

ಕಳೆದ ಕೆಲವು ವರ್ಷಗಳಿಂದ ಕನ್ನಡ ಚಿತ್ರರಂಗ ಹೊಸ ಅಲೆಯನ್ನು ಎದುರಿಸುತ್ತಿದೆ. ಪ್ರೇಕ್ಷಕರು ಹೊಸ ಪರಿಕಲ್ಪನೆಗಳನ್ನು ಸ್ವೀಕರಿಸಲು ಸಿದ್ಧರಾಗಿದ್ದಾರೆ ಎನ್ನುವ ಕಾರಣಕ್ಕೆ ಚಲನಚಿತ್ರ ನಿರ್ಮಾಪಕರು ಚಲನಚಿತ್ರಗಳಲ್ಲಿ ಹೊಸ ಹೊಸ ವಿಷಯಗಳನ್ನು ತರಲು ಪ್ರಯತ್ನಿಸುತ್ತಿದ್ದಾರೆ.
ಐಟಂ ಹಾಡುಗಳು, ಐಟಂ ನೃತ್ಯ ಸಿನೆಮಾದ ಒಂದು ಪ್ರಮುಖ ಭಾಗವಾಗಿದೆ. ಐಟಂ ಹಾಡುಗಳು ಯಾವುದೇ ಚಲನಚಿತ್ರದ ಪ್ರಚಾರ ಮತ್ತು ಮಾರುಕಟ್ಟೆ ಪ್ರಚಾರದಲ್ಲಿ ಪ್ರಮುಖ ಪಾತ್ರವನ್ನ ವಹಿಸುತ್ತವೆ.
ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರ ಪಟ್ಟಿಯಲ್ಲಿ ಟಾಪ್ ನಲ್ಲಿದ್ದಾರೆ ದಕ್ಷಿಣ ಭಾರತದ ಈ ನಟಿ. ಇವರು ಒಂದೇ ಹಾಡಿಗೆ 5 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ. ಅಲ್ಲು ಅರ್ಜುನ್‌ನ ಪುಷ್ಪಾ ಸಿನೆಮಾ ಬ್ಲಾಕ್ ಬ್ಲಸ್ಟರ್ ಹಿಟ್ ಆಗಿತ್ತು. ಈ ಚಿತ್ರದ ಊ ಅಂಟವಾ ಮಾಮ ಚಿತ್ರದಲ್ಲಿನ ಅಭಿನಯಕ್ಕಾಗಿ ನಟಿ ಸಮಂತಾ ರುತ್ ಪ್ರಭು ಅವರು 5 ಕೋಟಿ ರೂಪಾಯಿಗಳ ಸಂಭಾವನೆ ಪಡೆದಿದ್ದರು ಎಂಬ ಅಂಶ ತಿಳಿದು ಬಂದಿದೆ.
ಚಿತ್ರದ ಈ ಹಾಡು 4 ನಿಮಿಷಗಳ ಒಳಗೆ ಇದೆ. 1 ನಿಮಿಷಕ್ಕೆ 1 ಕೋಟಿಗೂ ಹೆಚ್ಚು ಸಂಭಾವನೆ ಪಡೆದಂತಾಗಿದೆ. ಒಂದು ಹಾಡಿಗೆ ಈ ರೀತಿಯ ಗಳಿಕೆಯನ್ನು ಯಾವುದೇ ಭಾರತೀಯ ನಟಿ ಪಡೆದಿಲ್ಲ ಎನ್ನಲಾಗಿದೆ.
ಸದ್ಯ ನಟಿ ಸಮಂತಾ ಅಮೆರಿಕಾದಲ್ಲಿದ್ದಾರೆ. ಅವರೂಪದ ಕಾಯಿಲೆ ಮೈಯೋಸಿಟಿಸ್ ಗೆ (ಸ್ನಾಯು ಉರಿಯೂತ) ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಹಿಂದೆ ಕೂಡ ಅವರು ಚಿಕಿತ್ಸೆ ಪಡೆದು ಬಂದಿದ್ದರು.
ಐಟಂ ಸಾಂಗ್‌ಗಳಲ್ಲಿ ಕಾಣಿಸಿಕೊಳ್ಳಲು ಹೆಸರುವಾಸಿಯಾದ ಹಲವಾರು ನಟಿಯರಿದ್ದಾರೆ. ಮಲೈಕಾ ಅರೋರಾ ಬಹುಶಃ ಈ ಹೆಸರುಗಳಲ್ಲಿ ಅತ್ಯಂತ ಟಾಪ್‌ನಲ್ಲಿದ್ದಾರೆ. ನಟಿ ಪ್ರತಿ ಹಾಡಿಗೆ 50 ಲಕ್ಷದಿಂದ 1 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ.
ಆದರೆ ಸಮಂತಾ ಪುಷ್ಪಾ ಸಿನಿಮಾಗೆ ಪಡೆದು ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದಾರೆ.