More

    ತಂದೆಯ ಸ್ಮರಣಾರ್ಥ ಸ್ವಗ್ರಾಮದಲ್ಲಿ ಹೈಟೆಕ್​ ಗ್ರಂಥಾಲಯ ತೆರೆದ ನಟ ಪಂಕಜ್​ ತ್ರಿಪಾಠಿ

    ಪಟ್ನಾ: ತಮ್ಮ ಅಸಾಧಾರಣ ನಟನೆಯಿಂದಲ್ಲದೆ, ಸಾಮಾಜಿಕ ಕಾರ್ಯ ಹಾಗೂ ಮಾನವೀಯ ಗುಣಗಳಿಂದ ಚಿತ್ರರಂಗದಲ್ಲಿ ಹೆಚ್ಚು ಖ್ಯಾತಿ ಪಡೆದಿರುವ ನಟ ಎಂದರೆ ಅದು ಪಂಕಜ್​ ತ್ರಿಪಾಠಿ ಎಂದು ಹಲವರು ಹೇಳುತ್ತಾರೆ.

    ಇದೀಗ ನಟ ಪಂಕಜ್​ ತ್ರಿಪಾಠಿ ಇತ್ತೀಚಿಗೆ ಅಗಲಿದ ತಮ್ಮ ತಂದೆಯ ನೆನಪಾರ್ಥ ಹುಟ್ಟೂರಿನ ಸರ್ಕಾರಿ ಶಾಲೆಯಲ್ಲಿ ಅತ್ಯಾಧುನಿಕ ಗ್ರಂಥಾಲಯವನ್ನು ನಿರ್ಮಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

    Pankaj Tripathi

    ಇದನ್ನೂ ಓದಿ: ಬಿಜೆಪಿಯವರು ಸರ್ಕಾರ ಪತನವಾಗುತ್ತದೆ ಎಂದು ತಿರುಕನ ಕನಸು ಕಾಣುತ್ತಿದ್ದಾರೆ: ಬಿ.ಕೆ. ಹರಿಪ್ರಸಾದ್​

    ಬಿಹಾರದ ಗೋಪಾಲ್​ಗಂಜ್​ ಜಿಲ್ಲೆಯ ಬೆಲಸಂದ್​ ಗ್ರಾಮದವಾರದ ಪಂಕಜ್​ ತ್ರಿಪಾಠಿ ತಮ್ಮ ಹೆಳ್ಳಿಯಲ್ಲಿರುವ ಸರ್ಕಾರಿ ಹೈಯರ್​ ಸೆಕೆಂಡರಿ ಸ್ಕೂಲ್​ನಲ್ಲಿ ಅತ್ಯಾಧುನಿಕ ಗ್ರಂಥಾಲಯವನ್ನು ತೆರದು ಇತ್ತೀಚಿಗೆ ಲೋಕಾರ್ಪಣೆ ಮಾಡಿದ್ಧಾರೆ. ಕಳೆದ ಆಗಸ್ಟ್​ 21ರಂದು ಪಂಕಜ್​ ತ್ರಿಪಾಠಿ ಅವರ ತಂದೆ ಬನಾರಸ್​ ತಿವಾರಿ (99) ವಿಧಿವಶರಾಗಿದ್ದರು.

    ಈ ಕುರಿತು ಮಾತನಾಡಿರುವ ನಟ ಪಂಕಜ್​ ತ್ರಿಪಾಠಿ ನನ್ನ ತಂದೆಯ ಸ್ಮರಣಾರ್ಥ ಶಾಲಾ ಮಕ್ಕಳಿಗಾಗಿ ಈ ಗ್ರಂಥಾಲಯವನ್ನು ತೆರದಿದ್ದೇನೆ. ಈ ಗ್ರಂಥಾಲಯವು ಮಕ್ಕಳಲ್ಲಿ ಸಾಹಿತ್ಯ ಹಾಗೂ ಜ್ಞಾನವನ್ನು ಹೆಚ್ಚಿಸುವಲ್ಲಿ ಹೆಚ್ಚಿನ ಕೊಡುಗೆ ನೀಡುತ್ತದೆ. ನಮ್ಮ ಮುಂದಿನ ಪೀಳಿಗೆಗೆ ನಾವು ಕೊಡುವ ದೊಡ್ಡ ಕೊಡುಗೆ ಎಂದರೆ ಅದು ಶಿಕ್ಷಣ ಎಂದು ನಟ ಪಂಕಜ್​ ತ್ರಿಪಾಠಿ ಅಭಿಪ್ರಾಯಪಟ್ಟಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts