

ರಿಪ್ಪನ್‌ಪೇಟೆ: ಜೀವನದಲ್ಲಿ ಸಂಯಮ ಧರ್ಮ ಪಾಲನೆಯಿಂದ ಜ್ಞಾನ ಪ್ರಾಪ್ತಿಯಾಗಿ ಸರ್ವರಲ್ಲೂ ಸಮಾನ ಭಾವ ಕಾಣಬಹುದು. ದ್ವೇಷ ಮರೆತು ಸ್ನೇಹ ಬಾಂಧವ್ಯ ವೃದ್ಧಿಯಾಗುತ್ತದೆ ಎಂದು ಹೊಂಬುಜ ಜೈನ ಮಠದ ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.
ಹೊಂಬುಜ ಜೈನ ಮಠದಲ್ಲಿ ಏರ್ಪಡಿಸಿದ್ದ ದಶಲಕ್ಷಣ ಪರ್ವ ಧಾರ್ಮಿಕ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಜೈನಾಚಾರ್ಯರ ಉಪದೇಶಗಳು ಮಾನವ ಕಲ್ಯಾಣದ ಮಹತ್ವ ಸಾರುತ್ತವೆ. ದಶಧರ್ಮಗಳ ಕುರಿತು ಮನನ ಮಾಡುವುದರಿಂದ ಇಂದ್ರಿಯಗಳ ನಿಗ್ರಹ ಸಾಧ್ಯ. ಸಂಯಮ ಧರ್ಮಪಾಲನೆಯು ತಪಸ್ಸಿಗೆ ಸಮಾನ ಎಂದು ತಿಳಿಸಿದರು.
ಆರ್ಯಿಕಾ ಶ್ರೀ 105 ಶಿವಮತಿ ಮಾತಾಜಿ ಧಾರ್ಮಿಕ ವಿಧಿಗಳ ಸಾನ್ನಿಧ್ಯ ವಹಿಸಿದ್ದರು.