ನಾನು ಸೋಲನ್ನು ಒಪ್ಪಿಕೊಳ್ಳುತ್ತೇನೆ.. ಆದರೆ ಅಲ್ಲಿಗೆ ಎಲ್ಲ ಮುಗಿಯುವುದಿಲ್ಲ ಎಂದಿದ್ದೇಕೆ ಸ್ಯಾಮ್​​​

Untitled-design-8
Published on

ಮುಂಬೈ​​: ಸೌತ್​ ಬ್ಯೂಟಿ ಸಮಂತಾ ರುತ್​ ಪ್ರಭು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಆ್ಯಕ್ಟೀವ್​ ಆಗಿರುತ್ತಾರೆ. ವೈಯಕ್ತಿಕ ಜೀವನ ಮತ್ತು ವೃತ್ತಿಜೀವನಕ್ಕೆ ಸಂಬಂಧಿಸಿದಂತೆ ಹಲವು ವಿಚಾರಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ ಎಂಬುದು ಎಲ್ಲರಿಗೂ ತಿಳಿದಿದೆ. ಪ್ರಸ್ತುತ ನಟಿ ಸಮಂತಾ ತಮ್ಮ ಮುಂಬರುವ ಸರಣಿ ಸಿಟಾಡೆಲ್: ಹನಿ ಬನ್ನಿ ವಿಚಾರವಾಗಿ ಬಿಸಿಯಿದ್ದಾರೆ.

ಇತ್ತೀಚಿನ ಸಂದರ್ಶನವೊಂದರಲ್ಲಿ ನಟಿ ಸಮಂತಾ ಅವರನ್ನು, ವೈಯಕ್ತಿಕ ಮತ್ತು ವೃತ್ತಿಜೀವನದಲ್ಲಿನ ಏರಿಳಿತಗಳನ್ನು ಹೇಗೆ ಎದುರಿಸುತ್ತೀರಿ. ನೀವು ಯಾವುದೇ ವಿಚಾರವನ್ನು ಬಿಟ್ಟುಕೊಡುವುದಿಲ್ಲವೆ ಎಂದು ಕೇಳಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಸ್ಯಾಮ್​​, ನಾನು ಸೋಲನ್ನು ಒಪ್ಪಿಕೊಂಡು ಬಿಟ್ಟುಕೊಡುತ್ತೇನೆ. ಬಿಟ್ಟುಕೊಡುವುದಿಲ್ಲ ಎಂದು ಹೇಳಲಾರೆ, ಆದರೆ ಕಥೆ ಇಲ್ಲಿಗೆ ಮುಗಿಯುವುದಿಲ್ಲ. ನಾನು ಮತ್ತೆ ಹಿಂತಿರುಗುತ್ತೇನೆ ಎಂದು ಹೇಳಿದರು.

ಅಲ್ಲದೆ ನಾನು ಈ ವಿಷಯವನ್ನು ನನ್ನ ಅಭಿಮಾನಿಗಳೊಂದಿಗೆ ಹಂಚಿಕೊಳ್ಳಬೇಕಿತ್ತು. ಅದೇನೆಂದರೆ ನಾನು ಗೌರವಿಸುವ ವ್ಯಕ್ತಿಯಿಂದ ಕೆಲವು ಅದ್ಭುತವಾದ ಮಾತುಗಳನ್ನು ಕೇಳಿದ್ದೇನೆ. ನಿಮಗೆ ತೊಂದರೆಯಾಗುವುದರಲ್ಲಿ ನಿಮ್ಮ ಭವಿಷ್ಯವನ್ನು ಕಂಡುಕೊಳ್ಳುತ್ತೀರಿ ಎಂದು ಅವರು ಹೇಳಿದರು. ಯಾವುದೇ ಸಮಸ್ಯೆ ಎದುರಾದರೂ ನಮಗೆ ಮುಂದಿನ ದಾರಿ ತಿಳಿಯುತ್ತದೆ ಎಂದು ತಿಳಿಸಿದರು.

ಬಾಲಿವುಡ್​​ ನಟ ವರುಣ್​ ಧವನ್​​ ಜತೆ ಸಮಂತಾ ರುತ್​​ ಪ್ರಭು ಸ್ಕ್ರೀನ್ ಶೇರ್ ಮಾಡಿರುವ ಸಿಟಾಡೆಲ್: ಹನಿ ಬನ್ನಿ ನವೆಂಬರ್ 7ರಂದು ಒಟಿಟಿಗೆ ಪದಾರ್ಪಣೆ ಮಾಡಲಿದೆ. ಸ್ವತಃ ವರುಣ್ ಧವನ್ ಮತ್ತು ಸಮಂತಾ ವಿಶೇಷ ಕಾರ್ಯಕ್ರಮದಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net