'ಹೀಗೆ ನಕ್ಕು ಬಹಳ ದಿನಗಳೇ ಆಗಿತ್ತು'; ಅನುಷ್ಕಾ ಶೆಟ್ಟಿ ಸಿನಿಮಾ ಹೊಗಳಿದ ನಟಿ ಸಮಂತಾ

Untitled design - 2023-09-11T200355.736
Published on

ಆಂಧ್ರಪ್ರದೇಶ: ಕರಾವಳಿ ಬೆಡಗಿ, ಟಾಲಿವುಡ್​ ಬ್ಯೂಟಿ, ನಟಿ ಅನುಷ್ಕಾ ಶೆಟ್ಟಿ ನಟನೆಯ 'ಮಿಸ್​ ಶೆಟ್ಟಿ ಮಿಸ್ಟರ್​ ಪೋಲಿಶೆಟ್ಟಿ' ಚಿತ್ರ ಸೆಪ್ಟಂಬರ್ 07 ರಂದು ಬಿಡುಗಡೆಗೊಂಡಿದ್ದು, ಜಾಗತಿಕವಾಗಿ ಬಾಕ್ಸ್​ ಆಫೀಸ್​ನಲ್ಲಿ ಉತ್ತಮ ಗಳಿಕೆ ಕಾಣುತ್ತಿದೆ. ಈ ಮಧ್ಯೆ ಚಿತ್ರವನ್ನು ವೀಕ್ಷಿಸಿದ ನಟಿ ಸಮಂತಾ ರುತ್​ ಪ್ರಭು, ಅನುಷ್ಕಾ ಮತ್ತು ಚಿತ್ರತಂಡಕ್ಕೆ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

'ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ' ಚಿತ್ರ ವೀಕ್ಷಿಸಿದ ಸಮಂತಾ, "ಹೀಗೆ ನಕ್ಕು ಎಷ್ಟೋ ದಿನಗಳೇ ಆಗಿತ್ತು. ನವೀನ್ ಪೋಲಿಶೆಟ್ಟಿ ನಿಮಗೆ ಧನ್ಯವಾದಗಳು. ಸದಾ ಆಕರ್ಷಕವಾಗಿರುವ ಅನುಷ್ಕಾ ಶೆಟ್ಟಿ ಮತ್ತು ಇಡೀ ತಂಡಕ್ಕೆ ಅಭಿನಂದನೆಗಳು" ಎಂದು ಹ್ಯಾಶ್​ಟ್ಯಾಗ್​ ಬಳಸಿ ಚಿತ್ರಕ್ಕೆ ತಮ್ಮ ಇನ್​ಸ್ಟಾಗ್ರಾಮ್​ ಸ್ಟೋರಿಸ್​ನಲ್ಲಿ ಶುಭಕೋರಿದ್ದಾರೆ.

ಸಿನಿಮಾ ಬಗ್ಗೆ ಚಿತ್ರರಂಗದ ಪ್ರಮುಖ ಸ್ಟಾರ್​ಗಳಾದ ಎಸ್.ಎಸ್. ರಾಜಮೌಳಿ, ಪ್ರಿನ್ಸ್ ಮಹೇಶ್ ಬಾಬು, ರವಿತೇಜ, ಡಾರ್ಲಿಂಗ್ ಪ್ರಭಾಸ್​ ಮತ್ತಿತರರು ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ. ಸದ್ಯ ಅಮೆರಿಕಾ ಬಾಕ್ಸ್ ಆಫೀಸ್​ ಸೇರಿದಂತೆ ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಕಲೆಕ್ಷನ್​ ಮಾಡುತ್ತಿರುವ ಚಿತ್ರಕ್ಕೆ ಸಿನಿಪ್ರೇಕ್ಷಕರು ಮತ್ತು ಅನುಷ್ಕಾ ಅಭಿಮಾನಿಗಳಿಂದ ಪಾಸಿಟಿವ್​ ಪ್ರತಿಕ್ರಿಯೆ ವ್ಯಕ್ತವಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net