'ಸೆಕ್ಸಿ ನನ್ನ ವಿಷಯವಲ್ಲ, ನಾನು ಸುಂದರವಾಗಿಲ್ಲ': ಹೀಗಂದಿದ್ದೇಕೆ ಸಮಂತಾ?

samantha
Published on

ಮುಂಬೈ: ನಟಿ ಸಮಂತಾ ಇತ್ತೀಚೆಗೆ ತಮ್ಮ ಸಿನಿಜರ್ನಿ ಬಗ್ಗೆ ಮನಬಿಚ್ಚಿ ಮಾತನಾಡಿದರು. ಅದರಲ್ಲೂ ವಿಶೇಷವಾಗಿ ಅಲ್ಲು ಅರ್ಜುನ್ ಅಭಿನಯದ ಪುಷ್ಪಾ ಚಿತ್ರದ ಚಾರ್ಟ್‌ಬಸ್ಟರ್ ' ಹೂಂ ಅಂಟಾವ' ಮತ್ತು 'ದಿ ಫ್ಯಾಮಿಲಿ ಮ್ಯಾನ್ 2' ಸರಣಿಯಲ್ಲಿನ ಅವರ ಸವಾಲಿನ ಪಾತ್ರಗಳ ಕುರಿತು ಹೇಳುವಾಗ ದೈಹಿಕವಾಗಿ ಸದೃಢಳಾಗಿರಲಿಲ್ಲ ಎಂದು ಹೇಳಿದ್ದಾರೆ.

ಪುಷ್ಪಾ ದಿ ರೈಸ್‌ನ "ಹೂ ಅಂಟಾವಾ ಮಾಮಾ" ಹಾಡು ಹಿಟ್ ಆಗಿತ್ತು. ಅದು ಬಿಡುಗಡೆಯಾದ ಕ್ಷಣದಿಂದಲೇ ಜನಮನ್ನಣೆ ಗಳಿಸಿತು. ಈ ಹಾಡಿನ ಚಿತ್ರೀಕರಣದ ಬಗ್ಗೆ ಸಮಂತಾ ಈಗ ಮಾತನಾಡಿದ್ದಾರೆ. ಮೊದಲ ಶಾಟ್‌ನಲ್ಲೇ ತಾನು ನಡುಗುತ್ತಿದ್ದೆ ಎಂದು ಹೇಳಿದ್ದಾರೆ. ಮತ್ತೆಂದೂ ನೃತ್ಯ ಮಾಡದಿರಲು ನಿರ್ಧರಿಸಿದ್ದೇನೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇಂಡಿಯಾ ಟುಡೆ ಕಾನ್ಕ್ಲೇವ್ 2024 ರಲ್ಲಿ ಸಮಂತಾ, ಹೊಸತನವಿರಲಿಎಂದು "ಹೂ ಅಂಟಾವ" ಗೆ ನೃತ್ಯ ಮಾಡಲು ನಿರ್ಧರಿಸಿದ್ದೆ. ವಿಭಿನ್ನ ಶೈಲಿಯ ಅಭಿನಯ ಮಾಡಬೇಕೆಂಬ ಖುಷಿಯಿಂದ ನೃತ್ಯ ಮಾಡಲು ಮುಂದಾದೆ. ಆದರೆ ನಾನು ನಾನು ಸಾಕಷ್ಟು ಉತ್ತಮ ಆರೋಗ್ಯಹೊಂದಿಲ್ಲ, ನಾನು ಸುಂದರವಾಗಿಲ್ಲ ಅಷ್ಟೇ ಅಲ್ಲ, ನಾನು ಇತರ ಹುಡುಗಿಯರಂತೆ ಕಾಣುತ್ತಿಲ್ಲ' ಕೀಳರಿಮೆ ಮತ್ತು ನೋವು ನನಗಾಯಿತು ಎಂದಿದ್ದಾರೆ.

ನನಗೆ ಇದು ದೊಡ್ಡ ಸವಾಲಾಗಿತ್ತು. ಇದು ವಾಸ್ತವವಾಗಿ "ಹೂ ಅಂಟಾವಾ" ನ ಮೊದಲ ಶಾಟ್ ನಲ್ಲೇ ನಾನು ಭಯದಿಂದ ನಡುಗುತ್ತಿದ್ದೆ. ಏಕೆಂದರೆ ಮಾದಕತೆ ನನ್ನ ವಿಷಯವಲ್ಲ. 'ಸೆಕ್ಸಿಯಾಗಿ ಕಾಣಿಸಿಕೊಳ್ಳುವುದೂ ಅಷ್ಟೇ. ನಾನು ಲೈಂಗಿಕತೆಯೊಂದಿಗೆ ಆರಾಮದಾಯಕವಾಗಿಲ್ಲ ಎಂದು ಒಪ್ಪಿಕೊಂಡರು.

ಒಬ್ಬ ನಟಿಯಾಗಿ ಎಲ್ಲಕ್ಕಿಂತ ಒಬ್ಬ ವ್ಯಕ್ತಿಯಾಗಿ ನಾನು ಹೇಗೆ ಬೆಳೆದಿರುವ ಹಾದಿಯೇ ಹಾಗಿದೆ. ಜೀವನ ಯಾವಾಗಲೂ ನನ್ನನ್ನು ಅತ್ಯಂತ ಅಹಿತಕರ, ಕ್ಷಮಿಸದ, ಅತ್ಯಂತ ಕಷ್ಟಕರ ಸಂದರ್ಭಗಳಲ್ಲಿ ಇರಿಸಿದೆ ಎಂದು ಖಚಿತಪಡಿಸಿಕೊಂಡಿದ್ದೇನೆ ಎಂದರು.

ನೀವು ಮತ್ತೆ ಡ್ಯಾನ್ಸ್ ಮಾಡುತ್ತೀರಾ ಎಂದು ಕೇಳಿದಾಗ, ಸಮಂತಾ, "ಇಲ್ಲ, ನಾನು ಇನ್ನು ಮುಂದೆ ಸವಾಲಿಗೆ ನನ್ನನ್ನು ನಾನು ಒಡ್ಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಸಮಂತಾ ಕೊನೆಯದಾಗಿ ವಿಜಯ್ ದೇವರಕೊಂಡ ಎದುರು ಕುಶಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಅವರು ಮುಂದಿನ ಸಿಟಾಡೆಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ, ವರುಣ್ ಧವನ್ ಸಹ ನಟಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net