

ಹೈದರಾಬಾದ್: ಸದಾ ಒಂದಿಲ್ಲೊಂದು ವಿಚಾರವಾಗಿ ಸುದ್ದಿಯಲ್ಲಿರುವ ನಟಿ ಸಮಂತಾ ಬಗ್ಗೆ ಇದೀಗ ಮತ್ತೊಂದು ರಹಸ್ಯ ಬಯಲಾಗಿದೆ.
ಸಮಂತಾ ತನ್ನ 36 ನೇ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಅವರ ಕುರಿತ ಇಂತಹ ಸೀಕ್ರೇಟ್ ಒಂದು ಹೊರಬಿದ್ದಿದೆ. ಸಿದ್ಧಾರ್ಥ್ ಮತ್ತು ನಾಗಚೈತನ್ಯಾಗಿಂತ ಮೊದಲು ಸಮಂತಾ ಈ ನಟನನ್ನು ಪ್ರೀತಿಸುತ್ತಿದ್ದರಂತೆ ಎಂಬ ವಿಚಾರ ವೈರಲ್ ಆಗಿದೆ.
ಸಮಂತಾ ಸಿನಿಮಾ ರಂಗಕ್ಕೆ ಬರುವುದಕ್ಕೂ ಮುನ್ನವೇ ರಜನಿಕಾಂತ್ ಅವರನ್ನು ಪ್ರೀತಿಸುತ್ತಿದ್ದರಂತೆ. ಅವರನ್ನು ಮನಸಾರೆ ಪ್ರೀತಿಸುತ್ತಿದ್ದರಂತೆ. ಆ ನಟನ ಸ್ಟೈಲ್ ಗೆ ಸಮಂತಾ ಮನಸೋತಿದ್ದರಂತೆ. ಅವರನ್ನು ನೋಡಬೇಕು ಎಂಬ ಆಸೆಯನ್ನು ಮನದಲ್ಲಿ ತುಂಬಿಕೊಂಡಿದ್ದರಂತೆ ಎನ್ನಲಾಗಿದೆ.
ಸಿನಿರಂಗಕ್ಕೆ ಬಂದ ಬಳಿಕ ಸಮಂತಾ ರಜನಿಕಾಂತ್ ಜೊತೆ ನಟಿಸಬೇಕೆಂದು ಬಯಸಿದ್ದರು. ಆದರೆ ಇದುವರೆಗೂ ಸಮಂತಾ ಆಸೆ ಈಡೇರಿಲ್ಲ. ಮುಂದೆ ರಜನಿಕಾಂತ್ ಜೊತೆ ನಟಿಸುವ ಅವಕಾಶ ಸಿಗುತ್ತದೋ ಇಲ್ಲವೋ ಗೊತ್ತಿಲ್ಲ. ಸದ್ಯ ಸಮಂತಾ ಕೆಲ ದಿನಗಳ ಕಾಲ ಶೂಟಿಂಗ್ ನಿಂದ ದೂರ ಉಳಿದಿದ್ದಾರೆ.
ಸಮಂತಾ ಕೆಲವು ದಿನ ಸಿದ್ಧಾರ್ಥ್ ಜೊತೆ ಡೇಟಿಂಗ್ ಮಾಡಿದ್ದರು ಎನ್ನಲಾಗುತ್ತದೆ. ಆ ನಂತರ ನಾಗಚೈತನ್ಯ ಅವರನ್ನು ಪ್ರೀತಿಸಿ ಮದುವೆಯಾದರು. ನಾಗಚೈತನ್ಯ ಸಮಂತಾ ಮೊದಲ ಪತಿ. ಆದರೆ ಇವರಿಬ್ಬರು ವಿಚ್ಛೇದನ ಪಡೆದಿದ್ದಾರೆ.