More

    ಛತ್ತೀಸ್‌ಗಢದಲ್ಲಿ ಪೊಲೀಸರ ಎನ್‌ಕೌಂಟರ್.. ಇಬ್ಬರು ನಕ್ಸಲೀಯರ ಹತ್ಯೆ

    ರಾಯ್ಪುರ(ಛತ್ತೀಸ್‌ಗಢ): ರಾಜ್ಯದ ಬಿಜಾಪುರ ಪ್ರದೇಶದಲ್ಲಿ ಪೊಲೀಸರು ನಡೆಸಿದ ಎನ್‌ಕೌಂಟರ್‌ನಲ್ಲಿ ಇಬ್ಬರು ನಕ್ಸಲೀಯರು ಮೃತಪಟ್ಟಿದ್ದಾರೆ

    ಛತ್ತೀಸ್‌ಗಢ ಪೊಲೀಸರು ನಡೆಸಿದ ಎನ್‌ಕೌಂಟರ್‌ನಲ್ಲಿ ಬಿಜಾಪುರದ ಬೇದ್ರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಬ್ಬರು ನಕ್ಸಲೀಯರು ಹತರಾಗಿದ್ದಾರೆ. ಮತ್ತೊಂದೆಡೆ ಗಂಗಾಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶೋಧ ಕಾರ್ಯ ನಡೆದಿದ್ದು, ಇಬ್ಬರು ನಕ್ಸಲೀಯರನ್ನು ಬಂಧಿಸಿದ್ದಾರೆ.

    ಇದನ್ನೂ ಓದಿ: ಪಿಒಕೆಯ ಹಿಂದುಗಳು, ಮುಸ್ಲಿಮರು ಭಾರತೀಯರು: ಅಮಿತ್ ಶಾ

    ಬಿಜಾಪುರ ಎಸ್ಪಿ ಪ್ರಕಾರ, ಬೇದ್ರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪೊಲೀಸರು ಮತ್ತು ನಕ್ಸಲೀಯರ ನಡುವೆ ಎನ್‌ಕೌಂಟರ್ ನಡೆದಿದೆ. ಬಿಜಾಪುರದ ಗಂಗಲೂರಿನಲ್ಲಿ ಬಾಂಬ್ ಸ್ಫೋಟಕ್ಕೆ ಯೋಜನೆ ರೂಪಿಸುತ್ತಿದ್ದ ಹಾರ್ಡ್‌ಕೋರ್ ನಕ್ಸಲೀಯರನ್ನು ಪೊಲೀಸರು ಬಂಧಿಸಿದ್ದಾರೆ.

    ಸ್ಥಳದಲ್ಲಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಪತ್ತೆಯಾಗಿವೆ. ಪೊಲೀಸ್ ತಂಡವು ತೀವ್ರ ಶೋಧ ನಡೆಸಿದಾಗ ನಕ್ಸಲೀಯರು ಶಿಬಿರ ಸ್ಥಾಪಿಸಿರುವುದು ಕಂಡುಬಂದಿದೆ. ಕೂಡಲೇ ಪೊಲೀಸರು ಟೆಂಟ್​ಗಳನ್ನು ಧ್ವಂಸಗೊಳಿಸಿದ್ದಾರೆ. ಸ್ಥಳದಲ್ಲಿ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡು ಪತ್ತೆಯಾಗಿವೆ. ಈ ಪ್ರದೇಶದಲ್ಲಿ ನಕ್ಸಲೀಯರನ್ನು ಬಂಧಿಸಲು ಯೋಧರು ತೀವ್ರ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ.

    ಗಂಗಲೂರಿನಲ್ಲಿ ಇಬ್ಬರ ಬಂಧನ: ಗಂಗಾಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಶೋಧ ಕಾರ್ಯಾಚರಣೆ ವೇಳೆ ಯೋಧರು ಇಬ್ಬರು ನಕ್ಸಲೀಯರನ್ನು ಬಂಧಿಸಿದ್ದಾರೆ. ಬಂಧಿತರು ಐಇಡಿ ಸ್ಫೋಟದಲ್ಲಿ ಭಾಗಿಯಾಗಿದ್ದರು. ಇಬ್ಬರೂ ಮಾವೋವಾದಿ ಸೇನೆಯ ಸದಸ್ಯರಾಗಿದ್ದು, ಹಲವು ವರ್ಷಗಳಿಂದ ಗಂಗಾಳೂರು ಪ್ರದೇಶದಲ್ಲಿ ಸಕ್ರಿಯರಾಗಿದ್ದರು. ಪೊಲೀಸರ ಪ್ರಕಾರ, ಡಿಆರ್‌ಜಿ ಸಿಬ್ಬಂದಿ ಎಂದಿನಂತೆ ಹುಡುಕಾಟಕ್ಕೆ ತೆರಳಿದ್ದರು. ಹುಡುಕಾಟದ ಸಮಯದಲ್ಲಿ, ಕಾಡಿನಲ್ಲಿ ಅವರಿಬ್ಬರನ್ನು ಅನುಮಾನಾಸ್ಪದವಾಗಿ ನೋಡಿದ ನಂತರ, ಸೆರೆ ಹಿಡಿದಿದ್ದಾರೆ.

    ಅಸ್ಸಾಂನಲ್ಲಿ ಪಟ್ಟಿ ಮಾಡದ 1.5 ಲಕ್ಷ ಮುಸ್ಲಿಮರ ಕಥೆ ಏನು?” ಸಿಎಎ ಜಾರಿ ಕುರಿತು ಓವೈಸಿ ಪ್ರಶ್ನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts