More

    ಏಷ್ಯಾಕಪ್​ 2023; ಪಾಕಿಸ್ತಾನ ವಿರುದ್ಧ ಶತಕ ಸಿಡಿಸಿ ಅಬ್ಬರಿಸಿದ ಕೊಹ್ಲಿ-ರಾಹುಲ್​​

    ಕೊಲಂಬೋ: ಪಾಕಿಸ್ತಾನ ವಿರುದ್ಧ ನಡೆಯುತ್ತಿರುವ ಹೈವೋಲ್ಟೇಜ್​ ಕ್ರಿಕೆಟ್​ ಪಂದ್ಯದಲ್ಲಿ ಭಾರತದ ಬ್ಯಾಟ್ಸ್​​ಮನ್​ಗಳಾದ ವಿರಾಟ್​ ಕೊಹ್ಲಿ ಹಾಗೂ ಕೆ.ಎಲ್​. ರಾಹುಲ್​ ಶತಕ ಸಿಡಿಸುವ ಮೂಲಕ ಅಬ್ಬರಿಸಿದ್ದಾರೆ. ಕೊಹ್ಲಿ-ರಾಹುಲ್​ ದ್ವಿಶತದ ಜೊತೆಯಾಟದ ಫಲವಾಗಿ ಭಾರತ ತಂಡವು ನಿಗದಿತ 50 ಓವರ್​ಗಳಲ್ಲಿ 2 ವಿಕೆಟ್​ ನಷ್ಟಕ್ಕೆ 356 ರನ್​ ಗಳಿಸಿದೆ.

    ಶ್ರೀಲಂಕಾದ ಕೊಲಂಬೋದಲ್ಲಿರುವ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಸೂಪರ್​-4 ಹಣಾಹಣಿಯಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ ಭಾರತ ಆರಂಭಿಕರಾದ ರೋಹಿತ್​ ಶರ್ಮಾ (56 ರನ್​, 49 ಎಸೆತ, 6 ಬೌಂಡರಿ, 4 ಸಿಕ್ಸರ್​), ಶುಭಮಾನ್​ ಗಿಲ್​ (58 ರನ್​, 52 ಎಸೆತ, 10 ಬೌಂಡರಿ) ಜೊತೆಯಾಟ ನೋಡುಗರ ಮನಕ್ಕೆ ಮುದ ನೀಡಿತ್ತು.

    ಇದನ್ನೂ ಓದಿ: ಮ್ಯಾಟ್ರಿಮೋನಿಯಲ್​ ಸೈಟ್​ಗೆ ಖದೀಮರ ಗಾಳ; ಕೋಟಿ ರೂಪಾಯಿ ಕಳೆದುಕೊಂಡ ಟೆಕ್ಕಿ ​

    ಭಾನುವಾರ ಅತ್ಯುತ್ತಮ ಆರಂಭ ಪಡೆದಿದ್ದ ಭಾರತ ತಂಡದ ಬ್ಯಾಟಿಂಗ್‌ಗೆ ಮಳೆ ಅಡ್ಡಿಯಾಗಿತ್ತು. 24.1 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು 147 ರನ್ ಗಳಿಸಿದ್ದಾಗ ಮಳೆ ಬಂದ ಕಾರಣ ಪಂದ್ಯವನ್ನು ಮೀಸಲು ದಿನಕ್ಕೆ ಮುಂದೂಡಲಾಗಿತ್ತು. ಸೋಮವಾರ ಕೂಡ ಮಳೆ ಬಂದ ಕಾರಣ ಪಂದ್ಯವನ್ನು ತಡವಾಗಿ ಆರಂಭಿಸಲಾಯಿತು.

    ಮೀಸಲು ದಿನದಂದು ಎಚ್ಚರಿಕೆಯಿಂದ ಆಟ ಆರಂಭಿಸಿದ ವಿರಾಟ್​ ಕೊಹ್ಲಿ ಹಾಗೂ ಕೆ.ಎಲ್​. ರಾಹುಲ್​ ನಂತರ ರನ್​ಗಳಿಕೆಗೆ ವೇಗ ನೀಡಿದರು. ವಿರಾಟ್ ಕೊಹ್ಲಿ 94 ಎಸೆತಗಳಲ್ಲಿ 9 ಬೌಂಡರಿ 3 ಸಿಕ್ಸರ್ ಸಹಿತ 122 ರನ್ ಗಳಿಸಿದರೆ, ರಾಹುಲ್ 106 ಎಸೆತಗಳಲ್ಲಿ 111 ರನ್ ಗಳಿಸಿದರು. ಅಂತಿಮವಾಗಿ ಭಾರತ ತಂಡ 50 ಓವರ್​ಗಳಲ್ಲಿ 2 ವಿಕೆಟ್​ ನಷ್ಟಕ್ಕೆ 356 ರನ್​ ದಾಖಲಿಸಿದೆ. ಪಾಕಿಸ್ತಾನ್ಕಕೆ 357 ರನ್​ಗಳ ಬೃಹತ್​​ ಗುರಿ ನೀಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts