್ಯಕ್ರಮದಲ್ಲಿ ನಟಿ ಕಾಣಿಸಿಕೊಂಡಿದ್ದಾರೆ.


ಸಮಂತಾ ನೀಲಿ ಬಣ್ಣದ ಡೆನಿಮ್ ಜೀನ್ಸ್ ಮತ್ತು ಬಿಳಿ ಕ್ರಾಪ್ ಟಾಪ್‌ನೊಂದಿಗೆ ಕ್ಯಾಶುಯಲ್ ಕಪ್ಪು ಜಾಕೆಟ್ ಧರಿಸಿದ್ದು ಅದಕ್ಕೆ ಯೆಲ್ಲೋ ಕಲರ್​ ಬಣ್ಣದ ಕೂಲಿಂಗ್​​ ಗ್ಲಾಸ್​​​​​ನಲ್ಲಿ ಸಖತ್​​ ಕ್ಲಾಸಿಯಾಗಿ ಕಾಣಿಸಿಕೊಂಡಿದ್ದಾರೆ.


ಹೀಲ್ಸ್ ಮತ್ತು ಶೇಡ್‌ಗಳ ಜೊತೆಗೆ ಸಮಂತಾ ತಮ್ಮ ಲುಕನ್ನ ಮತ್ತಷ್ಟು ಮೋಹಕ ಗೊಳಿಸಿದ್ದಾರೆ.


ಖುಷಿ ಹಿರೋಯಿನ್​ ಸಮಂತಾ ತುಂಬಾನೇ ಖುಷಿಯಿಂದ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ​​

ಮಂತಾ ಸಿನಿಮಾದಿಂದ ಬ್ರೇಕ್ ತೆಗೆದುಕೊಂಡಿದ್ದು ಗೊತ್ತೇ ಇದೆ. ಮಯೋಸಿಟಿಸ್‌ನಿಂದಾಗಿ ಒಂದು ವರ್ಷ ಚಲನಚಿತ್ರಗಳಿಂದ ವಿರಾಮ ತೆಗೆದುಕೊಂಡ ನಟಿ ಅನಾರೋಗ್ಯದಿಂದ ಸಂಪೂರ್ಣ ಚೇತರಿಸಿಕೊಂಡ ನಂತರ ಸಿನಿಮಾದಲ್ಲಿ ಮುಂದುವರಿಯುತ್ತೇನೆ ಎಂದು ಇತ್ತೀಚೆಗೆ ತಿಳಿಸಿದ್ದರು. ಸಿನಿಮಾಗಳಿಂದ ಕೊಂಚ ದೂರ ಉಳಿದಿದ್ದರೂ ಸೋಷಿಯಲ್‌ ಮಿಡಿಯಾದಲ್ಲಿ ಫ್ಯಾನ್ಸ್‌ಗಳಿಗೆ ಹತ್ತಿರವಿರುವ ನಟಿ ಇದೀಗ ಹೊಸ ಲುಕ್‌ ಪೋಟೋಗಳನ್ನು ಶೇರ್‌ ಮಾಡಿದ್ದಾರೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net