ಅಟ್ಲಿ 'ಬಿಗ್' ಬಜೆಟ್​ ಚಿತ್ರದಲ್ಲಿ ಸ್ಟಾರ್​ಗಳ ಸಮಾಗಮ! ಸ್ಟೈಲಿಶ್​ ಸ್ಟಾರ್​ಗೆ ನಟಿ ಸಮಂತಾ ನಾಯಕಿ? | Atlee Film

ವಿಜಯವಾಣಿ - 2025-09-25T185334.289
Published on

Atlee Film: ಬಾಲಿವುಡ್​​ ಬಾಕ್ಸ್ ಆಫೀಸ್​ನಲ್ಲಿ ಭರ್ಜರಿ ಗಳಿಕೆ ಕಂಡ 'ಜವಾನ್'​ ಚಿತ್ರವು, ನಿರ್ದೇಶಕ ಅಟ್ಲಿ ಕುಮಾರ್​ಗೆ ಅಪಾರ ಯಶಸ್ಸು ಮತ್ತು ಬ್ಲಾಕ್​ಬಸ್ಟರ್ ಹಿಟ್​ ನಿರ್ದೇಶಕರು ಎಂಬ​ ಜನಪ್ರಿಯತೆಯನ್ನು ತಂದುಕೊಟ್ಟಿತು. ಈ ಚಿತ್ರದ ಬೆನ್ನಲ್ಲೇ ಹಲವು ದೊಡ್ಡ ದೊಡ್ಡ ಅವಕಾಶಗಳನ್ನು ಗಿಟ್ಟಿಸಿಕೊಂಡ ಅಟ್ಲಿ, ತಮ್ಮ ಮುಂದಿನ ಬಿಗ್ ಬಜೆಟ್ ಚಿತ್ರವನ್ನು ಟಾಲಿವುಡ್​ನ ಸ್ಟೈಲಿಶ್ ಸ್ಟಾರ್ ಜತೆಗೆ ಮಾಡಲಿದ್ದೇನೆ ಎಂದು ಘೋಷಿಸಿದರು. ಈ ಚಿತ್ರಕ್ಕೆ ನಾಯಕಿಯಾಗಿ ಸಮಂತಾ ರುತು ಪ್ರಭು ಹೆಸರು ಮುನ್ನೆಲೆಗೆ ಬಂದಿರುವುದು ನಟಿಯ ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ.

ಸ್ಟಾರ್​ಗಳ ಸಮಾಗಮ

ವಿಜಯ್ ದೇವರಕೊಂಡ ಅಭಿನಯದ 'ಖುಷಿ' ಚಿತ್ರದಲ್ಲಿ ಕಾಣಿಸಿಕೊಂಡಿದ್ದೇ ಕೊನೆ. ಆ ನಂತರದಲ್ಲಿ ವಿದೇಶ ಪ್ರವಾಸ ಕೈಗೊಂಡ ಸಮಂತಾ, ಯಾವುದೇ ಹೊಸ ಪ್ರಾಜೆಕ್ಟ್​ಗಳಿಗೂ ಸಹಿ ಹಾಕಲಿಲ್ಲ. ಆದರೆ, ಈ ಮಧ್ಯೆ ಅಲ್ಲು ಅರ್ಜುನ್ ಮತ್ತು ಅಟ್ಲಿ ಕಾಂಬಿನೇಷನ್​ನಲ್ಲಿ ಮೂಡಿಬರಲಿರುವ 600 ಕೋಟಿ ರೂ. ಬಜೆಟ್​ ಚಿತ್ರಕ್ಕೆ ಸಮಂತಾ ಸಹಿ ಹಾಕಿದ್ದಾರೆ ಎಂಬ ಸುದ್ದಿಗಳು ಸದ್ಯ ಟಾಲಿವುಡ್​ ಅಂಗಳದಲ್ಲಿ ಸಖತ್ ಸದ್ದು ಮಾಡುತ್ತಿದೆ. ಇದೆಷ್ಟು ನಿಜ ಎಂಬುದು ಶೀಘ್ರವೇ ಅನಾವರಣಗೊಳ್ಳಬೇಕಿದೆ. ಇದರೊಟ್ಟಿಗೆ ಚಿತ್ರದಲ್ಲಿ ಸ್ಟಾರ್​ಗಳ ಸಮಾಗಮ ಇರಲಿದೆ ಎಂದು ಹೇಳಲಾಗಿದೆ.

600 ಕೋಟಿ ರೂ. ಸಿನಿಮಾ!

ಪ್ರಸ್ತುತ ಆರೋಗ್ಯ ಸಂಬಂಧಿತ ವಿಷಯಗಳಿಂದ ನಟನೆಯಿಂದ ದೂರ ಉಳಿದಿರುವ ಸಮಂತಾ, ಈ ಚಿತ್ರಕ್ಕೆ ಆಯ್ಕೆ ಆಗಿರುವುದು ಖಚಿತ ಎಂದಾದರೆ ಖಂಡಿತ ಇದು ನಟಿಯ ಅತ್ಯುತ್ತಮ ಕಮ್​ಬ್ಯಾಕ್​ ಆಗಲಿದೆ. ಸಿನಿ ಮೂಲಗಳ ಪ್ರಕಾರ, ಸಮಂತಾ ಜತೆಗೆ ನಿರ್ದೇಶಕರು ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಈ ಬಗ್ಗೆ ಚಿತ್ರತಂಡ ಅಥವಾ ಸ್ವತಃ ಅಟ್ಲಿ ಹೇಳುವುದೇನು? ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net