VIDEO| ಹತ್ತು ವರ್ಷದ ಸಿನಿ ಪಯಣದಲ್ಲಿ ತಮ್ಮ ನೆಚ್ಚಿನ ಕ್ಷಣ ಯಾವುದೆಂದು ಬಹಿರಂಗ ಪಡಿಸಿದ ಸಮಂತಾ!

Samantha
Published on

ಹೈದರಾಬಾದ್​: ದಕ್ಷಿಣ ಭಾರತ ಚಿತ್ರರಂಗದ ಯಶಸ್ವಿ ನಟಿಯರಲ್ಲಿ ಒಬ್ಬರಾದ ಸಮಂತಾ ಅಕ್ಕಿನೇನಿ ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಬರೋಬ್ಬರಿ ಹತ್ತು ವರ್ಷಗಳನ್ನು ಪೂರೈಸಿದ್ದಾರೆ. ಪತಿ ನಾಗ ಚೈತನ್ಯ ಅಭಿನಯದ ತಲುಗಿನ "ಯೇ ಮಾಯಾ ಚೇಸಾವೆ" ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಸಮಂತಾ ಕೆಲವೇ ವರ್ಷಗಳಲ್ಲಿ ಬಹುಬೇಡಿಕೆ ನಟಿಯಾಗಿ ಬೆಳೆದರು.

ಹತ್ತು ವರ್ಷ ಪೂರೈಸಿದ ಖುಷಿಯಲ್ಲಿ ಸಮಂತಾ ಅವರಿಂದು ಅಭಿಮಾನಿಗಳೊಂದಿಗೆ ತಮ್ಮ ಸಿನಿಪಯಣದ ವಿವರವನ್ನು ಹಂಚಿಕೊಂಡರು. ಇದೇ ವೇಳೆ ಅಭಿಮಾನಿಯೊಬ್ಬ ಯೇ ಮಾಯಾ ಚೇಸಾವೆ ಚಿತ್ರದಲ್ಲಿ ನಾಗ ಚೈತನ್ಯರೊಂದಿಗೆ ಅದ್ಭುತವಾಗಿ ನಟಿಸಿದ ಸಮಂತಾರನ್ನು ಹೊಗಳಿದ್ದ ದಿಗ್ಗಜ ನಟ ಅಕ್ಕಿನೇನಿ ನಾಗೇಶ್ವರ ರಾವ್ ಅವರ ಹಳೇ ವಿಡಿಯೋವನ್ನು ಶೇರ್​ ಮಾಡಿದ್ದರು.​

ವಿಡಿಯೋದಲ್ಲಿ ಸಮಂತಾ ಕುರಿತು ಮಾತನಾಡಿದ್ದ ನಾಗೇಶ್ವರ ರಾವ್​, ನಟನೆಯ ವಿಚಾರದಲ್ಲಿ ಸಮಾಂತಾಗೆ 51 ಮತ್ತು ಮೊಮ್ಮಗ ನಾಗಚೈತನ್ಯನಿಗೆ 49 ಅಂಕಗಳನ್ನು ನೀಡುತ್ತೇನೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದೇ ವಿಡಿಯೋವನ್ನು ಶೇರ್ ಮಾಡಿಕೊಂಡಿರುವ ಸಮಂತಾ ಹತ್ತು ವರ್ಷದ ಸಿನಿ ಪಯಣದಲ್ಲಿ ನನ್ನ ನೆಚ್ಚಿನ ಕ್ಷಣವೆಂದು ಬರೆದುಕೊಂಡಿದ್ದಾರೆ.​

ಸಮಂತಾ ಅವರ ಕಟ್ಟಾ ಅಭಿಮಾನಿಗಳು ಫೋಟೋ ಮತ್ತು ವಿಡಿಯೋಗಳ ಮೂಲಕ ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ. ಇದೇ ವೇಳೆ ತಮ್ಮ ಮುಂದಿನ ಚಿತ್ರದ ಬಗ್ಗೆಯೂ ಅಭಿಮಾನಿಗಳಿಗೆ ಮಾಹಿತಿ ನೀಡಿದ್ದಾರೆ. ಸಮಂತಾ ಅವರ ಮುಂದಿನ ಚಿತ್ರವನ್ನು ಅಶ್ವಿನ್​ ಸರವಣನ್​ ನಿರ್ದೇಶನ ಮಾಡುತ್ತಿದ್ದಾರೆ. ಅಲ್ಲದೆ, ವೆಬ್​ ಸೀರಿಸ್​ನಲ್ಲಿ ಕಾಣಿಸಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net